ತನುವಿಡಿದಿಹುದು ಪ್ರಕೃತಿ, ಪ್ರಕೃತಿವಿಡಿದಿಹುದು
ಗೋಚರ
ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ತನುವಿಡಿದಿಹುದು ಪ್ರಕೃತಿ
ಪ್ರಕೃತಿವಿಡಿದಿಹುದು ಪ್ರಾಣ
ಪ್ರಾಣವಿಡಿದಿಹುದು ಜ್ಞಾನ
ಜ್ಞಾನವಿಡಿದಿಹುದು ಗುರು. ಇಂತೀ ಗುರುಲಿಂಗಜಂಗಮಪ್ರಸಾದವ ಸಗುಣವೆಂದು ಹಿಡಿದು ನಿರ್ಗುಣವೆಂದು ಕಂಡ ಸಂದೇಹಿ ವ್ರತಗೇಡಿಗಳನೇನೆಂಬೆ ಅಂತವರ ಮುಖವ ತೋರದಿರು ಕೂಡಲಸಂಗಮದೇವಾ.