ವಿಷಯಕ್ಕೆ ಹೋಗು

ತನುವಿಡಿದು ಕಾಬುದು ಗುರುವಿನ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya


ತನುವಿಡಿದು ಕಾಬುದು ಗುರುವಿನ ಭೇದ. ಮನವಿಡಿದು ಕಾಬುದು ಲಿಂಗದ ಭೇದ. ಜ್ಞಾನವಿಡಿದು ಕಾಬುದು ಜಂಗಮದ ಭೇದ. ಈ ತ್ರಿವಿಧವಿಡಿದು ಕಾಬುದು ಮಹಾ ಪ್ರಕಾಶ. ಆ ಮಹಾಪ್ರಕಾಶದೊಳಗೆ ಮಹವ ಕಂಡು ಮಹಕ್ಕೆ ಮಹನಾಗಿರ್ದೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.