ತನುವಿಡಿದು ನಡೆವ ತ್ರಿವಿಧ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತನುವಿಡಿದು ನಡೆವ ತ್ರಿವಿಧ ಸಂಪತ್ತುಗಳು ಭಕ್ತ ಮಹೇಶ್ವರ ಪ್ರಸಾದಿ; ಮನ ವಿಡಿದು ನಡೆವ ತ್ರಿವಿಧ ಸಂಪತ್ತುಗಳು ಪ್ರಾಣಲಿಂಗಿ ಶರಣ ಐಕ್ಯ. ಈ ಉಭಯದನುಭವವಿಡಿದು `ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ ಎಂಬ
ಈ ಭೇದವ ಭೇದಿಸಬಲ್ಲಡೆ ಹಿಂದಿಲ್ಲ ಮುಂದಿಲ್ಲ
ಇಹ ಪರ ಒಂದೆ
ಕರ್ಮ ನಾಸ್ತಿ ಭವಂ ನಾಸ್ತಿ. ಕೂಡಲಚೆನ್ನಸಂಗ ಸ್ವಾಯತವಾದವಂಗೆ ಇದು ಸಹಜ.