ವಿಷಯಕ್ಕೆ ಹೋಗು

ತನುವಿಡಿದ ಇಂದ್ರಿಯಸುಖ ಸಿರಿಯಂತೆ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1130-1160 AD
ಪ್ರಕಾಶಕರು: anubhava mantapa
ಮೂಲ: vachana saahitya

ತನುವಿಡಿದ ಇಂದ್ರಿಯಸುಖ ಸಿರಿಯಂತೆ ತೋರಿ ಅಡಗುತ್ತಲಿದೆ. ಗಗನದೊಡ್ಡಣೆಯಂತೆ ತನು ; ನೋಡ ನೋಡಲನುಮಾನವಿಲ್ಲದೆ ಹರಿದು ಹೋಗುತ್ತದೆ. ಇವಾದಿಯ ಮಾಣಿಸಿ
ನಿಮ್ಮ ಘನನೆನಹಿನೊಳಿರಿಸಾ ಚೆನ್ನಮಲ್ಲಿಕಾರ್ಜುನಯ್ಯಾ.