ತನುವಿನೊಳಗೆ ತನುವಾಗಿಪ್ಪಿರಯ್ಯ. ಮನದೊಳಗೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತನುವಿನೊಳಗೆ ತನುವಾಗಿಪ್ಪಿರಯ್ಯ. ಮನದೊಳಗೆ ಮನವಾಗಿಪ್ಪಿರಯ್ಯ. ಭಾವದೊಳಗೆ ಭಾವವಾಗಿಪ್ಪಿರಯ್ಯ. ಎನ್ನಂಗ ಪ್ರಾಣ ಮಹಾಲಿಂಗ ನೀವೆಯಾದ ಕಾರಣ ಎನ್ನಗಿನ್ನಾವ ಭಂಗವೂ ಇಲ್ಲ ನೋಡಾ. ಅದೇನು ಕಾರಣವೆಂದಡೆ: ಎನ್ನಂಗವು ನಿಮ್ಮೊಳಗಡಗಿ ಶುದ್ಧ ಪರಮಾತ್ಮನಾದೆನು ಕಾಣಾ. ಇನ್ನಾವ ಪ್ರಪಂಚೂ ಎನಗಿಲ್ಲ ನೀನು ನಿರ್ಲೇಪಕನಾದ ಕಾರಣ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.