ತನುವಿನೊಳಗೆ ಲಿಂಗ, ಲಿಂಗದೊಳಗೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತನುವಿನೊಳಗೆ ಲಿಂಗ
ಲಿಂಗದೊಳಗೆ ತನು. ಮನದೊಳಗೆ ಲಿಂಗ
ಲಿಂಗದೊಳಗೆ ಮನ. ಭಾವದೊಳಗೆ ಲಿಂಗ
ಲಿಂಗದೊಳಗೆ ಭಾವ. ಪ್ರಾಣದೊಳಗೆ ಲಿಂಗ
ಲಿಂಗದೊಳಗೆ ಪ್ರಾಣವಾಗಿರ್ದು
ಬೇರಿಟ್ಟು ನುಡಿವ ಭಿನ್ನಜ್ಞಾನಿಗಳಿಗೆ ಲಿಂಗವೆಲ್ಲಿಯದೊ?. ಲಿಂಗವಿಲ್ಲವಾಗಿ ಪ್ರಸಾದವಿಲ್ಲ; ಪ್ರಸಾದವಿಲ್ಲವಾಗಿ ಮುಕ್ತಿಯಿಲ್ಲ ನೋಡಾ. ಇದು ಕಾರಣ. ಭಿನ್ನಾಭಿನ್ನವನಳಿದು ನಿನ್ನೊಳಗಡಗಿದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.