ವಿಷಯಕ್ಕೆ ಹೋಗು

ತನುವೆಂಬ ಸಕಲ ಗುಡಿಯೊಳಗೆ,

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ತನುವೆಂಬ ಗುಡಿಯೊಳಗೆ
ಮನವೆಂಬ ಸಿಂಹಾಸನವನಿಕ್ಕಿ
ಘನಮಹಾಲಿಂಗವ ಮೂರ್ತಿಗೊಳಿಸಿ
ಸಕಲ ಕರಣಂಗಳಿಂದೆ ಪೂಜೋಪಚಾರವ ಶೃಂಗರಿಸಬಲ್ಲರೆ ಘನಕ್ಕೆ ಘನಮಹಿಮನೆಂಬೆನಯ್ಯಾ ಅಖಂಡೇಶ್ವರಾ.