ತನುವ ಗುರುವಿಂಗರ್ಪಿಸಿ, ಮನವ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತನುವ ಗುರುವಿಂಗರ್ಪಿಸಿ
ಮನವ ಲಿಂಗಕ್ಕರ್ಪಿಸಿ
ಭಾವವ ಜಂಗಮಕ್ಕರ್ಪಿಸಿ
ನಿಜವ ತೃಪ್ತಿಯಲರ್ಪಿಸಿ
ಘನವ ಅರಿವಿಂಗೆ ಅರ್ಪಿಸಿ
ಅರ್ಪಿತವೆ ಅನರ್ಪಿತವಾಗಿ
ಅನರ್ಪಿತವೆ ಅರ್ಪಿತವಾಗಿ ಅರ್ಪಿತ ಅನರ್ಪಿತಗಳಳಿದು ನಿತ್ಯಪ್ರಸಾದಿಯಾಗಿ ಪ್ರಸಾದದ ಹಾದಿಯನೆಲ್ಲರಿಗೆ ತೋರಿ ಮಹಾಪ್ರಸಾದದ ಬೆಳವಿಗೆಯ ಮಾಡಿದನು_ ಗುಹೇಶ್ವರನ ಶರಣ ಚನ್ನಬಸವಣ್ಣನು.