ತನುವ ತಾಗದ ಮುನ್ನ,
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ತನುವ ತಾಗದ ಮುನ್ನ
ಮನವ ತಾಗದ ಮುನ್ನ
ಅಪ್ಯಾಯನ ಬಂದು ಎಡೆಗೊಳ್ಳದ ಮುನ್ನ_ಅರ್ಪಿತವ ಮಾಡಬೇಕು. ಗುರುವಿನ ಕೈಯಲ್ಲಿ ಎಳತಟವಾಗದ ಮುನ್ನ_ಅರ್ಪಿತವ ಮಾಡಬೇಕು. ಎಡದ ಕೈಯಲ್ಲಿ ಕಿಚ್ಚು
ಬಲದ ಕೈಯಲ್ಲಿ ಹುಲ್ಲು
ಉರಿ ಹತ್ತಿತ್ತು ಗುಹೇಶ್ವರಾ ನಿಮ್ಮ ಪ್ರಸಾದಿಯ !