ತನುವ ನೀವು ನಿಮಗೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತನುವ ನಿಮಗೆ ಸಮರ್ಪಿಸಿಹೆನೆಂದಡೆ ತನುವಿಲ್ಲವಯ್ಯ ಎನಗೆ. ಅದೇನುಕಾರಣವೆಂದೊಡೆ
ನೀವು ಗುರುವಾಗಿ ಬಂದೆನ್ನ ತನುವನೊಳಕೊಂಡಿರ್ಪಿರಾಗಿ. ಮನವ ನಿಮಗರ್ಪಿಸಿಹೆನೆಂದಡೆ ಮನವಿಲ್ಲವಯ್ಯ ಎನಗೆ. ಅದೇನುಕಾರಣವೆಂದೊಡೆ
ನೀವು ಲಿಂಗವಾಗಿ ಬಂದೆನ್ನ ಮನವನೊಳಕೊಂಡಿರ್ಪಿರಾಗಿ. ಧನವ ನಿಮಗರ್ಪಿಸಿಹೆನೆಂದಡೆ ಧನವಿಲ್ಲವಯ್ಯ ಎನಗೆ. ಅದೇನುಕಾರಣವೆಂದೊಡೆ
ನೀವು ಜಂಗಮವಾಗಿ ಬಂದೆನ್ನ ಧನವನೊಳಕೊಂಡಿರ್ಪಿರಾಗಿ. ಅದು ಕಾರಣ ಎನ್ನ ತನುವೆ ಗುರು
ಮನವೇ ಲಿಂಗ
ಧನವೇ ಜಂಗಮವಾಯಿತ್ತಾಗಿ
ಅಖಂಡೇಶ್ವರಾ
ನಾ ನಿಮ್ಮೊಳಡಿಗಿರ್ದೆನಯ್ಯ.