ತನುವ ಮನವ ಕೊಟ್ಟು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತನುವ ಕೊಟ್ಟು ನಿಮ್ಮನೊಲಿಸಿಹೆನೆಂದಡೆ
ಆ ಭಾವವೆನಗೆ ತಿಳಿಯದು. ಮನವ ಕೊಟ್ಟು ನಿಮ್ಮನೊಲಿಸಿಹೆನೆಂದಡೆ
ಆ ಭಾವವೆನಗೆ ತಿಳಿಯದು. ಧನವ ಕೊಟ್ಟು ನಿಮ್ಮನೊಲಿಸಿಹೆನೆಂದಡೆ
ಆ ಭಾವವೆನಗೆ ತಿಳಿಯದು. ಸತಿ ಇದ್ದ ಮನೆಗೆ ಪತಿಯೊಲಿದು ಬರುವಂತೆ ನೀವೇ ಒಲಿದು ಬಂದು ಎನ್ನ ತನು ಮನ ಧನದಲ್ಲಿ ಭರಿತನಾಗಯ್ಯ ಅಖಂಡೇಶ್ವರಾ.