ತನುಸ್ವಾಯತವಾಗಿ ತನುವಿನ ಹಂಗಿನ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತನುಸ್ವಾಯತವಾಗಿ ತನುವಿನ ಹಂಗಿನ ಗುರುವೆನ್ನದೆ
ಗುರುಸ್ವಾಯತವಾಗಿ ಗುರುವಿನ ಹಂಗಿನ ತನುವೆನ್ನದೆ
ತನ್ನೊಳಗೆ ಗುರು ಐಕ್ಯವೆನ್ನದೆ
ಗುರುವಿನೊಳಗೆ ತಾನೈಕ್ಯವೆನ್ನದೆ
ಅವಿರಳ ಸಂಭಾವನೆಯಿಂದ ಸುಬುದ್ಧಿ ನಿಷೆ* ಅಣುಮಾತ್ರ ಓಸರಿಸದೆ
ರಸಮುಖಾರ್ಪಿತ ತೃಪ್ತನಾಗಿ
ಕಾಯಾಧಾರಲಿಂಗೋಪಜೀವಿಯಾಗಿ
ಸ್ಥಾವರದಂತೆ ನಿಬ್ಬೆರಗಾಗಿ
ತನು ಸೋಂಕಿ ತನು ನಷ್ಟವಾಗಿ ಒಂದು ಮುಖಮಾರ್ಗವಲ್ಲದೆ ಮತ್ತೊಂದ ಮೆಟ್ಟದಿರಬಲ್ಲಡಾತ ಮಹೇಶ್ವರನಯ್ಯಾ ಕೂಡಲಚೆನ್ನಸಂಗಯ್ಯಾ.