ತನು ಗುರುವಿನಲ್ಲಿ ಸವೆದು,
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ತನು ಗುರುವಿನಲ್ಲಿ ಸವೆದು
ಮನ ಲಿಂಗದಲ್ಲಿ ಸವೆದು
ಧನ ಜಂಗಮದಲ್ಲಿಸವೆದು
ತನುವೆ ಗುರುವಾಗಿ
ಮನವೆ ಲಿಂಗವಾಗಿ
ಧನವೆ ಜಂಗಮವಾಗಿ_ ಇಂತೀ ತ್ರಿವಿಧ ಐಕ್ಯವಾಗಿ ನಿಮ್ಮಲ್ಲಿ ನಿಂದನಾಗಿ; ಕಾಯವಿಡಿದು ಕರ್ಮವಿರಹಿತನಾದ
ಕೂಡಲಚೆನ್ನಸಂಗಮದೇವರಲ್ಲಿ ಸಂಗನಬಸವಣ್ಣನು ಉಪಮಾತೀತನಾಗಿರ್ದನು