ತನು ನಿನಗನ್ಯವೆಂದರಿಯದೆ, ತನು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತನು ನಿನಗನ್ಯವೆಂದರಿಯದೆ
ತನು ನಿನ್ನದೆಂಬೆ; ಮನ ನಿನಗನ್ಯವೆಂದರಿಯದೆ
ಮನ ನಿನ್ನದೆಂಬೆ; ಧನ ನಿನಗನ್ಯವೆಂದರಿಯದೆ
ಧನ ನಿನ್ನದೆಂಬೆ; ಸ್ಥೂಲ ಸೂಕ್ಷ ್ಮಕಾರಣವೆಂದೆಂಬ ತನುತ್ರಯ ನೀನಲ್ಲ; ಮನ ಮನನ ಮಾನನೀಯವೆಂದೆಂಬ ಮನತ್ರಯ ನೀನಲ್ಲ; ಧನ ಮಮಕಾರ ಸಂಗ್ರಹವೆಂಬ ಕಾರ್ಮಿಕತ್ರಯ ನೀನಲ್ಲ; ಇವು ಒಂದೂ ನೀನಲ್ಲ; ನೀನಾರೆಂದಡೆ: ನೀನು ಸಚ್ಚಿದಾನಂದಸ್ವರೂಪವಪ್ಪ ಶಿವತತ್ವವೇ ನೀನೆಂದು ತಿಳಿದು ನೋಡ
ಉಳಿದವೆಲ್ಲಾ ಹುಸಿಯೆನ್ನು
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.