ವಿಷಯಕ್ಕೆ ಹೋಗು

ತನು ನಿಮ್ಮದೆಂಬೆ, ಮನ

ವಿಕಿಸೋರ್ಸ್ದಿಂದ


ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ತನು ನಿಮ್ಮದೆಂಬೆ
ಮನ ನಿಮ್ಮದೆಂಬೆ
ಧನ ನಿಮ್ಮದೆಂಬೆ
ಮತ್ತೆಯೂ ವಂಚನೆ ಮಾಣದಯ್ಯಾ. ಲಿಂಗ ಜಂಗಮವೆಂಬೆ
ಜಂಗಮ ಲಿಂಗವೆಂಬೆ
ಮತ್ತೆಯೂ ವಂಚನೆ ಮಾಣದಯ್ಯಾ. ಒಡಲೊಡವೆ ಹಡೆದರ್ಥ ನಿಮ್ಮದೆಂದರಿಯದೆ ಕೆಮ್ಮನೆ ಕೆಟ್ಟೆ
ಕೂಡಲಸಂಗಮದೇವಾ. 309