ತನು ನಿಮ್ಮನಪ್ಪಿ ಮಹಾತನುವಾದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತನು ನಿಮ್ಮನಪ್ಪಿ ಮಹಾತನುವಾದ ಬಳಿಕ ತನುವೆಂಬುದು ಮತ್ತೆಲ್ಲಿಯದೊ ? ಮನ ನಿಮ್ಮನಪ್ಪಿ ಘನಮನವಾದ ಬಳಿಕ ಮನವೆಂಬುದು ಮತ್ತೆಲ್ಲಿಯದೊ ? ಭಾವ ನಿಮ್ಮನಪ್ಪಿ ನಿರ್ಭಾವವಾದ ಬಳಿಕ ಭಾವವೆಂಬುದು ಮತ್ತೆಲ್ಲಿಯದೊ ? ಇಂತೀ ತ್ರಿವಿಧವು ಲಿಂಗದಲ್ಲಿ ನಿರ್ಲೇಪವಾಗಿ ಮೈದೋರದಿರವ
ಕೂಡಲಚೆನ್ನಸಂಗಯ್ಯ ತಾನೆ ಬಲ್ಲ.