ತನು ಸೋಂಕಿ ತನು ನಷ್ಟವಾಯಿತ್ತು ಮನ ಸೋಂಕಿ ಮನ ನಷ್ಟವಾಯಿತ್ತು (ಧನ ಸೋಂಕಿ ಧನ ನಷ್ಟವಾಯಿತ್ತು) ಭಾವ ಸೋಂಕಿ ಭಾವ ನಷ್ಟವಾಯಿತ್ತು. ಇದು ಕಾರಣ ಕೂಡಲಚೆನ್ನಸಂಗಯ್ಯಾ ಲಿಂಗ ಸೋಂಕಿ ಶರಣನ ಸಂದು ನಷ್ಟವಾಯಿತ್ತು (ನಿಮ್ಮೊಳಗೇಕಾರ್ಥವಾಯಿತ್ತು).