ತನ್ನನಿಕ್ಕಿ ನಿಧಾನವ ಸಾಧಿಸಲರಿಯದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತನ್ನನಿಕ್ಕಿ ನಿಧಾನವ ಸಾಧಿಸಲರಿಯದ ಹಂದೆಗಳಿದ್ದೇನು ಫಲ ? ಕಾಡಹಂದಿ ನರಿಯ ಹಿಂಡು ತರುವಿಂಧ್ಯದಲ್ಲಿ ಕೂಡಿರವೆ ? ತಮ್ಮ ತಮ್ಮ ತಮಂಧ ಕತ್ತಲೆ ಹರಿಯದನ್ನಕ್ಕ ಇದಿರಿಗೆ ಬುದ್ಧಿಯ ಹೇಳಿ ಉದರವ ಹೊರೆವ ಚದುರರೆಲ್ಲರು ಹಿರಿಯರಪ್ಪರೆ ? ಲೋಗರ ಮಕ್ಕಳನಿಕ್ಕಿ ನೆಲೆಯ ನೋಡಿಹೆನೆಂದಡೆ
ಅದೆಂದು ಸಾಧ್ಯವಪ್ಪನಯ್ಯಾ ನಮ್ಮ ಕೂಡಲಚೆನ್ನಸಂಗಮದೇವರು ?