ವಿಷಯಕ್ಕೆ ಹೋಗು

ತನ್ನ ತಾನರಿದೆನೆಂಬವನ ಮುನ್ನ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ತನ್ನ
ತಾನರಿದೆನೆಂಬವನ
ಮುನ್ನ
ನುಂಗಿತ್ತು
ಮಾಯೆ.
ನಿನ್ನೊಳಗೆ
ಅರಿವು
ಭಿನ್ನವಾಗಿರುತ್ತಿರಲು
ಮುನ್ನವೆ
ನೀನು
ದೂರಸ್ಥ
ನೋಡಾ
!
ಭಿನ್ನವಿಲ್ಲದ
ಅಜ್ಞಾನವ
ಭಿನ್ನವ
ಮಾಡಬಲ್ಲಡೆ
ತನ್ನಲ್ಲಿ
ಅರಿವು
ನಿಜವಪ್ಪುದು
ಗುಹೇಶ್ವರಾ