Library-logo-blue-outline.png
View-refresh.svg
Transclusion_Status_Detection_Tool

ತನ್ನ ತಾನರಿದ ಶಿವಯೋಗಿಯ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ತನ್ನ ತಾನರಿದ ಶಿವಯೋಗಿಯ ಪರಿಯೆಂತೆಂದಡೆ: ದೇಹಿ ತಾನಲ್ಲ
ಜಾತಿಜಾತಕಂಗಳು ತಾನಲ್ಲ
ಪ್ರಾಣ ತಾನಲ್ಲ
ದಶವಾಯುಗಳು ತಾನಲ್ಲ
ಇಂದ್ರಿಯಂಗಳು ತಾನಲ್ಲ
ಗುಣತ್ರಯಂಗಳು ತಾನಲ್ಲ ಅಂತಃಕರಣ ಚತುಷ್ಟಯಂಗಳು ತಾನಲ್ಲವೆಂದರಿದು ವಿವರಿಸಿ ಕಳೆದು
ತನ್ನ ನಿಜಸ್ವರೂಪ ತಾನೇ ನೋಡಿ ಕಂಡು; ಜೀವಾತ್ಮ ಅಂತರಾತ್ಮ ಪರಮಾತ್ಮ ಮತ್ತಂ ಭೂತಾತ್ಮ ಶುದ್ಧಾತ್ಮ ನಿರ್ಮಲಾತ್ಮ ಸತ್ಯಾತ್ಮ ಮಹಾತ್ಮವೆಂಬ ಅಷ್ಟ ಆತ್ಮೇಶ್ವರರು ಏಕಾರ್ಥವೆಂದರಿದು
ಅಲ್ಲಿಯೆ ತಲ್ಲೀಯವಾಗಿಹುದೀಗ ಯೋಗ ಕಾಣಾ
ಕೂಡಲಚೆನ್ನಸಂಗಮದೇವಾ.