Library-logo-blue-outline.png
View-refresh.svg
Transclusion_Status_Detection_Tool

ತನ್ನ ಲಿಂಗಕ್ಕೆ ಮಾಡಿದ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ತನ್ನ ಲಿಂಗಕ್ಕೆ ಮಾಡಿದ ಬೋನವ ಜಂಗಮಕ್ಕೆ ನೀಡಬಾರದೆಂಬುದನೇಕ ನರಕ ! ತನ್ನ ಲಿಂಗವಾರೋಗಿಸಿ ಮಿಕ್ಕ ಪ್ರಸಾದವ ಜಂಗಮಕ್ಕೆ ನೀಡುವುದನೇಕ ನಾಯಕನರಕ. ಆ ಜಂಗಮವಾರೋಗಿಸಿ ಮಿಕ್ಕ ಪ್ರಸಾದ
ಎನ್ನ ಲಿಂಗಕ್ಕೆ ಬೋನವಾಯಿತ್ತು
ಎನಗೆ ಪ್ರಸಾದವಾಯಿತ್ತು. ಕೂಡಲಚೆನ್ನಸಂಗಯ್ಯಾ ಎನಗೆಯೂ ನಿನಗೆಯೂ ಜಂಗಮಪ್ರಸಾದ ಪ್ರಾಣವಾಯಿತ್ತು.