ತನ್ನ ಲಿಂಗದಲ್ಲಿ ಪದಾರ್ಥದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತನ್ನ ಲಿಂಗದಲ್ಲಿ ಪದಾರ್ಥದ ಪೂರ್ವಾಶ್ರಯ ಹೋಗದೆಂದು ಅನುಸರಿಸಿ ಜಂಗಮದ ಒಕ್ಕುದ ಮಿಕ್ಕುದ ಕೊಂಬೆನೆಂಬವನೊಬ್ಬ ಠಕ್ಕಭವಿ. ಆ ಚರಲಿಂಗ ಜಂಗಮ ಹೋದ ಬಳಿಕ್ಕ ತನ್ನ ಸ್ವಯಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರಮಂ ಮಾಡಿ
ಆ ಲಿಂಗಪ್ರಸಾದವಲ್ಲದೆ ಒಲ್ಲೆನೆಂಬವನೊಬ್ಬ ಠಕ್ಕಭವಿ. ಅವಂಗೆ ಲಿಂಗವಿಲ್ಲ
ಲಿಂಗಕ್ಕೆ ತಾನಿಲ್ಲ
ಆವ ಆಚಾರಭ್ರಷ್ಟ. ಅಂಥವರ ಕಂಡಡೆ ಇರಿದಿರಿದು ಸುಡುವನಲ್ಲದೆ
ಮೆರೆವನಲ್ಲ ಕೂಡಲಚೆನ್ನಸಂಗಮದೇವ.