Library-logo-blue-outline.png
View-refresh.svg
Transclusion_Status_Detection_Tool

ತನ್ನ ಸತ್ಕಾಯದಿಂದೊದಗಿದ ವಿಶುದ್ಧಪದಾರ್ಥವ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ತನ್ನ ಸತ್ಕಾಯದಿಂದೊದಗಿದ ವಿಶುದ್ಧಪದಾರ್ಥವ ಲಿಂಗಕ್ಕಿತ್ತು ಆ ಲಿಂಗಪ್ರಸಾದವ ತಾನು ಬೋಗಿಸಬೇಕಲ್ಲದೆ ಇದು ಸ್ಥೂಲ ಇದು ಸೂಕ್ಷ್ಮವೆಂದರಿಯದೆ ಅಂಗಸುಖಕ್ಕಾಗಿ ಲಿಂಗವನು ಮರೆತು
ಕಂಡ ಕಂಡ ಪದಾರ್ಥವನುಂಡಡೆ ಅದು ಕೆಂಡದಂತಾಗುವುದಯ್ಯಾ. ಈ ಮರ್ಮವನರಿಯದನ್ನಕ್ಕ ಕೂಡಲಚೆನ್ನಸಂಗಯ್ಯನಲ್ಲಿ ಸದ್ಭಕ್ತರೆಂತಪ್ಪರಯ್ಯಾ