ತನ್ನ ಹೃದಯಕ್ಕೆ ಲಿಂಗದ ಹೃದಯ
ತನ್ನ ಶ್ರೋತ್ರಕ್ಕೆ ಲಿಂಗದ ಶ್ರೋತ್ರ
ತನ್ನ ನೇತ್ರಕ್ಕೆ ಲಿಂಗದ ನೇತ್ರ
ತನ್ನ ತ್ವಕ್ಕಿಗೆ ಲಿಂಗದ ತ್ವಕ್ಕು
ತನ್ನ ನಾಸಿಕಕ್ಕೆ ಲಿಂಗದ ನಾಸಿಕ
ತನ್ನ ಜಿಹ್ವೆಗೆ ಲಿಂಗದ ಜಿಹ್ವೆ ಪ್ರತಿರೂಪಕವಾಗಿರ್ದ ಬಳಿಕ
ಅಂಗವಿದೆಂದು
ಲಿಂಗವಿದೆಂದು
ಬೇರಿಟ್ಟು ನುಡಿಯಲುಂಟೇ ಅಯ್ಯ?. ಶರಣನೇ ಲಿಂಗ; ಲಿಂಗವೇ ಶರಣ. ಇವೆರಡಕ್ಕೂ ಬ್ಥಿನ್ನವೆಲ್ಲಿಯದೋ ಒಂದೆಯಾದ ವಸ್ತುವಿಂಗೆ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.