ವಿಷಯಕ್ಕೆ ಹೋಗು

ತಮ್ಮ ತಮ್ಮ ಭಾವಕ್ಕೆ,

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ತಮ್ಮ ತಮ್ಮ ಭಾವಕ್ಕೆ
ಉಡಿಯಲ್ಲಿ ಕಟ್ಟಿಕೊಂಡ(ಬ?)ರು. ತಮ್ಮ ತಮ್ಮ ಭಾವಕ್ಕೆ
ಕೊರಳಲ್ಲಿ ಕಟ್ಟಿಕೊಂಡ(ಬ?)ರು
ನಾನೆನ್ನ ಭಾವಕ್ಕೆ ಪೂಜಿಸ ಹೋದಡೆ
ಕೈತಪ್ಪಿ ಮನದಲ್ಲಿ ಸಿಲುಕಿತ್ತೆನ್ನ ಲಿಂಗ. ಸಾಧಕನಲ್ಲ ಭೇದಕನಲ್ಲ_ಗುಹೇಶ್ವರಲ್ಲಯ್ಯ ತಾನೆ ಬಲ್ಲ.