Library-logo-blue-outline.png
View-refresh.svg
Transclusion_Status_Detection_Tool

ತಮ್ಮ ತಾವರಿದೆಹೆವೆಂಬರು, ತಮ್ಮ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ತಮ್ಮ ತಾವರಿದೆಹೆವೆಂಬರು
ತಮ್ಮ ತಾವರಿವ ಪರಿಯೆಂತೋ ? ಎಲ್ಲರನೂ ಕಾಬ ಕಣ್ಣು ತನ್ನ ಕಾಬುದೆ ? ತನ್ನರಿವಿಂದ ತಾ ಭಿನ್ನವಾಗಲರಿವನೆ ? ತನ್ನ ತಾನಿದಿರಿಟ್ಟು ಕಾಬಾತನೊಬ್ಬನುಂಟೆ ? ತನ್ನ ತಾನರಿವ ಪರಿಯ ಗುಹೇಶ್ವರಾ ನಿಮ್ಮ ಶರಣ ಬಲ್ಲ.