ತಾಪತ್ರಯವಿಲ್ಲದವ, ವ್ಯಾಪ್ತಿಯನರಿದವ, ಇರುಳು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತಾಪತ್ರಯವಿಲ್ಲದವ
ವ್ಯಾಪ್ತಿಯನರಿದವ
ಇರುಳು ಹಗಲೆಂದು ಮನದಲ್ಲಿ ತಾಳದವ
ತಾಳೋಷ್ಠಸಂಪುಟಕ್ಕೆ ಬಾರದವ
ಭವಚ್ಛೇದ ಕಾಮಭಂಜನ ಕಾಯವಿಲ್ಲದವ
ಕಾಲನ ಗೆದ್ದವ
ಮಾಯವ ತೊರೆದವ
ಮತ್ತೊಂದನರಿಯದವ ನಮ್ಮ ಕೂಡಚೆನ್ನಸಂಗನನರಿದು ಸುಖಿಯಾದವ.