Library-logo-blue-outline.png
View-refresh.svg
Transclusion_Status_Detection_Tool

ತಾಳು ಬೋಳು ಕಟ್ಟಿಗೆ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ತಾಳು
ಬೋಳು
ಕಟ್ಟಿಗೆ
ಕರ್ಪರವೆಂದೆಂಬರು.
ತಾಳು
ಬೋಳು
ಕಟ್ಟಿಗೆ
ಕರ್ಪರವಾವುದೆಂದರಿಯರು.
ತಾಳು:ತನುಗುಣಾದಿಗಳ
ಪ್ರಾಣಗುಣಾದಿಗಳ
ತಾಳಿಕೊಂಡಿರಬಲ್ಲಡೆ
ತಾಳು.
ಬೋಳು:ಭ್ರಮೆಯಿಲ್ಲದೆ
ಬಂಧನವಿಲ್ಲದೆ
ಸಂಸಾರ
ವಿಷಯಗಳ
ಬೋಳೈಸಿ
ತನ್ನಿಚ್ಛೆಗೆ
ನಿಲಿಸಿಕೊಂಡಿರಬಲ್ಲಡೆ
ಬೋಳು.
ಕಟ್ಟಿಗೆ:ಕರಣಾದಿ
ಗುಣಂಗಳ
ನಿಲಿಸಿಕೊಂಡಿರಬಲ್ಲಡೆ
ಕಟ್ಟಿಗೆ.
ಕರ್ಪರ:ಪರವ
ಅರಿದಿರಬಲ್ಲಡೆ
ಕರ್ಪರ_
ಇಂತೀ
ಚತುರ್ವಿಧವನರಿದವರ
ಪರಮಾರಾಧ್ಯರೆಂಬೆ
ಕಾಣಾ
ಗುಹೇಶ್ವರಾ.