ತಿಳಿದುಪ್ಪ ಗಟ್ಟಿದುಪ್ಪಕ್ಕೆ ಭೇದವುಂಟೆ?

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತಿಳಿದುಪ್ಪ ಗಟ್ಟಿದುಪ್ಪಕ್ಕೆ ಭೇದವುಂಟೆ? ದೀಪಕ್ಕೆ ದೀಪ್ತಿಗೆ ಭಿನ್ನವುಂಟೆ ? ಆತ್ಮಕ್ಕೆಯೂ ದೇಹಕ್ಕೆಯೂ ಸಂದುಂಟೆ ? ಕ್ಷೀರಕ್ಕೆಯೂ ಸ್ವಾದಕ್ಕೆಯೂ ಭೇದವುಂಟೆ ? ಇದು ಕಾರಣ
ಸಾಕಾರವೆ ನಿರಾಕಾರವೆಂದರಿದು; ಅಂಗಲಿಂಗಸಂಬಂಧವಿಲ್ಲದವರ ಸಂಗ ಭಂಗವೆಂದು ಕೂಡಲಚೆನ್ನಸಂಗಯ್ಯನ ಶರಣರು ಮೆಚ್ಚರಯ್ಯಾ ಪ್ರಭುವೆ