ತುಂಡ್ ಹೈಕ್ಳ ಸಹವಾಸ
ಚಿತ್ರ: ಡ್ರಾಮಾ
ಸಂಗೀತ : ಹರಿಕೃಷ್ನ
ಗಾಯನ : ವಿಜಯ್ ಪ್ರಕಾಶ್
ಸಾಹಿತ್ಯ : ಯೋಗರಾಜ್ ಭಟ್
ತುಂಡ್ ಹೈಕ್ಳ ಸಹವಾಸ ಮೂರ್ ಹೊತ್ತು ಉಪವಾಸ
ಒಬ್ಬ ಟೀಕೆ ಎಂಕ್ಟೇಸ ಒಪ್ಪ ಕೋಟ್ಲೆ ಸತೀಸ
ಹೆಂಗೊ ಮೊನ್ನೆ ತಾನೆ ಪಿಯುಸಿ ಮುಗ್ಸವ್ರೆ
ಊರ್ ಹಾಳು ಮಾಡೋದಕ್ಕೆ ರೀಸರ್ಚು ನಡ್ಸವ್ರೆ
ಹೆಂಗೆ ಹಾಡಿದರು ಬಾಯಿ ನೋಯ್ತವೆ
ಇನ್ನೂ ಕೇಳಿದರೆ ಕಿವಿ ಹೋಯ್ತವೆ
ತುಂಡ್ ಹೈಕ್ಳ ಸಹವಾಸ ಮೂರ್ ಹೊತ್ತು ಉಪವಾಸ
ಒಬ್ಬ ಟೀಕೆ ಎಂಕ್ಟೇಸ ಒಪ್ಪ ಕೋಟ್ಲೆ ಸತೀಸ
ಇವ್ರು ಕಾಲು ಇಟ್ಟ್ರು ಅನ್ದ್ರೆ ಅದೇ ರೋಡು, ಈ ನನ್ ಮಕ್ಕ್ಳೀಗೆ ಬಯೊ ಡಾಟ ಅಂದ್ರೆ ಕೇಡು
ಯೌವನದ ಹೊಳೆಯಲ್ಲಿ ಹಳೆ ಬೋಟು, ಬೋಟಲ್ಲಿ ನೂರ ಎಂಟು ಹಳೆ ತೂತು
ಬೆಳಗಾಗೆದ್ದು ಬೆಟ್ಟಕ್ಕೆ, ದಾರ ಕಟ್ಟಿ ಎಳೆದವ್ರೆ
ಓಡುತಿದ್ದ ಕಾಲಕ್ಕೆ ಕಾಲು ಅಡ್ಡ ಇಟ್ಟವ್ರೆ
ಅನಾಸಿನ್ನು ತಿಂದ್ರೂ ತಲೆ ನೋಯ್ತದೆ
ಚಿಂತೇಲಿ ಊಟ ಬಿಟ್ಟ್ರೆ ಗ್ಯಾಸು ಆಯ್ತದೆ
ಅನಾಸಿನ್ನು ತಿಂದ್ರೂ ತಲೆ ನೋಯ್ತದೆ
ಚಿಂತೇಲಿ ಊಟ ಬಿಟ್ಟ್ರೆ ಗ್ಯಾಸು ಆಯ್ತದೆ
ತುಂಡ್ ಹೈಕ್ಳ ಸಹವಾಸ ಮೂರ್ ಹೊತ್ತು ಉಪವಾಸ
ಒಬ್ಬ ಟೀಕೆ ಎಂಕ್ಟೇಸ ಒಪ್ಪ ಕೋಟ್ಲೆ ಸತೀಸ
ದೊಡ್ಡೋವ್ರು ಕೊಡೋದಿಲ್ಲ ಪರ್ಮಿಸನ್ನು, ಕಾಂಪೌಂಡು ಹಾರುತಿದೆ ಜನರೇಸನ್ನು
ಬೇಕಿಲ್ಲ ಪ್ರಳಯಕ್ಕೆ ಕಾಯೋದಿನ್ನು, ತುಂಡ್ ಹೈಕ್ಳು ಮುಳಗಿಸ್ತಾರೆ ಊರನ್ನು
ಮೀಸೆ ಗೀಸೆ ಬಂದಾಗ, ಹಗಲು ರಾತ್ರಿ ರಾದ್ಧಾಂತ
ಬಿಳಿ ಗಡ್ಡ ಬಂದಾಗ, ಹೇಳಿದ್ದೇಲ್ಲ ವೇದಾಂತ
ಪ್ರತೀ ಎಂಡಿನಲ್ಲು ಸ್ಟಾರ್ಟು ಇರ್ತವೆ
ಪರಮಾತ್ಮ ಮಾಡೋ ಕೆಲಸ ಎಲ್ಲ ಇಂತವೆ
ಪ್ರತೀ ಎಂಡಿನಲ್ಲು ಸ್ಟಾರ್ಟು ಇರ್ತವೆ
ಪರಮಾತ್ಮ ಮಾಡೋ ಕೆಲಸ ಎಲ್ಲ ಇಂತವೆ
ತುಂಡ್ ಹೈಕ್ಳ ಸಹವಾಸ ಮೂರ್ ಹೊತ್ತು ಉಪವಾಸ
ಒಬ್ಬ ಟೀಕೆ ಎಂಕ್ಟೇಸ ಒಪ್ಪ ಕೋಟ್ಲೆ ಸತೀಸ