ತೆಗೆದು ವಾಯುವ ನೇಣ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತೆಗೆದು ವಾಯುವ ನೇಣ ಗಗನದಲ್ಲಿ ಗಂಟಿಕ್ಕಿ
ತ್ರಿಜಗಾಧಿಪತಿಯ ಕೋಣೆಯಲ್ಲಿ ಹಸುವಿದ್ದು
ಕರುವ ಕೊಂದು ಕಂದಲನೊಡೆದು
ಕರೆಯಬಲ್ಲವಂಗಲ್ಲದೆ
ಹಯನಾಗದು ನೋಡಾ ! ಹಯನೆ ಬರಡು
ಬರಡೆ ಹಯನು ! ಅರುಹಿರಿಯರ ಬಾಯ
ಕರು ಒದೆದು ಹೋಯಿತ್ತು ! ಎರಡಿಲ್ಲದ ನಿರಾಳ ಗುಹೇಶ್ವರ.