ತೆರಹಿಲ್ಲದ ಘನವು ಭಿನ್ನವಾಯಿತ್ತೆಂದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತೆರಹಿಲ್ಲದ ಘನವು ಭಿನ್ನವಾಯಿತ್ತೆಂದು ತನುವಿನ ಮೇಲೆ ಶಸ್ತ್ರವನಿಕ್ಕಿಕೊಂಬ ಶಿವದ್ರೋಹಿಯ ಮುಖವ ನೋಡಲಾಗದು
ಕಲುಕುಟಿಗ ಮುಟ್ಟಿ ಚಕ್ಕೇಳುವಾಗ
ಪ್ರಾಣಲಿಂಗ ಭಿನ್ನವಾಯಿತ್ತೆ ? ಭಾವಲಿಂಗ ಭಿನ್ನವಾಯಿತ್ತೆ ? ಪೂಜಾಲಿಂಗ ಭಿನ್ನವಾಯಿತ್ತಲ್ಲದೆ
ಇಂತೀ ನಿರಾಳದ ನೆಲೆಯ ಸೋಂಕನಾರೂ ಅರಿಯರು. ಇಷ್ಟಲಿಂಗ ಬಿದ್ದಿತ್ತೆಂಬ ಕಷ್ಟವ ನೋಡಾ ಕೂಡಲಚೆನ್ನಸಂಗಮದೇವಾ.