ತೆರಹಿಲ್ಲ ತೆರಹಿಲ್ಲ ತೆರಹಿಲ್ಲವಯ್ಯಾ
ಗೋಚರ
ಲೇಖಕರು: ಷಣ್ಮುಖಸ್ವಾಮಿ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ತೆರಹಿಲ್ಲ ತೆರಹಿಲ್ಲವಯ್ಯಾ ನಡೆನೋಟಕ್ಕೆ. ತೆರೆಹಿಲ್ಲ ತೆರಹಿಲ್ಲವಯ್ಯಾ ನುಡಿಗಡಣಕ್ಕೆ. ತೆರಹಿಲ್ಲ ತೆರಹಿಲ್ಲವಯ್ಯಾ ಮನಜ್ಞಾನಕ್ಕೆ. ತೆರಹಿಲ್ಲ ತೆರಹಿಲ್ಲವಯ್ಯಾ ಭಾವಭಾವಕ್ಕೆ. ಅಖಂಡೇಶ್ವರಾ
ಎಲ್ಲವು ನೀವೆ ಆದಿರಿ. ನಿಮ್ಮೊಳಗೆ ನೀವೆ ಸುಳಿಯುತಿರ್ಪಿರಿ. ನಿಮ್ಮ ನೀವೆ ಅರಿಯುತಿರ್ಪಿರಯ್ಯಾ.