ತೆರೆಯ ಮರೆಯ ಕುರುಹೆಂಬುದೇನೊ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತೆರೆಯ ಮರೆಯ ಕುರುಹೆಂಬುದೇನೊ ಒಳಗೆ ಲಿಂಗವನನುವಿಡಿದ ಬಳಿಕ ? ಪೂಜಿಸುವ ಭಕ್ತನಾರೊ ? ಪೂಜಿಸಿಕೊಂಬ ದೇವನಾರೊ ? ಮುಂದು ಹಿಂದು
ಹಿಂದು ಮುಂದಾಯಿತ್ತು ಗುಹೇಶ್ವರಾ ನಾನು ನೀನು
ನೀನು ನಾನಾದ ಬಳಿಕ ಮತ್ತೇನುಂಟು ಹೇಳಾ ?