ತೇನವಿನಾ ತೇನವಿನಾ

ವಿಕಿಸೋರ್ಸ್ ಇಂದ
Jump to navigation Jump to search

ತೇನವಿನಾ ತೇನವಿನಾ
ತೃಣಮಪಿ ನ ಚಲತಿ
ತೇನವಿನಾ
ಮಮತೆಯ ಬಿಡು ಹೇ
ಮೂಢಮನ

ರವಿಗಿಲ್ಲದ ಭಯ ಶಶಿಗಿಲ್ಲದ ಭಯ
ತಾರಾ ನವಹಕೆ ಇರದ ಭಯ
ನಿನಗೇತಕೆ ಬಿಡು ಅಣು ಶೃದ್ಧೆಯನಿಡು
ನಿನ್ನನೆ ನೈವೇದ್ಯವ ನೀಡು

ಎಲ್ಲೆಲ್ಲಿಯು ಕೈ ಎಲ್ಲೆಲ್ಲಿಯು ಕಾಲ್
ಎಲ್ಲೆಲ್ಲಿಯು ಕಣ್ ತಾನಾದ
ಸತ್ ಚಿತ್ ಶಕ್ತಿಯ ಆನಂದವಿರಲ್
ಬಿಡು ಏತಕೆ ನಿನಗೆ ವಿಷಾದಕವಿ: ಕುವೆಂಪು
ಸಂಗೀತ: ಶಿವಮೊಗ್ಗ ಸುಬ್ಬಣ್ಣ
ಧ್ವನಿ ಸುರುಳಿ: ಕುವೆಂಪು ಗೀತೆಗಳು
ಗಾಯಕ: ಶಿವಮೊಗ್ಗ ಸುಬ್ಬಣ್ಣ