ತೈಲ ಬತ್ತಿ ಜ್ಯೋತಿಯ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತೈಲ ಬತ್ತಿ ಜ್ಯೋತಿಯ ಮುಟ್ಟಿ ಜ್ಯೋತಿಯಪ್ಪುದು ನೋಡಾ. ಸದ್ಭಕ್ತಿ ಸ್ನೇಹ ಮೋಹದಿಂದ ಲಿಂಗಸ್ಫರುಶನವ ಮಾಡಿ
ಆ ಭಕ್ತನ ದೇಹ ಮನ ಕರಣಂಗಳೆಲ್ಲವು ಲಿಂಗವಾದವು ನೋಡಾ. ಲಿಂಗವ ಮುಟ್ಟಿನ ಮತ್ತೊಂದೇನುವ ಮುಟ್ಟದ ನಿರ್ಮೋಹಿಯ ಮಾಹೇಶ್ವರನೆಂಬೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.