ತೊತ್ತಿನ ಕೊರಳಲ್ಲಿ ಹೊಂಬಿತ್ತಾಳೆಯ ಸಿಂಗಾರವ ಮಾಡಿದಂತೆ ಕುಚಿತರ ಸಂಗ ಸುಸಂಗಿಗೆ ಸಂಗಡವಿಲ್ಲ ! ಗುರುಗುಂಜಿ ಮಾಣಿಕಕ್ಕೆ ಸರಿಯಪ್ಪುದೆ ಕೂಡಲಸಂಗಮದೇವಾ