Library-logo-blue-outline.png
View-refresh.svg
Transclusion_Status_Detection_Tool

ದನುಜ ಮನುಜ ದಿವಿಜರ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ದನುಜ ಮನುಜ ದಿವಿಜರ ಅಲ್ಪಪದವಿಯನೇನೆಂದು ಅರಿಯನು ನೋಡಾ ಶರಣನು. ಮನುಮುನಿಗಳ ಕ್ಷಣಿಕ ಪದಗಿದವ ಬಗೆವನೇ ನಿಃಕಾಮಿ ಶರಣನು? ಕಾಮಧೇನು ಗೀಮಧೇನು ಕಲ್ಪತರು ಗಿಲ್ಪತರು ಚಿಂತಾಮಣಿ ಗಿಂತಾಮಣಿ ಪರುಷ ಗಿರುಷಗಳೆಂಬ ಪ್ರಪಂಚುಗಳ ಎಣಿಸುವನೆ ನಿಭ್ರಾಂತಶರಣನು? ಇಹಲೋಕದ ಸುಖ
ಪರಲೋಕದ ಗತಿ ಎಂಬ ಇಹಪರವನೆಣಿಸುವನೆ ಶರಣನು? ಇಹಪರವೆಂಬ ಇದ್ದಸೆಗೆಟ್ಟು ಪರಾಪರವಸ್ತುವೇ ತಾನಾದ ಪರಮ ಪರಿಣಾಮಿ ನೋಡಾ ಶರಣನು
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.