ದಾಮಿನಿ

ವಿಕಿಸೋರ್ಸ್ ಇಂದ
Jump to navigation Jump to search

Download this featured text as an EPUB file. Download this featured text as a RTF file. Download this featured text as a MOBI file. ಇದನ್ನು ಡೌನ್ಲೋಡ್ ಮಾಡಿ!

 

 
 

 

Preface

ಪೀಠಿಕೆ

.

ಮಾಧವೀಲತಾ"ಗ್ರಂಥಕರ್ತೃಗಳಾದ ಸಂಜೀವಚಂದ್ರ ಚಟ್ಟೋಪಾಧ್ಯಾಯರು ಕರ್ಣಾಟಕದೇಶಸ್ಥರಿಗೆ ಅಪರಿಚಿತರಲ್ಲ. ದಿವಂಗತ ಶ್ರೀಯುತ ಬಿ. ವೆಂಕಟಾ ಚಾರ್ಯರು ಅವರ ಗ್ರಂಥಗಳಲ್ಲಿ ಒಂದೆರಡನ್ನು ಪರಿವೃತ್ತೀಕರಿಸಿ, ಮುಂದಿರಿಸಿ, ಮಹೋಪಕಾರಮಾಡಿರುವರು. ಸಾಹಿತ್ಯ ಸಮ್ರಾಜರಾದ ಬಂಕಿಮಚಂದ್ರರ ಸಹೋದವರಾದ ಈ ಗ್ರಂಥಕರ್ತೃಗಳ ಉಲ್ಲೇಖಗಳು ವಂಗಸಮಾಜದಲ್ಲಿಯೆಲ್ಲ ಆದರಣೀ ಯಗಳಾಗಿರುವುದರಲ್ಲಿ ಅಡ್ಡಿಯೇನಿದೆ? ಅವುಗಳಲ್ಲಿ ಒಂದಾದ ಈ “ದಾಮಿನಿ'ಯನ್ನು, ಗ್ರಂಥಪ್ರಕಾಶಕರಾದ “ವಸುಮತೀ' ಸಂಪಾದಕರ ಅನುಮೋದನದೊಡನೆ, ಕನ್ನಡಿ ಗರ ಸರಸಾವಲೋಕನಕ್ಕಾಗಿ, ಕನ್ನಡಿಸಿರುವೆ. ಇದೊಂದು ಸೂಕಪರ್ಯವ ಸಾಯಿಯಾದ ಸಾಂಸಾರಿಕಚಿತ್ರ.
ಇದನ್ನು ಪರಿಷ್ಕರಿಸಿ ಮುದ್ರಿಸುವುದರಲ್ಲಿ ನನಗೆ ಸಹಾಯಮಾಡಿದ “ ಶ್ರೀ ಕೃಷ್ಣ ಸೂಕ್ತಿ” ಪ್ರಕಾಶಕರ ಮಹೋಪಕಾರ ಚಿರಸ್ಮರಣೀಯವಾಗಿರುವುದು.


ಬೆಂಗಳೂರು

.
ಸದ್ಯ ನವಿಧೇಯ,
ಪರಿವರ್ತನಕಾರ
.
 

 
|| ಶ್ರೀನಿವಾಸಾಯ ನಮಃ ||

Daminee.
ದಾಮಿನಿ.

ಪ್ರಥಮ ಪರಿಚ್ಛೇದ.

ದೆಷ್ಟೋ ಕಾಲದ ಮಾತು. ಒಂದು ದಿನ, ಸಂಜೆಯ ಹೊತ್ತಿನಲ್ಲಿ ಏಳು ವರ್ಷದ ಒಬ್ಬ ಹುಡುಗಿ ಭಾಗೀರಥಿಯ ತೀರದಲ್ಲಿ ಒಂದು, ಅನಿಮಿಷನಯನಗಳಿಂದ, ಆ ತೇಲುತ್ತಿರುವ, ತರಂಗತಾಡಿತವಾದ ದೀಪಮಾಲೆಯನ್ನು ನೋಡುನೋಡುತ್ತೆ, ಹಾಗೆಯೆ ಹಿಂದೆ ಬರುತ್ತಿದ್ದ ವೈದ್ದಯೂಬ್ಬಳನ್ನುದ್ವೇಷಿಸಿ, -“ ಅವ್ಪಾ' ನನ್ನ ದೀಪವು ತೇಲಿಹೋಯಿತಲ್ಲೇ!? -- ಎಂದಳು. “ಹೋಗಲಿ; ಇಡು, ಇನ್ನು ಮನೆಗೆ ನಡೆ, ಕತ್ತಲೆಯಾಯಿತು!-- ಎಂದು ಅವನ ಹೇಳಿದರೂ ಕೇಳದೆ, - “ ತಾಳ.. ಇನ್ನೂ ಕೊಂಚ ನೋಡುವ! - ಎಂದು ಹುಡುಗಿ ಮಾತ್ರ ಹಾಗೆಯೆ ನಿಂದೇ ಇದ್ದಳು.
ಹುಡುಗಿಯ ಹೆಸರು ದಾಮಿಸಿ, ಹಣ್ಣು ಮುದಕಿಯಾದ ಆ ತಾಯ ತಾಯಲ್ಲದೆ, ದಾಮಿನಿಗೆ ಇನ್ನಾರೂ ಇಲ್ಲ. ಇಂದು ಅಜ್ಜಿಯೊಡನೆ ಒಂದು, ಇದೇ ಮೊದಲು, ತನ್ನ ದೀಪವನ್ನು ತೇಲಿಬಿಟ್ಟಿದ್ದಳು. ದೀಪವು ತೇಲಿಹೋಯಿತು. ಇತರ ಬಾಲಿಕೆಯರಂತೆ ಅವಳು ನಗಲಿಲ್ಲ. “ನನ್ನ ದೀಪವು ಹೋಗುತ್ತಿದೆ. ನೋಡು!”..." ಎಂದು ಆಹ್ಲಾದದಿಂದ ಅದನ್ನು ತನ್ನ ಸುಖಿಯರಿಗೆ ಪ್ರದರ್ಶನಮಾಡಿಸ ಲಿಲ್ಲ. ಕೇವಲ ಗಂಭೀರಭಾವದಿಂದ, ನಟ್ಟ ದೃಷ್ಟಿಯಿಂದ, ಅದನ್ನು ನೋಡುತ್ತಿ ದಳು;--ಅಷ್ಟೆ.
ತುಂಬಿ ಹರಿಯುತ್ತಿದ್ದ ಆ ನದಿಯಲ್ಲಿ ದಾಮಿನಿಯ ದೀಪವು ಏಕಾಕಿಯಾಗಿ ತೇಲಿಹೋಗತೊಡಗಿತು. ಸ್ವತಃ ದಾಮಿನಿಯೇ ತನ್ನ ದೀಪವನ್ನು ತೇಲಿಬಿಟ್ಟಿದ್ದಳು ಈಗಳನ್ನು ಉಪಾಯವಿಲ್ಲ!. “ಹೇ ಜಗದೀಶ್ವರ! ನನ್ನ ದೀಪವನ್ನು ಕಾಪಾಡು!'... ಎಂದು ಕಾತರಹ್ರದಯದಿಂದ ಸಂಪ್ರಾರ್ಥಿಸತೊಡಗಿದಳು.

ಅಂಧಕಾರವು ಕ್ರಮಕ್ರಮವಾಗಿ ಅತಿಶಯಿಸುತ್ತ ಒಂದುದನ್ನು ನೋಡಿ
4
ಶ್ರೀಕೃಷ್ಣಸೂಕ್ತಿ ಮುಕ್ತಾವಳಿ

ಅವ್ಪನು ದಾಮಿನಿಯನ್ನು ಮನೆಗೆ ಕರೆದುಕೊಂಡು ಹೊರಟಳು. ದಾಮಿನಿಯೂ, ಗಂಭೀರವಾಗಿ, ತನ್ನ ದೀಪದ ಪರಿಣಾಮವನ್ನೇ ಯೋಚಿಸುತ್ತ, ಮನೆಗೆ ನಡೆದಳು. ಅಂಗಳದಲ್ಲಿ ಕೊಡದ ತುಂಬ ನೀರಿದ್ದಿತು. ಅದರಲ್ಲಿ ಪುಟ್ಟ ಕಯ್ಬೆರಳುಗಳಿಂದ ಪುಟ್ಟ ಪುಟ್ಟ ಕಾಲ್ಗಳನ್ನು ಪ್ರಕ್ಷಾಲನಮಾಡಿಕೊಂಡು, ಶಯನಗೃಹವನ್ನು ಪ್ರವೇಶಿಸಿದಳು. ಮಲಗಿದುದೇ ತಡ;-ನಿದ್ದೆ ಬಂದಿತು.
ನಿದ್ದೆಯಲ್ಲಿಯೆ ದಾಮಿನಿಯೊಂದು ಸ್ವಪ್ನವನ್ನು ನೋಡಿದಳು. ಅಂಧಕಾರ ದಲ್ಲಿ ಘನೀಭೂತವಾಗಿ ಮೇಘವ ನದಿಯ ಮೇಲೆ ಬಾಗಿಬಿದ್ದಿದ್ದಿತು, ಅದನ್ನು ನೋಡಿ, ಭಯಗೊಂಡು ದಾಮಿನಿಯ ದೀಪವು ಸಣ್ಣ ಸಣ್ಣನೆ ತೊಳತೊಳಗುತ್ತ ಓಡ ತೊಡಗಿತು. ಪತನೋನ್ಮುಖವಾಗಿದ್ದ ದೊಡ್ಡ ದೊಡ್ಡ ಭಯಾನಕತರಂಗಗಳೆಷ್ಟೋ ಸುತ್ತು ಸುತ್ತಲೂ ಸುಳಿಯುತ್ತ ನಾಲ್ಕು ಕಡೆಗಳಿಂದಲೂ ಆ ಕ್ಷುದ್ರದೀಪವನ್ನು ಆಕ್ರಮಿಸಿಬಿಟ್ವುವು. ಅವುಗಳಲ್ಲಿ ಒಂದರ ತಲೆಯ ಮೇಲೆ ಒಂದು ಬೆಕ್ಕು ಗಂಭೀ ರವಾಗಿ ಕುಳಿತಿದ್ದಿತು. ಅದನ್ನು ನೋಡಿದೊಡನೆಯೆ ಗುರುತಿಸಿದಳು; ಅದು ಆ ಹಳ್ಳಿಯಲ್ಲಿಯೆಲ್ಲ ಕೆಟ್ಟ ಬೆಕ್ಕಾಗಿದ್ದಿತು. ದಾಮಿನಿಯನ್ನು ನೋಡಿತೆಂದರೆ, ಪರಚುವು ದಕ್ಕೇ ಬರುವುದು; ಅವಳೂ, ಅದು ಬಂದಿತೆಂದರೆ, ಕಣ್ಣು ಮುಚ್ಚಿಕೊಂಡು ಚೀತ್ಕಾರಮಾಡುವಳು;-ಅದರ ಭಯದಿಂದ ತಪ್ಪಿಸಿಕೊಂಡು ಓಡುವುದಕ್ಕೂ ಅವಳಿಂದಾಗದು, ಇಂದು ಆ ತರಂಗಶಿಖರದಲ್ಲಿ ಅದೇ ಹಾಳ ಬೆಕ್ಕನ್ನು ನೋಡಿ, ಅವಳಿಗೆ ತಡೆಯಲಾರದಷ್ಟು ಭಯವುಂಟಾಯಿತು. ಮಾತಾಮಹಿಯ ಮುಂಜೆರಗನ್ನು ಹಿಡಿ ದುಕೊಂಡು, ಕಣ್ಣು ಮುಚ್ಚಿಕೊಂಡಳು. ಕ್ರುದ್ದೆಯಾಗಿ, ಆ ವೃದ್ದೆ ಸೆರಗನ್ನೆಳೆದು ಕೊಂಡು, ದಾಮಿನಿಯನ್ನು ಹಿಡಿದು ಅವಳ ಕ್ಷುದ್ರದೇಹವನ್ನು ಅಗಾಧಜಖಲದಲ್ಲಿ ಎಸೆದುಬಿಟ್ಟಳು. ದಾಮಿನಿ ಸ್ವಪ್ನದಲ್ಲಿಯೂ ಚೀತ್ಕಾರಮಾಡತೊಡಗಿದಳು.
ಭಯವೇನೆಂದು ಕೇಳುತ್ತ ನಿದ್ರಿತೆಯಾಗಿದ್ದ ಆ ದಾಮಿನಿಯನ್ನು ಅಜ್ಜಿಯೆತ್ತಿ ಕೊಂಡಳು. ದಾಮಿನಿಗೆ ಎಚ್ಚರವಾಗಿ, “ಅಮ್ಮಾ! ಎಲ್ಲಿ?” ಎಂದು ಅಳತೊಡಗಿ) ದಳು. ಪಾಪ! ಅಭಾಗಿನಿಯಾದವಳಿಗೆ ಅಮ್ಮನಿರಲಿಲ್ಲ. ಮೂರು ವರ್ಷಗಳಿಗೆ ಮೊದಲೇ, ನಿರುದ್ದೇಶಯಾಗಿ, ಎಲ್ಲಿಗೋ ಹೊರಟುಹೋಗಿದ್ದಳು.
ಮರುದಿನ, ಪ್ರಾತಃಕಾಲದಲ್ಲಿ, ಪಾಠಶಾಲೆಗೆ ಹೋಗುತ್ತಿದ್ದ ಹನ್ನೆರಡು

ವರ್ಷದ ಒಬ್ಬ ಹುಡುಗನು ದಾಮಿನಿಯ ಗೃಹದ್ವಾರದಲ್ಲಿ ನಿಂದು, – “ಹಕ್ಕಿಯ ಮರಿ ಗಳಿಗಾಗಿ ಕಾಳುಗಳನ್ನು ಸಂಗ್ರಹಿಸಿಲ್ಲವೆ?” – ಎಂದು ಕೇಳಿದನು. ದಾಮಿನಿಯೋ ಬ್ಬಳೇ ಕುಳಿತಿದ್ದಳು; ಅವನ ಆ ಪ್ರಶ್ನೆಗೆ ತಲೆಯಾನ್ನಾಡಿಸುತ್ತ ಉತ್ತರಕೊಟ್ಟಳು, ಬಾಲಕನಿಗೆ ತೃಪ್ತಿಯಾಗಲಿಲ್ಲ. ಕೊಂಚ ಮುಂಬರಿದು - ಅದೇಕೆ? ಜ್ವರ ಬಂದಿ ದೆಯೆ?” ಎಂದು ಕೇಳಿದನು. ಅವಳು ಪುನಃ ತಲೆಯಾಡಿಸಿದಳು. ಪುನಃ,
5
ದಾಮಿನಿ.

ಕೇಳಿದನು:- “ ಅವ್ಪನ ಮೇಲೆ ಕೋಪವೇನು??” ಅವಳು ಮಾತನಾಡಲಿಲ್ಲ. ಆವ ಉತ್ತರವೂ ಬಾರದುದನ್ನು ನೋಡಿ, ಬಟ್ಟೆಯ ಸೆರಗಿನಲ್ಲಿದ್ದ ಕೆಲವು ಕಾಳುಗಳನ್ನು ತೆಗೆದು ಅವಳ ಮುಂದಿರಿಸಿ, ಹುಡುಗನು ಪಾಠಶಾಲಾಭಿಮುಖನಾಗಿ ಹೊರಟು ಹೋದನು.
ಹುಡುಗನ ಹೆಸರು ರಮೇಶನು, ದಾಮಿನಿಗೆ ಅವನು ಏನೂ ಆಗಬೇಡ. ನೆರೆಯವನೆಂದು ಅವಳವನನ್ನು ಅಣ್ಣನೆನ್ನುವಳು; ಅವನನ್ನು ಆವಾಗಲೂ“ ಅಣ್ಣಾ!” ಎಂದು ಸಂಬೋಧಿಸುವಳು. ರಮೇಶನೆಂದರೆ, ದಾಮಿನಿಗೆ ಬಲು ಇಷ್ಟ: ಆವ ಬೆಕ್ಕನ್ನು ನೋಡಿದರೆ ತನಗೆ ಬಹುಭಯವಾಗುತ್ತಿದ್ದಿತೋ ಅದನ್ನು ರಮೇಶನು ನೋಡಿದೊಡನೆ ಹೊಡೆಯತೊಡಗುವನು. ಅದಕ್ಕಾಗಿಯೇ, ಅವಳು ಅವನ ಅನು ಗತೆಯಾಗಿರುವಳು. ಸ್ನಾನಮಾಡುತ್ತಿದ್ದಾಗ ರಮೇಶನು ದಾಮಿನಿಗಾಗಿ ನೀರಲ್ಲಿಳಿಇದು ಎಷ್ಟೋ ಪ್ರಯಾಸದಿಂದ ಜಲಪುಷ್ಪಗಳನ್ನು ತಂದುಕೊಡುವನು. ಅದನ್ನವಳು ತೆಗೆದುಕೊಂಡು, ನಗುನಗುತ್ತ ಹೆರಳಿಗೆ ಸೂಡಿ, ಮತ್ತೆ ತಲೆದಸಿ..... “ನೋಡಣ್ಣ! ಹೇಗಿದೆ?” ಎಂದು ಕೇಳುವಳು. ಬಹುಶಃ ರಮೇಶನು ಚೆನ್ನಾಗಿ ದೆಯೆಂದೇ ಹೇಳುವನು; ಆದರೆ, ಮಧ್ಯೆ ಮಧ್ಯೆ ಮನಸ್ಸಿಗೆ ಬಾರದಿದ್ದರೆ, ಸ್ವತಃ ಅದನ್ನು ಸರಿಯಾಗಿ ಮುಡಿಯಿಸುವನು. ಗ್ರಾಮದಲ್ಲಿನ ಎಲ್ಲ ಹುಡುಗಿಯರಿಂದಲೂ, ತನ್ನ ದಾಮಿನಿ ಸ್ವಾಭಾವಿಕವಾಗಿ ಶಂತೆಯೆಂದೂ ದುಃಖಿನಿಯೆಂದೂ ರಮೇಶನು ತಿಳಿದಿದ್ದನು. ಅಂತೆಯೆ ದಾಮಿನಿಯೂ ಆ ಗ್ರಾಮದ ಹುಡುಗರಲ್ಲಿಯೆಲ್ಲ ತನ್ನ ರಮೇಶನನ್ನು ಸ್ವಜನವೆಂದು ಭಾವಿಸಿಕೊಂಡಿದ್ದಳು. ಇತರರಾರೂ ತನಗಾಗಿ ಹೂಗಳನ್ನು ತಂದುಕೊಡುತ್ತಿಲ್ಲ; ಹಕ್ಕಿಗಳನ್ನು ಹಿಡಿಯುತ್ತಿಲ್ಲ; ಕಾಳುಗಳನ್ನು ಸಂಗ್ರಹಿ ಸುತ್ತಿಲ್ಲ; ತನ್ನ ವೈರಿಯಾದ ಬೆಕ್ಕನ್ನು ಹೊಡೆದೋಡಿಸುತ್ತಿಲ್ಲ. ಆದುದರಿಂದ, ರಮೇಶನನ್ನು ನೋಡಿದಳೆಂದರಿ, ದಾಮಿನಿಯೋಡಿಹೋಗಿ, ಅವನ ಬಳಿ ನಿಲ್ಲುತ್ತಿ ದ್ದಳು, ನಗೆಮೊಗದಿಂದ, ಅವನ ಮಾತುಗಳಿಗೆ ಉತ್ತರಗುಡುತ್ತಿದ್ದಳು. ಆದರೆ, ಇಂದು ಅವನನ್ನು ನೋಡಿ, ಮೊದಲಿನಂತೆ ಅವಳು ಆಹ್ಲಾದವನ್ನು ಸೂಚಿಸಲಿಲ್ಲ' ದಾಮಿನಿ ಶೈಶವದಲ್ಲಿಯೂ ಗಂಭೀರೆಯಾಗಿಹೋಗಿದ್ದಾಳೆ!
ಶೈಶವದಲ್ಲಿಯೂ, ದಾಮಿನಿಗೆ ಇಷ್ಟು ಗಂಭೀರಪ್ರಕೃತಿಯೇಕೆ? ಆವನು ಸುಖಿ

ಯೋ, ಅವನು ಚಂಚಲನು; ಅವನು ದುಃಖಿಯೋ, ಅವನು ಶಾಂತನೂ, ಧೀರನೂ, ಗಂಭೀರಪ್ರಕೃತಿಯುಳ್ಳವನೂ ಆಗಿರುವನು. ಇದು ಸ್ವಭಾವವು. ದಾರುಣ ವಾದ ಒಂದು ದುಃಖದ ದೆಸೆಯಿಂದ, ದಾಮಿನಿಯಿಂದು, ಈ ಶೈಶವದಲ್ಲಿಯೂ, ಕಾತರೆಯಾಗಿರುವಳು. ಅವಳ ಆ ತಾಯಿಯೆಲ್ಲಿ?-ಏನು? ಸತ್ತುಹೋಗಿರಬಹುದೆ? ಹಾಗಾಗಿದ್ದರೆ, ಜನಗಳೇಕೆ ಹಾಗೆ ಹೇಳುವುದಿಲ್ಲ? ಹಳ್ಳಿಯ ಎಲ್ಲ ಮಕ್ಕಳೂ ತಾಯ
6
ಶ್ರೀಕೃಷ್ಣ ಸೂಕ್ತಿಮುಕ್ತಾವಳಿ.

ತೊಡೆಯ ಮೇಲೆ ಮಲಗುವರು; ತಾಯ ಕಯ್ಯಲ್ಲಿ ಉಣ್ಣುವರು; ತಾಯ ಕತೆಗಳನ್ನು ಕೇಳುವರು; ತಾಯ ಮೊಗವನ್ನು ನೋಡುವರು; ತಾಯಿಯೊಡನೆ ದ್ದುಮುದ್ದಾಗಿ ಮಾತನಾಡುವರು; ತಾಯಿಯೊಂದಿಗೆ ಜಗಳವಾಡುವರು; ಗಲಭೆ ಮಾಡುವರು; ತಾಯ ಸಂಗಡ ಪೌರಾತ್ಮವನ್ನು ನಡೆಯಿಸುವರು. ಆದರೆ, ದಾ ಮಿಸಿಯ ಅದೃಷ್ಟದಲ್ಲಿ ಅವಾವುವೂ ಇಲ್ಲವೇತಕ್ಕೆ? ಅಟ್ಟಿಯಿರುವಳು; ಬಲು ಒಳ್ಳೆಯವಳು; ತನ್ನನ್ನು ತಾಯಂತೆಯೆ ಪ್ರೀತಿಸುವಳು. ಆದರೆ, ತಾಯಿ? ಅವಳ ಆಗರ? ಅವಳ ಪ್ರೀತಿ? ಅದಾವ ಪರಿ?--ತನ್ನ ಕೃತೀಯವರ್ಷದಲ್ಲಿಯೆ ತಾಯನ್ನು ನೀಗಿ ಕೊಂಡಿದ್ದ ಆ ದಾಮಿನಿಗೆ ಅದು ಹೇಗೆ ಗೊತ್ತಾಗಬೇಕು? ಎಲ್ಲಿಯೋ, ಒಂದೊಂದು ವೇಳೆ, ಕೊಂಚಕೊಂಚವಾಗಿ, ಅವಳಿಗೆ ಆ ನೆನಪು! ಕೊಂಚಕೊಂಚ;--ಕೇವಲ ಛಾಯಾಮಾತ್ರ!..-ಕೇವಲ ಒಂದು ದೇಹ-ಆ ಮೇಲೆ, ಬರೀ ಒಂದು ಮುಖ!!-- ಬಾಲ್ಯಕಾಲದಲ್ಲಿ ಒಂದು ಬಾರಿ ದುರ್ಗೊತ್ಸವನನ್ನು ನೋಡಿದಳು; - ಕೇವಲ ಒಂದೇ ಬಾರಿ; ~~ ಮತ್ಯಾವಾಗ ನೋಡಿದುದಿಲ್ಲ;-ಪ್ರೌಢಾವಸ್ಥೆಯಲ್ಲಿ ಹೇಗೆ ಆ ಮರ್ಗೋತ್ಸವದ ದುರ್ಗಾವಿಗ್ರಹದ ಜ್ಞಾಪನವಾಗಬಹುದೊ ಹಾಗೆಯೇ ಈಗ ಅವಳಿಗೆ ತನ್ನ ತಾಯ ಜ್ಞಾಪಕ!! ಎಷ್ಟೋ ಬಾರಿ, ಮಾತೃವಿಗ್ರಹವನ್ನು ಮನಸಿನ ಲ್ಲಿಯೇ ಪ್ರತಿಷ್ಠಾಪನವಡುವಳು;-ಬಟ್ಟೆಗಳಿಂದಲೂ ಆಭರಣಗಳಿಂದಲೂ ಮನಸ್ಸಿನಲ್ಲಿಯೇ ಅದನ್ನಲಂಕರಿಸುವಳು;-ಅನಂತರ, ನಗೆಮೊಗದಿಂದ, ಅತ್ಯಾದರದಿಂದ ಮನಬಂದಂತೆ, ಆ ದಿವ್ಯದೇವೀಮೂರ್ತಿಯ ಸರ್ವಾಂಗಗಳನ್ನೂ ಅಳವಡಿಸುವಳು- ಅಳವಡಿಸಿ, ಆ ಬಳಿಕ, ಮನಸ್ಸಿನಲ್ಲಿಯೆ-“ಅಮ್ಮಾ ಅಮ್ಮಾ!” ಎಂದು ಕರೆಯತೊಡಗುವಳು.
ಇಂದೂ, ತಾಯ ವಿಚಾರವನ್ನು ಮನಸ್ಸಿನಲ್ಲಿಯೇ ಭಾವಿಸಿಕೊಳ್ಳುತ್ತಿದ್ದ ಹಾಗೆ-ತಾಯ ವಿಚಾರ, ದೀಪದ ವಿಚಾರ ಪ್ಸ್ಪ ಸ್ವಪ್ನದ ವಿಚಾರ, ರಮೇಶನ ವಿಚಾ ರ--ಸಮಸ್ತವಿಚಾರಗಳೂ ಮೇಲಿಂದ ಮೇಲೆ ಮನಸ್ಸಿಗೆ ಬಂದು, ದಾಮಿನಿಯ ಹೃದಯದಲ್ಲಿ ಅತಿಶಯವಾದ ವ್ಯಥೆಯನ್ನುಂಟುಮಾಡಿದುವು. ದಾಮಿನಿಯು “ಸತ್ಯರೆ ಸುಖ' ವೆಂದುಕೊಂಡಳು.

ದ್ವಿತೀಯ ಪರಿಚ್ಛೇದ.
ತ್ತು ವರ್ಷಗಳಾದ ಮೇಲೆ, ಒಂದು ದಿನ, ಅಪರಾಹ್ನದಲ್ಲಿ ದಾಮಿನಿಯೊಬ್ಬಳೇ ಕಿರುಮನೆಯಲ್ಲಿ ಮಂಚದ ಮೇಲೆ ಹಾಸುಗೆಯನ್ನು ಹಾಸುತ್ತಿದ್ದಳು. ಪಶ್ಚಿಮ
7
ದಾಮಿನಿ.

ದಿಶೆಯ ಕ್ಷುದ್ರಗವಾಕ್ಷದಿಂದ ಹಾಸುಗೆಯ ಮೇಲೆ ಬಂದು ಬಿದ್ದ ಸೂರ್ಯಕಿರಣ ಗಳು ಅವಳ ಮನೋಜ್ಞವಾದ ಮುಖಮಂಡಲದಲ್ಲಿ ಪ್ರತಿಬಿಂಬಿತವಾಗುತ್ತಿದ್ದುವು. ನಾಸಾಗ್ರದಲ್ಲಿಯೂ ಕೆನ್ನೆಯ ಮೇಲೂ ಸಣ್ಣ ಸಣ್ಣ ಬೆಮರಿನ ಹನಿಗಳು ಚಿಕ್ಕಚಿಕ್ಕ ಮುತ್ತಿನ ಮಣಿಗಳಂತೆ ಪ್ರಕಾಶಿಸುತ್ತಿದ್ದುವು. ಒದ್ದೆಯ ಚೌಕದಿಂದ ವಾಮಿನಿಯು ಮೆಯ್ಯನೊರಸಿಕೊಳ್ಳುತ್ತಿದ್ದಳು,
ದಾಮಿನಿಯಾಗ ಬಾಲೆಯಲ್ಲ; ಹದಿನೇಳು ವರ್ಷದ ಯುವತಿ. ಅವಳ
ಸರ್ವಾವಯವಗಳೂ ಈಗ ಸಂಪೂರ್ಣತೆಯನ್ನು ಹೊಂದಿವೆ. ದೇಹದ ಬೆಳೆವಣಿಗೆಗೆ ತಕ್ಕಂತೆ, ಅಂಗಚಾಲನದಲ್ಲಿಯೂ ಗಾಂಭೀರ್ಯವು ಸಿದ್ಧಿಸಿದೆ. ಸ್ವಭಾವತಃ ಗೌ ರಾಂಗಿಯಾದ ದಾಮಿನಿಯಲ್ಲಿ ಆ ಬಣ್ಣವು ಆಪೇಕ್ಷೆಮಾಡಿದುದಕ್ಕಿಂತಲೂ ಅತಿಶಯ ವಾಗಿ ನಿರ್ಮಲವಾಗತೊಡಗಿದೆ.
ಮೆಯ್ಯನ್ನೊರಸಿಕೊಂಡು, ದಾಮಿನಿಯು ಕನ್ನಡಿಯನ್ನು ತೆಗೆದಳು. ಅಷ್ಟರ
ಲ್ಲಿಯೇ ಅಂಗಳದಲ್ಲಿ ಅಪರಿಚಿತವಲ್ಲದ ಒಂದು ಸ್ವರ! ಕೇಳಿ ಚಂಚಲೆಯಾಗಿ, ಅಲ್ಲಿಯೆ ಕನ್ನಡಿಯನ್ನೆಸೆದು, ಬೇಗನೆ ಬಾಗಿಲ ಬಳಿಗೆ ಬಂದು ನಿಂತಳು. ಆರನ್ನು ಬಾಲ್ಯದಲ್ಲಿ -ಅಣ್ಣಾ! ರಮೇಶ!?” ಎಂದು ಕರೆಯುತ್ತಿದ್ದಳೋ ಅವನೇ ಇಂದು ಅಂಗಳದಲ್ಲಿ ನಿಂದು, ತನ್ನ ಚಿಕ್ಕಮ್ಮನೊಡನೆ ಅದೇನನ್ನೋ ಮಾತನಾಡುತ್ತಿದ್ದನು. ಸತ್ರಷ್ಣನಯನೆ ಯಾಗಿ ಅವಳನ್ನು ನೋಡತೊಡಗಿದಳು.
ರಮೇಶನು ಇನ್ಯಾರೂ ಅಲ್ಲ; ಈಗಲವನು ದಾಮಿನಿಗೆ ಜೀವನಸರ್ವಸ್ವನಾದ
ಸ್ವಾಮಿ!
ಮಾತು ಮುಗಿಯಿತು; ರಮೇಶನು ತನ್ನ ಶಯನಗೃಹವನ್ನು ಪ್ರವೇಶಮಾಡಿ
ದನು. ಹಾಸುಗೆಯ ಮೇಲೆ ಒಂದೆರಡು ಅರಳಿದ ಹೂಗಳು ಬಿದ್ದಿರುವುದನ್ನು ನೋಡಿ- “ನನ್ನ ನಾಮಾವಳಿ*ಯಲ್ಲಿದ್ದ ಹೂಗಳನ್ನು ಕದ್ದ ಕಳ್ಳನಾರೋ? - ಎಂದನು.
ದಾಮಿನಿ:- “ಚೆನ್ನಾಯಿತು! ಒಳ್ಳೆಯ ಕೆಲಸ! ಹೂಗಳನ್ನು ತಂದು ನಾಮಾವಳಿ
ಯಲ್ಲಿ ಕಟ್ಟಿಡಕೂಡುವುದು! ಇತರರು ಅದನ್ನು ಕದ್ದುಕೊಳ್ಳುವುದಕ್ಕೆ ಆಗಲಾರದೆ? ಈಗ, ಆರೋ ಕದ್ದು ಕೊಂಡು ಹೋಗಿ, ಒಳ್ಳೆಯ ಕೆಲಸವಾಯಿತು!”
ರಮೇಶ:--“ಒಳ್ಳೆಯ ಕೆಲಸವಾಯಿತು; ಅಲ್ಲವೇನೋ? ಈ ಬಾರಿ, ಕಳ್ಳನನ್ನು
ಹಿಡಿಯಕೂಡಿದ್ದರೆ ಗೊತ್ತಾಗುತ್ತಿತ್ತು???


  • ದೇವರ ನಾಮಗಳನ್ನು ಕಸೂತಿಮಾಡಿದ ಚೀಟಿಯ ಬಟ್ಟೆಯ ಉತ್ತರೀಯ, (ಹೊಂದದ ಪಂಚ.) - ಇದು ಹೆಚ್ಚಾಗಿ ಬಂಗಾಳೀಯರ ಭದ್ರಗ್ರಹಗಳಲ್ಲಿರುವುದು.
8
ಶ್ರೀಕೃಷ್ಣ ಸೂಕ್ತಿಮುಕ್ತಾವಳಿ.

ಹಿಡಿವ ಪ್ರಯಾಸವಿಲ್ಲ;.-ಕಳ್ಳನು ತಾನಾಗಿಯೇ ಬಂದು, ಸಿಕ್ಕುಬಿದ್ದನು.
ರಮೇಶನು ದಾಮಿನಿಯ ಗಲ್ಲಗಳನ್ನು ಹಿಡಿದನು. ಹಾಗೆಯೆ, ತನ್ನ ಎರಡು
ಕಯ್ಗ ಳಿಂದ ಅವಳ ಕಿವಿಗಳೆರಡನ್ನೂ ಮುಚ್ಚಿ, ಮುಖವನ್ನು ಮೇಲಕ್ಕೆತ್ತಿ ಹಿಡಿದು ಕೊಂಡು, ನೋಡತೊಡಗಿದನು. ದಾಮಿನಿಯೂ ರಮೇಶನ ಬಾಹುಗಳನ್ನು ಹಿಡಿ ದುಕೊಂಡು, ಊಧ್ವರವದನೆಯಾಗಿ ಅವನನ್ನು ನೋಡಲಾರಂಭಿಸಿದಳು. ಹಾಗೆಯೆ, ನೋಡುನೋಡುತ್ತ,-“ನನ್ನ ಸರ್ವಸ್ವ!” – ಎಂದಳು. ದಾಮಿನಿಯ ಕಣ್ಣುಗಳಲ್ಲಿ ಒಮ್ಮೆಯಿಂದೊಮ್ಮೆಯೆ, ನೀರು ತುಂಬಿತು. ಅವಳು ದೊಡ್ಡದಾಗಿ ಅತ್ತು ಬಿಟ್ಟಳು.
ರಮೇಶನು ದಾಮಿನಿಯನ್ನು ಬಿಟ್ಟು ಬಿಟ್ಟು, ಭಗ್ನಸ್ಪರದಿಂದ-“ನೀನು ನಿತ್ಯವೂ
ಅಳುತ್ತಿರುವೆಯೇಕೆ? – ಎಂದನು. ಕಣ್ಣನ್ನೂರಸಿಕೊಳ್ಳುತ್ತ, ದಾಮಿನಿಯು ನೀವು ನನ್ನನ್ನು ನಿತ್ಯವೂ ಆದರಿಸುತ್ತಿರುವಿರೇಕೆ?”- ಎಂದಳು.
ಅಷ್ಟರಲ್ಲಿಯೆ, ಬಾಗಿಲ ಬಳಿಯಲ್ಲಿ, ಘನನಿಶ್ವಾಸದ ಶಬ್ದವುಂಟಾಯಿತು,
ಆರೋ, ಇನ್ನೊಬ್ಬರು ಸಿಕ್ಕಿಬಿಕ್ಕಿ ಅಳುತ್ತಿರುವಂತಿದ್ದಿತು. ರಮೇಶನೂ ದಾಮಿನಿ ಯೂ ಇಬ್ಬರೂ ವ್ಯಸ್ತರಾಗಿ, ನೋಡುವುದಕ್ಕೆಂದು ಆ ಕಡೆಗೆ ಓಡಿಹೋದರು. ಅರ್ಧ ವಯಸ್ಕಳಾದ ಅಸುಚಿತೆಯಾದ ಒಬ್ಬ ಹೆಂಗಸು ಸೀರೆಯ ಸೆರಗಿನಿಂದ ಕಣ್ಣ ನ್ನೊರಸಿಕೊಳ್ಳುತ್ತೆ ನಡೆದುಹೋಗುತ್ತಿದ್ದಳು, ದಾಮಿನಿಯೂ ಆ ಹೆಂಗಸಿನ ಹಿಂಗ ಡೆಯೇ ನಡೆದಳು. ಇಬ್ಬರೂ ಹೊರಬಾಗಿಲಿನ ಹತ್ತಿರಹತ್ತಿರವಾದರು. ಒಡನೆಯೆ ಆ ಹೆಂಗುಸು ಹಠಾತ್ತಾಗಿ ಹಿಂದಿರುಗಿದಳು; ಹಿಂದಿರುಗಿ, ದಾಮಿನಿಯನ್ನು ನೋಡಿ, ಒಮ್ಮೆಯಿಂದೊಮ್ಮೆಯೆ ಒಂದೇ ಬಿಟ್ಟಳು. ಅವಳನ್ನು ನೋಡಿದರೆ, ಉನ್ಮಾದಿನಿ ಯೆಂದು ಬೋಧೆಯಾಗುತ್ತಿತ್ತು. ನೋಡುತ್ತಿದ್ದ ಹಾಗೆ, ದಾಮಿನಿಗೆ ಏನೋ ಮನ ಸ್ಸಿಗೆ ಬಂದಿತು. ಅದೇನೆಂಬುದನ್ನು ಅವಳಿಂದ ನಿಶ್ಚಯಮಾಡಲಾಗಲಿಲ್ಲ. ಹರಾ ತ್ತಾಗಿ ದಾಮಿನಿಯ ಗಲ್ಲಗಳನ್ನು ಹಿಡಿದುಕೊಂಡು, ಅವಳ ವಕ್ಷಸ್ಕೃತದಲ್ಲಿ ತನ್ನ ಮುಖವನ್ನಿಟ್ಟು, ಉನ್ಮಾದಿನಿಯು- .. ಅಮ್ಮಾ! ಅಮಾ??...ಎಂದು ಅಳಲಾರಂಭಿಸಿ ದಳು. ಏನೇನೋ ಹೇಳಿದಳು; ಎಷ್ಟೋ ಆಶೀರ್ವಾದಮಾಡಿದಳು; ದಾಮಿನಿಗೆ ಅದಾವುದೂ ಅರ್ಥವಾಗಲಿಲ್ಲ; ಆದರೂ, ಅವಳು ಆಳತೊಡಗಿದಳು. ಅಳ ವರನ್ನು ಕಂಡರೆ, ತನಗೂ ಅಳು ಬರುವುದು; ಅದೇತಕ್ಕೆಂಬುದನ್ನು ಆರಿಂದಾದರೂ ತಿಳಿವುದಕ್ಕಾದೀತೆ? ಮೆಲ್ಲ ಮೆಲ್ಲನೆ, ಅವಳು ಉನ್ಮಾದಿನಿಯ ಆ ಗಾಢಾಲಿಂಗನದಿಂದ ಮುಕ್ತಿಯನ್ನು ಹೊಂದಿ- ಅಮ್ಮಾ ನೀನು ಯಾರೆ?” ಎಂದು ಕೇಳಿದಳು.
ಉನ್ಮಾದಿನಿಯೊಂದನ್ನೂ ಹೇಳಲಿಲ್ಲ. ಸುಮ್ಮನೆ “ ಅಮಾ! ಅಮ್ಮಾ!” –

ಎಂದು ಅಳತೊಡಗಿದಳು. ದಾಮಿನಿ ಕೇಳಿದಳು:- ಅಮ್ಮಾ! ಅಳುವೆಯೇಕೆ ???
(a)8
ದಾಮಿನಿ.

ಉನ್ಮಾದಿನಿಯು ಪ್ರಶ್ನೆ ಮಾಡಿದಳು:- ನಿನಗೆ ಅಮ್ಮನಿಲ್ಲವೆ? ದಾಮಿನಿಗೆ
ಹಠಾತ್ತಾಗಿ ದುಃಖವು ಬಂದಿತು. ಗದ್ಗದಸ್ವರದಿಂಗ– “ದೇವರಿಗೆ ಗೊತ್ತು? ಎಂದು ಅಳತೊಡಗಿದಳ.
ಉನ್ಮಾನಿ:- “ನೋಡು:- ನಿನ್ನ ತಾಯಿಗಾಗಿ ನೀನು ಅಳುತ್ತಿರುವೆ ನನ್ನ
ತಾಯಿ ಇಂದು ನನಗೆ ದೊರೆಗಳು--ನಾನು ಅಳಬೇಡವೆ???
ಹಠಾತ್ತಾಗಿ, ವಿದ್ಯುಲ್ಲತೆಯಂತೆ, ಒಂದು ವಿಚಾರವ ದಾಮಿನಿಯ ಮನಸ್ಸಿ
ನಲ್ಲಿ ಹೊಳೆಯಿತು: “ಅವಳು ನನ್ನ ತಾಯಿಯಲ್ಲವೇನು?”
ಆಹುದು: ಆವಳೆ? ತಾಯಿ-ದಾಮಿಸಿ ತನ್ನವಳಾದ ತಾಯ.! ಸ್ವಾಮಿ
ಶೋಕದಿಂದ ಹುಚ್ಚಿಯಾಗಿ ಓಡಿಹೋದ್ದಳು. ಎಲ್ಲಿಗೆ ಹೋಗಿದ್ದಳೋ, ಎಲ್ಲಿ ದ್ದಳೊ - ಆರು ಬಲ್ಲರು? ಫೈರವಿಯಂತೆ, ಕೆಲವು ಕಾಲ, ತ್ರಿಶೂಲಧಾರಿಣಿಯಾಗಿ ಅಲೆಯುತ್ತಿದ್ದಳು:- ಪುನತಿ ಒಹುಕಾಲದ, ಮೇಲೆ ಸಂಸಾರದಲ್ಲಿ ಸ್ವಯಂ -) ಋತು; --- ವಾಸಿಸುವ ನೆ ವದ ಕ್ಯಾ; } ಹಿಂದಿರುಗಳ: - ೨ ಅಡ: 1, ಸವ್ರಂತ ನೋಟಗಳು; ಅವಳ ಮನಸ್ಸಿನಲ್ಲಿ ಹರತ್ತಾಗಿ ಭಾವನೆಯುಂಟಾಂಬತು:- “ಇವಳಲ್ಲನೆ ನನ್ನ ತಾಯಿ?”
ಅಷ್ಟರಲ್ಲಿಯೇ, ಹಿಂದಣಿಂದ ಆರೋ ತನನ್ನು ಕರೆದಂತಾಯಿತು. - ಆರೈಕೆ
ಕರೆವನ್ನು ರಮೇಶನ. ಚಿಕ್ಕತೆಯ - ದಾಮೀನಿ ಸಕಿತೆಯಾಗಿ ಹಿಂದಿರುಗಿದಳು , ಒಂದು ಬಾರಿ, ಹುಟ್ಟ ನಿಂದಿರ್ ಕಡೆಗೆ ತಿರುಗಿ ನೋಡಿದಳು ಹಕ್ಕಿ ಗಲ್ಲ: ತೆರಟಿ ಹೋದಳು. ಅವಳನ್ನು ಹಿಂಬಾಲಿಸಲೆ '- ಎಂದು ಒಮ್ಮೆ ಯೋಚಿಸಿದಳು. ಅದಕ್ಕಾಗಿಯೇ ಒಂದೆರಡು ಹೆಜ್ಜೆಗಳನ್ನೂ ಮುಂದಿಟ್ಟಳು. ಪುನಂ: ಏನನೋ ಯೋಚಿಸಿ, ಹಿಂದೆ ಬಂದಳು. ನೆಯನ್ನು ಪ್ರವೇತಿಸಿದಳು. “ಹೆಂಗಸು ಯಾರು?"- ಎಂದು ರಮೇಶನು ಕೇಳಿದುದಕ್ಕೆ ಅನ್ಯಮನಸ್ಕಳಾ, ಏನನೋ ಯೋಚಿಸುತ್ತ ಮೆತ್ತಗೆ.-“ಹಜ್ಯ” . ಎಂತ ಉತ್ತರಕೊಟ್ಟಳು.
ರಮೇಶನು ಮತ್ತೆಯಾವ ಮಾತನ್ನೂ ಆಡದೆ ಹೊರಗೆ ಹೋದನು. ದಾ

ಮಿಸಿ ಪುನಃ ಶಯನಗ್ರಹವನ್ನು ಪ್ರವೇಶಿಸಿದಳು. ಎಂಜಿನ ಮೇಲೆ ಮಲವನ್ನಿಟ್ಟು ಕೊಂಡು, ಸಿಶ್ಶಬ್ಬವಾಗಿ, ಎಷ್ಟೋ ಆತ್ತಳು, ಅಸ್ತುಟಸ್ಕರದಿಂದ, ಒಂದೆರಡು ಬಾರಿ, “ ಅಮ್ಮಾ” ಎಂಂದು ಕರೆದಳು, ಪಾಪ' ಎಷ್ಟೋ ಬಾಲ್ಯದಲ್ಲಿಯೆ ಆಮ್ಮನನ್ನು ಕಳೆದುಕೊಂಡಿದ್ದಳು. ಅಂದಿನಿಂದಲೂ, ಆರನ್ನೂ, “ ಆವಾ” ಎಂದು ಸಂಬೋಧಿಸಲಿಲ್ಲ. ಇಂದುಹಚ್ಚಿದ ನಕ್ಷಲದಲ್ಲಿ ಮುಖವನ್ನಿಟ್ಟುಕೊಂಡು,
8(b)
ಶ್ರೀಕೃಷ್ಣ ಸೂಕ್ತಿ ಮುಕ್ತಾವಳಿ.

'ಅಮ್ಮಾ” ಎಂದು ಅಳುವುದಕ್ಕೆ ಅಭ್ಯಾಸವಾಯಿತು. ದಾಮಿನಿಯು ದಿಂಬಿನಲ್ಲಿ ಮುಖವನ್ನಿಟ್ಟುಕೊಂಡು, ಅತ್ತು ಬಿಟ್ಟಳು.

ತೃತೀಯ ಪರಿಚ್ಛೇದ

ಆವ ಗ್ರಾಮದಲ್ಲಿ ರಮೇಶನು ವಾಸವಾಗಿದ್ದನೋ ಅದರ ತೆಂಕಣ ದಿಕ್ಕಿನಲ್ಲಿ, ನದಿಯ ತೀರದಲ್ಲಿ ಮುರಿದುಹೋದ ಮಹಡಿಯ ಮನೆಯೊಂದ್ದಿತು. ವದಂತಿ ಯೂ ಇದ್ದಿತು; ಏನೆಂದರೆ, ಆರೋ ರಾಜನೊಬ್ಬನು ಎಷ್ಟೋ ಮೊದಲು ತನ್ನ ತಾಯ ಗಂಗಾವಾಸದ ನಿಮಿತ್ತದಿಂದ ಆ ಭವ್ಯಭವನವನ್ನು ಕಟ್ಟಿಸಿದನು; ಆದರೆ, ದೈವವಶಾತ್ತಾಗಿಯೊ ನೋ - ಅದರಲ್ಲಿಯೇ ಒಂದು ಸ್ನೇಹತ್ಯೆಯುಂಟಾಗಲು, ರಾಜಮಾತೃವು ಅದನ್ನು ಪರಿತ್ಯಾಗಮಾಡಿದಳು; ಅಂದಿನಿಂದ, ಆರೂ ಅದರಲ್ಲಿ ವಾಸಮಾಡಿದುದಿಲ್ಲ
. ಅತಏವ, ಆ ಮಂದಿರವ ಪ್ರೇತಮಂದಿರವೆಂದು ಹೆಸರ್ಗೊಂಡಿತು. ಭೌತಿ
ಕಾಪವಾದವಂತಾದುದರಿಂದ, ಕೊನೆಕೊನೆಗೆ ಹಗಲುಹೊತ್ತಿನಲ್ಲಿ ಯೂ ಆಫ್ ಅದರ ಹತ್ತಿರದಿಂದ ಹಾಯ್ದು ಹೋಗುವುದಕ್ಕೆ ಕೂಡ ಸಾಹಸಪಡುತ್ತಿರಲಿಲ್ಲ.
ಉನ್ಮಾದಿನಿ ನೋಡಿದಳು, ವಸತಿಯಿಲ್ಲಗ ಆ ಭಯಾನಕವಾದ ಭಗ್ನ ಮಂದಿ

ರವೇ ತನ್ನ ವಾಸಕ್ಕೆ ಯೋಗ್ಯವೆಂದುಕೊಂಡಳು. ಹಾಗೆಯೆ, ಅದರಲ್ಲಿ ಗೋಷ್ಯ ವಾಗಿ ವಾಸಮಾಡಲಾರಂಭಿಸಿದಳು. ದಾಮಿನಿಯನ್ನು ನೋಡಿದ ಮೊದಲು, ಎಷ್ಟೋ, ಮನಸ್ಸು ಸುಸ್ಥವಾಗಿದ್ದಿತಾದರೂ, ಒಂದು ಬಾರಿಗೆ ಹೇಗಾದರೂ ಅವ ಳನ್ನು ಕದ್ದುಕೊಂಡು ಬಂದು, ರಹಸ್ಯವಾದ ಈ ಸ್ಥಳದಲ್ಲಿಟ್ಟು ತಾನೊಬ್ಬಳೆ ಮನ ದಣಿಯೆ ತನ್ನ ಆ ದಾಮಿನಿಯನ್ನು ನೋಡಿಬಿಡುವೆನೆಂದು ಅವಳನ್ನು ಒಮ್ಮೆಯೊಮ್ಮೆ ತನ್ನ ಮನಸ್ಸಿನಲ್ಲಿಯೇ ಸ್ಥಿರವಾಡುವಳು. ಆದರೆ, ಉತ್ತರಕ್ಷಣದಲ್ಲಿಯೆ, ಆ ಕಾ ರ್ಯದ ಕರ್ತವ್ಯತೆಯನ್ನು ತಿಳಿದು, ಅದನ್ನು ತನ್ನ ಹೃದಯದಿಂದ ದೂರಮಾಡಿ ಬಿಡುವಳು ಮನಸ್ಸಿನ ಚಾಂಚಲ ಕಾ ವಿಶೇಷವಾಗಿ ಅಲ್ಲಿಗೆ ಹೋಗಿ ಬಂದು ಮಾಡಿದರೆ, ಅಳಿಯನಿಗೆ ಸಂದೇಹವುಂಟಾಗುವುದೆಂದೂ, ಕಳಂಕವು ಸಂಭವಿಸುವು ದೆಂದೂ ಭಯದಿಂದ, ಪುನಃ ಆ ಕಡೆಗೆ ಹೋಗಲೇ ಇಲ್ಲ. ಭಗ್ನಮಂದಿರದಲ್ಲಿ ಒಬ್ಬ ಛೇ ಕುಳಿತು ತನ್ನಷ್ಟಕ್ಕೆ ತಾನೇ ದಾಮಿನಿಯನ್ನು ಆದರಮಾಡುವಳು. ದಾಮಿನಿ ಯನ್ನು ಆವ ಬಗೆಯಾಗಿ ರಮೇಶನು ಆದರಮಾಡುವನೋ, ಆದರ ವಿಚಾರವನ್ನು ಕುಳಿತಲ್ಲಿಯೆ ಭಾವಿಸಿಕೊಳ್ಳುವಳು.
9
ದಾಮಿನಿ.

ಒಂದು ದಿನ ರಾತ್ರಿ ಸುಮಾರು ಎರಡು ಭಾವಗಳಾಗಿರಬಹುದು; ಶಿತಲ
ವಾದ ಗಂಗಾಬಾದಲ್ಲಿ ಉನ್ಮಾದಿಸಿಯು ಅವಗಾಹನಸಾನವಾಡಿ, ಆ ಭಗ್ನಮಂದಿ ರದ ಮಾಳಿಗೆಯ ಮೇಲೆ ಕತ್ತಲೆಯಲ್ಲಿ ಕುಳಿತು ಕೂದಲನ್ನು ಒಣಗಿಸಿಕೊಳ್ಳುತ್ತಿ ದಳು. ಕೂದಲ ರಾಶಿಯು ನಾನಾ ದಿಕ್ಕುಗಳಲ್ಲಿ ನಾನಾವಿಧವಾಗಿ ಹಾರಾಡು ತಿತ್ತು; ಓಲಾಡುತ್ತಿತ್ತು. ಅಷ್ಟರಲ್ಲಿಯೆ ಪೂರ್ವದಿಶೆಯ ಅರಳಿಯ ಮರದ ಕೆಳಗೆ ಹಠಾತ್ತಾಗಿ ಒಂದು ಕುದುರೆಯ ಹೇಮಾರವವು ಕೇಳಬಂದಿತು. ಬಲಗಲ್ಲ ಈ ತಗುಡ್ಡನನ್ನು ಹಿಡಿದು, ಅತೀಕ್ಷದೃಷ್ಟಿಯಿಂದ ಉನ್ಮಾದಿನಿಯು ಆ ವೃಕ್ಷಮೂಲ ವನ್ನು ನೋಡುತ್ತ ನಿಂದಳು. ನೋಟಗಳು: ಕ್ರಮಕ್ರಮವಾಗಿ ಒಂದೆರಡು ದಿನ ಟಿಗೆಗಳನ್ನು ಹಚ್ಚಿದರು. ಅದರ ಬೆಳಕಿನಲ್ಲಿ ಆಸ್ತ್ರಧಾರಿಗಳಾದ ಕೆಲವು ಸೈನಿಕರೂ ' ಅಶ್ವಾರೋಹಿಯಾದ ಪುರುಷನೊಬ್ಬನೂ ಕಾಣಬಂದರು. ಅವರು ಕಳ್ಳರಬಹು ದೆಂದು ಅವಳು ಮೊದಲು ಯೋಚಿಸಿದಳೂ ಆಮೇಲೆ ಎಲ್ಲಿಯಾದರೂ ತನ್ನ ದಾ ಸಸಿಯ ಮನೆದು ಕಳವಮೂಡಿಸಿಟ್ರ? -ನಾದಿನಿಗೆ ಅದೇ ಭಯ; ಅದೇ ಆಶಂಕೆ ಬೇಗಬೇಗನೆ ಮಾಳಿಗೆಯನ್ನಿಳಿದು ಕಳ್ಳರ ಬಳಿಗೆ ಹೋಗಬೇಕೆಂದು ಹೊರ ಟಳು. ಹೊರಟವಳಿಗೆ ಮನಸ್ಸಿನಲ್ಲಿ ಏನೋ ತೋರಿತು. ಇನಃ ಮನಿಷಿನಕ್ಕೆ ಹೋ', ಭೈರವಿವೇಷವನ್ನು ಧಾರಣಮಾಡಿಕೊಂಡು, ಭೀಕರವಾದ ತ್ರಿಶಲವನ್ನು ಸ್ಥಯ್ಯಲ್ಲಿ ಹಿಂದು, ದರ್ಪದಿಂದ ಹೊರಸರಿದಳು, ಸ್ವಲ್ಪ ಸಖಾಸಕ್ಕೆ ಹೋದ ಮೇಲೆ ಪಲ್ಲಕ್ಕಿಯೊಂದು ಕಾಣಿಸಿತು. ಉನ್ಮಾದಿನಿಯ ಮನಸ್ಸಿನಲ್ಲಿಯೆ : ಬಿಸತೊಡಗಿದಳು:- “ ಅವರ ಕೃತಿ: ಕಳರಿಗೆ ಪಲ್ಲಕ್ಕಿಯಕ? ಬಹಳವಾಡಿ ಅವರಾಡೊ ಕನ್ಯಾರ್ಥಿಗಳಾಗಿರಬೇಕು. ಹೀಗೆಂದು ಉಸಾದಿಸಿದ ವಿವರ ಮೊಡನೆ ಹೊರಟಳು, ದಾಮಿನಿಯ ಮದುವೆಯನ್ನ ನೋಡುವದಂತೂ ಆಗಲಿಲ್ಲ; ಈ ವಿವಾಹವನ್ನಾದರೂ ನೋಡುವವೆಂದು ಪರದಹ್ವಾದದಿಂದ ಪಲ್ಲಕ್ಕಿಯ ಬಳಿ ಚಿತೆಯಲ್ಲಿಯೇ ಮುಂದೆ ನಡೆದಳು. ಕತ್ತಲೆಯಲ್ಲಿ ಆರೂ ಅವಳನ್ನ ನೋಡು', ನೋಡಲಿಲ್ಲ: ಹಾಗೆಯೇ ಸ್ವಲ್ಪ ದೂರ ಹೋದ ಒಳಿತ, ಪಲ್ಲಕ್ಕಿಯನ್ನು ಹೊತ್ತವ ರಲ್ಲಿ ಯೋಬ್ಬನು ಅವಳನ್ನು ಕಂಡು ಕೋಪಬಂಗ...“ಯಾರೆ ಸೀನು? ಇಂತಹ ಅವೇಳೆಯಲ್ಲಿ ನಮ್ಮ ಜೊತೆಯಲ್ಲಿ ಬರುತ್ತಿರುವೆ?”... ಎಂದು ಕೂಗಿಕೊಂಡನು. ಅದಕ್ಕೆ ಹುಚ್ಚಿಯು- ( ಅಣ್ಣ! ಕೂಗಬೇಡ. ನಿಸನೆ ವಿವಾಹವನ್ನು ನೋಡುವದ ಕೈಂದು ಬರುತ್ತಿದ್ದೇನೆ. ಆದರೆ, ವಾಲಗದವರೇಕೆ ಇಲ್ಲ?” ಎಂದಳು.
ಸೈನಿಕನು ಹೇಳಿದನು:- “ಇಂದು ಭಯಂಕರವಿವಾಹವು. ಇಂತಹ ವಿ
ವಾಹಕ್ಕೆ ವಾದ್ಯಗಳಿರುವುದಿಲ್ಲ.”

ಆ ಮಾತನ್ನು ಹುಚ್ಚಿಯ ಕಿವಿಗೆ ಹಾಕಿಕೊಳ್ಳಲಿಲ್ಲ; ಅವನನ್ನು ತನ್ನ ಮನ
10
ಶ್ರೀಕೃಷ್ಣ ಸೂಕ್ತಿಮುಕವಳಿ.

ಬಂದಂತೆ ಪ್ರಶ್ನೆಮಾಡತೊಡಗಿದಳು: "ವರನೆಲ್ಲಿಯವನು? ಕನೈಯೆಲ್ಲಿಯವಳು?”
“ಹಿಂದೂಗಳ ಕನ್ಯ; ಮುಸಲಮಾನರ ವರ!”
“ಸಳ್ಳು ಮಾತು!”
ರಮಣಿಯ ಹುಚ್ಚಿಯೆಂದು ತಿಳಿದುಕೊಂಡ ವಾಹಕನು ಅವಳೊಡನೆ
ತಮಾಷೆ' ಮಾಡಲಾರಂಭಿಸಿದನು. ವರನಾದ ಉನ್ಮಾದಿನಿಯು ಪದೇಪದೇ ಕೇ ಚುತ್ತಿದ್ದುದರಿಂದ ಅವನು ಅಶ್ವಾರೋಹಿಯನ್ನು ತೋರಿಕೊಟ್ಟನು. ಉನಾದಿಸಿ ಯ ನೋ ರಿದಳು; ಅಸಂಭವವೆಂದು ತೋರಲಿಲ್ಲ. ವಯಸ್ಸು ಚಿಕ್ಕದು; ಒರತಾ ಲಯ ಬಟ್ಟೆಗಳನ್ನು ಉಟ್ಟುತೊಟ್ಟಿದ್ದಾನೆ...ಇದರ ಮೇಲೆ, ಏನನ್ನು ಕೇಳುವುದು? ಮತ್ತೇನನ್ನೂ ಮಾತನಾಡದೆ, ಅವಳು ಅವರ ಚಿತೆಯಲ್ಲಿಯೇ ಮುಂದೆ ನಡೆದಳು.
ಸಂಗಡಿಗರ ಪರಿಚಯವನ್ನು ಕೊಡಕೂಡದೆಂಗೆ: ವಾಹಕನಿಗೆ ಕಟ್ಟಣತಿಯಾ
ಗಿದ್ದಿತು. ಆ ಅಣತಿಯೂ ಕ್ರಮಕ್ರಮವಾ? ಅವನಿಗೆ ಭಾರವೆಂದು ತೋರುತ್ತ ಒಂದಿತಾ, ಹಚ್ಚಿ ದೊರೆತನೆಯ ಅದನ್ನು ತಿಳಿಸಿಕೊಡುವೆನೆಂದು ಅವನು ಆಲೋಚಿಸಿದನು, ಆದರೆ, ಆ ಹಕ್ಕಿ ಆವ ಮಾತನ್ನೂ ಕೇಳದೆ ಹೋದುದರಿಂದ, ಅವನ ಆ ಆಸೆ ಪೂರಯ್ಯುವುದಕ್ಕೆ ವ್ಯಾಘಾತವೊಂದವಿತ್ತು. ಕೊನೆಗೆ ಏನಾದರೂ ಆಡಿಯೋ ಬಿಡುವೆನೆಂದು ನಿರ್ಧರಿಸಿ ಅವನೆ ಹುಣ್ಣಿಮೇವನೆ ಸಂಭಾಷಣೆಯನ್ನು ಪ್ರಾರಂಭಿಸಿದನು. ಹೆಂದನು: -- " ನೀನು ಹೆಂಗುಸು. ನನ್ನ ಜೊತೆಯಲ್ಲಿ ಬರುವುದು ಒಳ್ಳಿದಲ್ಲ. ಇನ್ನು ಕೆಂಪ ಹೊತ್ತಿನಲ್ಲಿಯೇ ಮಾರಾಮಾರಿ'ಗೆ ಆರಂಭವಾಗ ವದು. ಸೀಸೀಗಲೇ ಪಲಾಯನಮಾಡು.'
ಹುಚ್ಚಿ: ವಿವಾಹವೆಂದರೆ ಶುಭಕಾರ್ಯ, ಆದರಯೂ 'ಮಾರಾಮಾರಿ
ಯೋಕೆ?
ವಾಹಕ: _ ಈ ವ್ಯಾಪಾರವು ವಿವಾಹವಲ್ಲ. ಅದೊ! ಅಲ್ಲಿ ನೋಡು.
ಆವನು ಜರತಾರಿಯ ಬಟ್ಟೆಗಳನ್ನು ಧರಿಸಿ, ಕಕ್ಕಿಯನ್ನು ಹಿಂದು, ಕುದುರೆಯ ಮೇಲೆ ಹೋಗುತ್ತಿರುವನೋ ಅವನು ನಮ್ಮ 'ಫೌಜುದಾರರ ಮಗನು, ಈ ಗ್ರಾಮಾಂತರ ದಲ್ಲಿ ಅಪೂರ್ವಸುಂದರಿಯೊಬ್ಬಳಿರುವಳೆಂದು ಕೇಳಿ, ಅವಳನ್ನು ಬಲಾತ್ಕಾರದಿಂದ ಅಪಹರಿಸಿ ತರುವುದಕ್ಕಾಗಿ ಹೊರಟಿರುವನು. ಅದರಿಂದಲೇ ಹೇಳಿದೆನು-- ಮಾರಾ ಮಾರಿ'ಯಾಗುವುದೆಂದು.?

ಹುಚ್ಚಿಯ ಭಯದಿಂದ ಕಂಪಿಸತೊಡಗಿಗಳು, ಕೇಳಿದಳು:- “ಅಪ್ಪ! ಆರ

ಮಗಳನ್ನು ಅಪಹರಿಸಿ ತರಬೇಕೆಂದಿರುವಿರಿ?
11
ದಾಮಿನಿ.

ವಾಹಕನು ಹೇಳಿದನು:-“ಅದೆಲ್ಲವೂ ನನಗೆ ಚೆನ್ನಾಗಿ ತಿಳಿಯದು. ಅದಾವ
ಳೋ ಭಟ್ಟಾಚಾರ್ಯನ ಸೊಸೆಯಂತೆ ಅವಳ ಗಂಡನು ಕೆಲವು ದಿನಗಳಿಗೆ ಮೊಗ ಲು ಆವನೋ ಒಬ್ಬ ಶಿಷ್ಯನ ಮನೆಗೆ ಹೋಗಿರುವನಂತೆ, ಸುಂದರಿಯ ಹೆಸರನ್ನು ದಾಮಿನಿಯೆಂದು ಹೇಳಿದರು.
ಕೇಳಿದೊಡನೆಯೆ, ಉನ್ಮಾದಿನಿಯ ಕಿಡಿಕಿಡಿಯಾಗಿ ಹೆಣ್ಣು ಹಾವಿನಂತೆ ವಾಹ
ಕನ ಸಮ್ಮುಖದಲ್ಲಿ ದಾರಿಗಟ್ಟಿ ಸಿಂಮ ಬಂಗಯ್ಯ; ತ್ರಿಶೂಲವನ್ನು ಒಳಪಿಸಿದಳು, ಆ ಭೀಕರಮೂರ್ತಿಯನ್ನು ನೋಡಿ, ವಾಹಕನು ಭಯಗೊಂಡ- ಆಮ! ನಾನು ಬಡವನು. ಹೊಟ್ಟೆಯ ಪಾತಿಗಾಗಿ ಇವೆಲ್ಲವನ್ನೂ ಮಾಡುತ್ತಿದ್ದೇನೆ. ನನ್ನನ್ನು ಹೊಡೆದು ಆಗುವುದೇನು? ನಾನು ಹಿಂದೂ; ಹಿಂದೂಗಳ ಮೇಲೆ ಅತ್ಯಾಚಾರವ ನ್ನು ನಡೆಸುವುದು ನನಗೆ ಇಷ್ಟವಲ್ಲ. ಈಗಲೇನಾದರೂ ಗಬೆಮಾಡಿದರೆ, ಈ ಯವಸರು ನಿನ್ನನ್ನು ತುಂಡುತುಂಡುಮಾಡಿ ಬಿಸುಡುವರು. ಆದುದರಿಂದ ನನ್ನ ಮಾತನ್ನು ಕೇಳು; ನೀನು ಬೇರೊಂದು ಮಾರ್ಗವಾಗಿ ಬೇಗಬೇಗನೆ ಹೋಗಿ, ಗಾ. ಮವಾಸಿಗಳಿಗೆ ಈ ಸಂಗತಿಯನ್ನು ತಿಳಿಹಿ, ಜಾಗ್ರತೆಗೊಳಿಸು. ಎಲ್ಲರೂ ಏಕಸ್ಥರಾಗಿ ಅತ್ತಿ ಮಾಡಿದರೆ, ನಿನ್ನ 'ಇಷ್ಟವು ಸಫಲವಾದರೂ ಆಗಬಹುದು. ಇದಲ್ಲದೆ ಇನ್ನು ಬೇರೆಯ ಉಪಾಯವಿಲ್ಲ-ಎಂದನು.
ಆಲಿಸಿದದೆ ತಡ, ಹುಚ್ಚಿ ಸು ನಿಲ್ಲಲಿಲ್ಲ. ಓಡೋಡು ಹೊಗಿ, ಹಳಿ
ಯನ್ನು ಹೊಕ್ಕು, ಪ್ರತಿಯೋಂದು ಮನೆಯ ಬಾಗಿಲಲ್ಲಿಯೂ ಚೀತ್ಯಾಗಮಾಡು ತ್ಯ ಹೇಳತೊಡಗಿದಳು: ಹಿಂದೂಗಳ ಹಿಂದೆ ಹೋಗುತ್ತಿದೆ; ಎಲ್ಲರೂ ಏಳಿ! ಸತಿಯರ ಸತೀವ್ರ ಹೋಗುತ್ತಿದೆ; ಒಂದು ಬಾರಿ ಎಲ್ಲರೂ ಏಳಿ? ಅದಿತಿ ಭಟ್ಟಾಚಾರ್ಯನ ಸರ್ವ ನಾಶವಾಗುತ್ತಿದೆ; ಎಲ್ಲರೂ ಅಳಿ! 'ಘಒಂದರ'ನ ಮಗನು ಬಂದು ಅವನ ಸೊಸೆಯನ್ನು ಸೆಳೆದುಕೊಂಡುಹೋಗುತ್ತಾನೆ; ಎಲ್ಲರೂ ಒಂದು ಬಾರಿ
ಆರೂ ಏಳಲಿಲ್ಲ; ಕೆಂಬರು ಹೇಳಿದರು:--- “ಶತ್ರು ಬಂದಗೆ ಬರಲಿ! ಪರರಿಗ
ಅವೆ?” “ಇನ್ನೊಬ್ಬರಿಗಾಗಿ ತಲೆಗೊಡುವುದರಿಂದ ನಮಗೆ ಆಗುವ ಪ್ರಯೋಜನ ವೇನ?” ... ಎಂದು ಕೆಬರೆಂದರು. ಮತ್ತೆ ಕೆಲಬರು: – ದಿತಿಗೆ ಸರ್ವನಾಶ ವಾದರೆ, ಆಗಬಾರದೇಕೆ? ಅದರಿಂದ ನಮಗೆ ಏನು ನಷ್ಟ?' - ಎಂದರು,
ಇದೆ: ನಷ್ಟವಿದೆ. ಇತರದೇಶಗಳವರೆಲ್ಲರೂ ಅದನ್ನು ಬಲ್ಲರು; ಆದರೆ, ನಾವು

ಮಾತ್ರ ಇನ್ನೂ ಅರಿಯೆವು. ಎಪತ್ತು ಇಂದು ನಮಗೆ; ನಾಳೆ ನಿಮಗೆ ಅತ್ಯಾಚಾ ರವು ಒಂದು ಮನೆಯನ್ನು ಪ್ರವೇಶಮಾಡಕೂಡಿತೆಂದರೆ, ಎಲ್ಲ ಮನೆಗಳ ದಾರಿಯನ್ನೂ ಕಂಡುಹಿಡಿಯುವುದು. ಒಂದು ಮನೆಗೆ ಅಗ್ನಿಪ್ರವೇಶವಾದರೆ, ಎಲ್ಲ ಮನೆಗಳನ್ನೂ ಹೊತ್ತಿಸಿಬಿಡುವುದು, ಅನ್ಯರ ಮನೆಯ ಅಗ್ನಿಯನ್ನು ಆವನು ಆರಿಸುವನೋ, ಅವ
12
ಶ್ರೀಕೃಷ್ಣ ಸೂಕ್ತಿಮುಕ್ತಾವಳಿ

ನೇ ತನ್ನ ಮನೆಯನ್ನೂ ಕಾಪಾಡಿಕೊಳ್ಳುವನು, ಈ ಬಗೆಯ ಜ್ಞಾನವು ನಮ್ಮಲ್ಲಿ ಎಷ್ಟೋ ಕಾಲದ ಹಿಂದೆಯೇ ಅಂತರ್ಹಿತವಾ? ಹೊ?ಗಿದೆ; ಆದುದರಿಂದಲೇ, ಹುಕ್ತಿ ಯ ಕೂಗಿಗೆ ಆರೂ ಕಿವಿಗೊಡಲಿಲ್ಲ!
ದುರ್ವತ್ಯಯವನರ ಅತ್ಯಾಚಾರವನ್ನು ಆರೂ ನಿವಾರಿಸಲಿಲ್ಲ! ರಮೇಶನ
ತಂದೆ ಅದಿತಿಶಾರದು ಕೇವಲ ಏಕಾಕಿ; ಅದರಲ್ಲಿಯೂ ವೃದ್ದನು, ದಾಮಿನಿ ಯನ್ನು ತಕ್ಕೆ ಸವ್ರರಕ್ಕೆ ಅವಸಿಂವಾಗಲಿಲ್ಲ. ಯವನರು ಮನೆಯ ಬಾಗಿಲನ್ನೊಡೆದು ಮೂಚಿ -ತೆಯಾದ ಆ ದಾಸಿಯನ್ನು ಎತ್ತಿಕೊಂcಹೋದರು
ಹುಚ್ಚಿ ನೋಡಿದಳು; ಆರೂ ಏಳಲಿಲ್ಲ; -- ಆರೂ ಸಾಯಮಾಡುವರು
ಇಲ್ಲದೆಹೋದರು. ರಮೇಶನ ಮನೆಯ ಬಾಗಿಲ ವರೆಗೂ ಒಂದು ನೋಡಿದಳು;»ಲ್ಲವೂ ಮುಗಿದಿದೆ;--ದಾಸಿಯನ್ನು ಎತ್ತಿಕೊಂಡೇ ಹೋಗಿದ್ದಾರೆ, ಅವಳ ತಲೆ ನಲ್ಲಿ ಅಪ್ರಜ್ವಲಿಸತೊಡಗಿತು. ಮೊದಲಿನಂತೆಯೇ ಉನ್ಮತ್ತೆಯಾಗಿ, ಸಿಂಪಿ ಯಂತೆ ಒಂದು ಕ್ಷಣ ಅಲ್ಲಿ ನಿಂದಳು. ಕೊನೆಗೆ ತ್ರಿಶಲವನ್ನೆತ್ತಿಕೊಂಡು ಹೊರಟಳು.
ಯಷಸರು ಒಂದು ಅರಣ್ಯದ ಮಧ್ಯದಲ್ಲಿ ಧಾಮಿನಿಯನ್ನು ಕರೆದುಕೊಂಡು
ಹೋಗುತ್ತಿದ್ದರು, ಪಲ್ಲಕ್ಕಿಯ ನಾಲ್ಕು ಕಡೆಗಳಲ್ಲಿಯ ಅಸ್ತ್ರಧಾರಿಗಳಾದ ಸೈನಿ ಕರು: ಎಲ್ಲರಿಗೂ ಹಿಂದೆ, “ನೌಜವರನ ಮಗನು ಕುದುರೆಯನ್ನೆ ಹೋಗುತ್ತಿ ಆನೆ, ಹುಚ್ಚಿಯ ವಾಯವೆಗೆ ಬಂದ ಅತ್ತಿಗೆ ಬಂದೆ, ತ್ರಿಶೂಲವನ್ನು ಚಚಿ ದಳು. ತ್ರಿಶ೧೩ವ 'ಫೌಜುದಾನ ಮಗನ ಬೆನ್ನಿನಲ್ಲಿ ಹೋಕ, ದೆಯಲ್ಲಿ ದೂರ ಮೂಡಿತು. ಅವನ ದೇಹವು ಅಲುಗಿತು ಕೊನೆಗೆ ಆತ್ಮಸೃಷ್ಟತತವಾಗಿ ಏಳಗೆ ಓದಿ ತು, ಹುಕ್ತಿ ಯು ನಿಕಟಹಾಸವನ್ನ ಮಗಳು, ಕುದುರೆಯು ಬಡತಿ ತವಾಯ್ತು. ಪದಾತಿಕರು ಹಿಂದಿರುಗಿ ನೋಡತೊಡಗಿದರು.
ಉಸ್ಮಾನಿದಿಯು ಪುನಃ ವಿಕಟಹಾಸವನ್ನು ಮಾಡುಮಾಡುತ್ತೆ ಓಡತೊಡಗಿ
ದಳು. ಅವಳಿಗೆ ವಿನಿಯ ಸ್ಮರಣೆಯ ಒರಲ್ಲ. ಆ ಮೇಲೆ ಉನ್ಮಾದಿಸಿಯ ಆವ ನೋಡಲಾರದೆ ಹೋರರು, ಸವಾತಿಕರು ನೋಡಿದರು; "ಘಜುದಾ ರ'ನ ವಗಸಿಗೆ ಇದಕರವಾಗಿ ಏಟುಬಿಟ್ಟಿತು. ಅವನನ್ನೆತ್ತಿಕೊಂಡು ಹೊಗಿ ಪಲ್ಲಕ್ಕಿಯಲ್ಲಿ ಮಲಗಿಸಿದರು. ಪಲ್ಲಕ್ಕಿಯಲ್ಲಿದ್ದ ದಾಮಿನಿಯನ್ನು ನೆಲದಲ್ಲಿಳಿಸಿ' ಹೊರಟುಹೋದರು.
ದಾನಿಯೊಬ್ಬಳೇ ಅರಣ್ಯ ಮಧ್ಯದಲ್ಲಿ ಬಿದ್ದಿದ್ದಾಳೆ. ನವಪಲ್ಲವಿತ ಪುಷ್ಪಿತ

ಲತೆಯನ್ನು ಆಧಾರಭೂತವಾದ ವೃಕ್ಷದಿಂದ ಕಿತ್ತು, ನೆಲದಲ್ಲಿ ಬಿಸುಟರೆ, ಗಾಳಿಯ ಹೊಡೆತದಿಂದ ಅದು ಹೇಗೆ ಪ್ರಕಸಿತವಾಗುತ್ತಿರುವುದೋ,- - ಅರಣ್ಯದಲ್ಲಿ ಬಿದ್ದಿದ್ದ ದಾಮಿನಿಯ ಅವಸ್ಥೆಯೂ ಅದೇ ಆಗಿದ್ದಿತು. ಗಾಳಿಗೆ ಅವಳ ಸೀರೆಯ ಸೆರಗು ಹಾ ರವಿಡುತ್ತಿತ್ತು.
13
ದಾಮಿನಿ.
ಚತುರ್ಥಪರಿಚ್ಛೇದ.

ಬೆಳಗಾಯಿತು. ರಮೇಶನ ತಂದೆಯಾದ ಅದಿತಿವಿಶಾರದನು ನಾಮಾವಳಿಯನ್ನು ಹೊದೆದುಕೊಂಡು, ಹೊರಗೆ ಚಾವಡಿಗೆ ಬಂದನು. ಇನ್ನೂ ಸಂಧ್ಯಾವಂದನೆಯಾಗಿ ರಲಿಲ್ಲ. ದಾಮಿನಿಯಿಲ್ಲ;.- ಸಂಧ್ಯಾವಂದನೆಯ ಸಾಮಗ್ರಿಗಳನ್ನು ಇನ್ನಾರು ಒದ ಗಿಸಿಕೊಡುವರು? ವಿಶಾರದನು ಅತ್ಯಂತವಿಮರ್ಷಭಾವದಿಂದ ಒಬ್ಬನೇ ಕುಳಿತಿ ದ್ದನು. ಕ್ರಮಕ್ರಮವಾಗಿ ನೆರೆಕರೆಯವರೂ, ಗ್ರಾಮಸಿವಾಸಿಗಳೂ, ಆತ್ಮೀಯಬಂಧು ವರ್ಗದವರೂ, ತಮ್ಮ ತಮ್ಮ ಆತ್ಮೀಯತೆಯನ್ನು ತೋರಪಡಿಸುವುದಕ್ಕೆಂದು ಒಬ್ಬೊಬ್ಬ ರಾಗಿ ಬರಲಾರಂಭಿಸಿದರು. ಬಂದವರಲ್ಲಿ ಕೆಲಬರು- “ಆಹಾ! ಎಂತಹ ವಿಪತ್ತು ಎಂತಹ ವಿಪತ್ತು!” – ಎಂದೂ, ಕಲಬು--ಯಾವಾಗ ಯಾರಿಗೆ ಏನು ಸಂಭವಿಸು ವದೋ, ಯಾರು ಹೇಳಬಲ್ಲರು?”- ಎಂದೂ, ಮತ್ತೆ ಕೆಲಬರು“ಎಲ್ಲಕ್ಕೂ ಆದ್ಯ ಸ್ವವೇ ! ಅವನವನ ಅದೃಷ್ಟಕ್ಕೆ ಅನುಗುಣವಾಗಿಯೇ ಎಲ್ಲವೂ ನಡೆವುದು!” - Jಂದೂ ಬಗೆಬಗೆಯಾಗಿ ಹೇಳತೊಡಗಿದರು. ಅದಿತಿವಿಶಾರದನು ಇದೊಂದ ಕ ಉತ್ತರವನ್ನೇ ಕೊಡದಿರುವದನ್ನು ನೋಡಿ ಆ ಜನಸಮೂಹದಲ್ಲಿದ್ದ ಗಣೆಶ ಚಂದ್ರನೆಂಬ ಮಧ್ಯವಯಸ್ಕ ಸ್ಕೂಲಶರನೂ ಆದ ಪ್ರತಿವಾಸಿಯೊಬ್ಬನು ಆದಿ ತಿಯನ್ನು ಕುರಿತು-ಇದರ ಸೂಚನವಾವುದೂ ಮೊದಲೇ ಇರಲಿಲ್ಲವೆ? ಎಂದರೆ, ಮೊದಲು ತಮಗೆ ಇದಾವ ವಿಷಯವೂ ಗೊತ್ತಾಗಿರಲಿಲ್ಲವೆ ಏನು?” ಎಂದನು. ಅದಿತಿಯು ಮೆಲ್ಲ ಮೆಲ್ಲನೆ ನಿಶಾಸವನ್ನು ಪರಿತ್ಯಾಗಮಾಡಿ-- “ಅಣ್ಣ! ಮೊದಲೇ ಗೊತ್ತಿದ್ದರೆ, ಈ ರೀತಿಯಗುತ್ತಿತ್ತೆ? ರಮೇಶನನ್ನು ವಿದೇಶಕ್ಕಾದರೂ ಏತಕ್ಕೆ ಕಳಿಸಿ ಕೊಟ್ಟೆನೋ? ಈ ರಾತ್ರಿ ರಮೇಶನಿದ್ದಿದ್ದರೆ, ಸೃಗಾಲಗಳಿಗೆ ಸಿಂಹದ ಗುಹೆಯನ್ನು ಪ್ರವೇಶಮಾಡುವುದು ಸಾಧ್ಯವಾಗುತ್ತಿತೇನು?'... ಎಂದನು.
ಗಣೇಶ:- “ಅಹುದೆ? ಇ೦ತಹ ವೇಳೆಯಲ್ಲಿ ರಮೇಶನಿಂದಾದರೂ ಪ್ರಯೋ
ಜನವೇನು? ನಾವೇ ತಮ್ಮ ಸೊಸೆಯನ್ನು ಉಳಿಸಬಹುದಾಗಿದ್ದಿತು. ಆದರೆ, ಏನು ಮಾಡುವ ಎಲ್ಲ ಸಮಯಗಳಲ್ಲಿ ಯ ಸಾಹಸವಿರುವುದಿಲ್ಲ, ಯುವರು ಸುಮಾರು ಇಪ್ಪತ್ತು ಮಂದಿ; ನನೊಒಂಟಿತನು. ಆದರೂ ಚಿಂತೆಯಿಲ್ಲವೆಂದರೆ, ನಾನು ಹೊರಗಣ ಕೋಣೆಯಲ್ಲಿ ಮಲ ಆಗುತ್ತಿತ್ತು; ಏನಾದರೊಂದು ಮಾಟ ಬಿಡುತ್ತಿದ್ದೆನು. ಆದರೆ ತಮ್ಮ ದೌರ್ಭಾಗ್ಯದಿಂದಲೋ – ಅಥವಾ ರಮೇಶನ ದರ ದೃಷ್ಟದಿಂದಲೋ, ಏನೋ, - ನಾನು ಆ ಸಮಯದಲ್ಲಿ ಒಳಗೇ ಮಲಗಿಬಿಟ್ಟಿದ್ದೆನು. ಮಲಗಿದ ಮೇಲೆ ಫಕ್ಕನೆ ಏಳುವುದಕ್ಕೆ ಬರುವುದಿಲ್ಲ; ಆದರೂ, ಆಕ* ಕೂಗಿದ


* * ಹೆಂಡಿತಿಯ ಹೆಸರನ್ನು ಹೇಳದಿರುವುದು ಪೂರ್ವಸಂಪ್ರದಾಯದವರ ಪದ್ಧತಿ.

14
ಶ್ರೀಕೃಷ್ಣ ಸಕ್ತಿಮುಕ್ತಾವಳಿ.

ಮೇಲೆ ಎದ್ದೆನು; ಒಳ್ಳೆಯ ಬಟ್ಟೆಗಳನ್ನು ಹಾಕಿಕೊಂಡು, ಇನ್ನೇನು?- ಹೊರಡ ಬೇಕೆಂದು ಯೋಚಿಸಿ, ಆ ಕತ್ತಲೆಯಲ್ಲಿಯೂ ನಸ್ಯದ ಡಬ್ಬಿಯನ್ನು ಹುಡುಕಿ ತೆಗೆದು, ಒಂದು ಚಿಟಿಕೆಯ ನಸ್ಯವನ್ನು ಅಭ್ಯಾಸವಿಲ್ಲದಿದ್ದರೂ ಮಗಿಗೆ ಏರಿಸಿದೆನು, ಇಂತಹ ಕಾರ್ಯಗಳಲ್ಲಿಯೆಲ್ಲ ನಸ್ಯವಿಲ್ಲದಿದ್ದರೆ, ಆಗುವುದೇ ಇಲ್ಲ. ಆ ಮೇಲೆ ನೋಡಿದೆನು; --ಮೆಯ್ಯೆಲ್ಲ ಬೆವರಾಗಿದ್ದಿತು; ಬೆವರಿನಿಂದ ಸರ್ವಾಂಗವೂ ತೊಯ್ದು ಹೋಗಿದ್ದಿತು. ಈ ಎಲ್ಲ ಕಾರ್ಯಗಳಿಗೂ ಬೆವರುವುದು ಒಳ್ಳೆಯದಲ್ಲ ;-- ಆ ಮೇಲೆ ಆ ಯವನರು ಹಿಂದಿರುಗಿ ಓಡಿಹೋದರೆ?... ಏನು ಮಾಡಲಿ? ಎಂದಾಲೋಚಿಸಿ, ಗಾತ್ರವರ್ಜನಿಯನ್ನು ತೆಗೆದುಕೊಂಡು, ವಿಲಕ್ಷಣವಾಗಿ ಮಯ್ಯನ್ನೊರಸಿಕೊಂಡೆನು. . ಎಲ್ಲ ವಿಚಾರಗಳೂ ಒಟ್ಟೂಟ್ಟಿಗೆ ನೆನಪಾಗುವುದಿಲ್ಲ! ಮೆಯ್ಯನ್ನೋರಸಿಕೊಂಡ ಮೇಲೆ ಅಸ್ತ್ರದ ನೆನಪಾಯಿತು. ಅಸ್ತ್ರವಿಲ್ಲದೆ ಹೋಗಿ ಮಾಡುವುದೇನು? ಬಡಿ ಗೋಲನ್ನು ತಂದುಕೊಡೆಂದು ಆಕೆಗೆ ಹೇಳಿದೆನು. ಅವಳು ತರುವಳೆ? ಅದರಿಂದ ಕೆಲಸವಿಲ್ಲವೆಂದು ಹೇಳಿಬಿಟ್ಟಳು. ಕೊನೆಗೆ ಒಂದು ಮಗು--ಆ ನನ್ನ ಏಳನೆಯ ಮಗು-ಒಂದು ಇಟ್ಟಿಗೆಯನ್ನು ತಂದುಕೊಟ್ಟಿತು. ಅದನ್ನು ತೆಗೆದುಕೊಂಡು, ಬಿಸಿಲು ಮಾಳಿಗೆಯ ಮೇಲೆ ಹತ್ತಿ ನೋಡುತ್ತೇನೆ; ಏನನ್ನು ನೋಡುವುದು? ದುವ್ಯತ್ಯರೆಲ್ಲ ರೂ ಈಗಲೇ ಹಿಂದಿರುಗಿಹೋಗುತ್ತಿದ್ದಾರೆ. ಇನ್ನು ಇಟ್ಟಿಗೆಯಿಂದ ಫಲವೇನೆಂದು, ಅದನ್ನು ಹಾಗೆಯೆ ಎಸೆದುಬಿಟ್ಟೆನು.”
ಗಣೇಶಚಂದ್ರನು ಈ ಪರಿಯಾಗಿ ಆತ್ಮಶೌರ್ಯವನ್ನು ಪರಿಚಯಮಾಡಿಕೊಡು
ತಿದ್ದನು. ಆ ವೇಳೆಗೆ ಒಕ್ಕಲಿಗನೊಬ್ಬನು ಅಲ್ಲಿಗೆ ಬಂದು, ವರ್ತಮಾನಕೊಟ್ಟನು: -- “'ನೌಜುದಾರನ ಮಗನು ಮಾರ್ಗದಲ್ಲಿಯೆ ಸತ್ತು ಬಿದ್ದಿದ್ದಾನೆ; ಹೊಡೆದವರಾ ರೆಂಬುದು ಇನ್ನೂ ಗೊತ್ತಾಗಿಲ್ಲ.”
ಅತ್ಯಾನಂದದಿಂದ ಗಣೇಶಚಂದ್ರನು- “ಹಾಗಾದರೆ, ಸರಿನಾನೇ, ನನ್ನ
ಇಟ್ಟಿಗೆಯೇಟಿನಿಂದಲೇ ಅವನಿಗೆ ಮರಣ! ನಿಜವಾಗಿಯೂ ಹೇಳುತ್ತೇನೆ;-ಆಯವನ ನನ್ನು ನಾನೇ ಕೊಂದೆನು, ನನ್ನ ಗುರಿಯೆಂದರೆ ಏನು? ಸಾಮಾನ್ಯವೇ?”... ಎಂದನು.
ಇನ್ನೊಬ್ಬನು ಸ್ವಲ್ಪ ಸಕ್ಕು-“ಅಂತಹ ಮಾತನ್ನು ಆಡುವುದೇ ಒಳ್ಳೆದಲ್ಲ.
ಸತ್ತವನು 'ಫೌಜುದಾರನ ಏಕಮಾತ್ರ ಪುತ್ರನು. ಅಂತಹ ಮಗನನ್ನು ಅವನು ಕೊಂದಿರುವನೋ ಅವನ ಅದೃಷ್ಟದಲ್ಲಿ ಶೂಲವೇ ಬರೆದಿರುವುದು!”ಎಂದನು.
ಈ ಬಾರಿ ಭಯದಿಂದ ಗಣೇಶನು ನಡುಗಿದನು. ಕಂಪಿತಸ್ತರದಿಂದ ಮೆಲ್ಲ

ಮೆಲ್ಲನೆ ಹೇಳತೊಡಗಿದನು:- " ನಿಜವಾಗಿಯೂ ಇದುವರೆಗೂ ಹಾಸ್ಯವಾಡುತ್ತಿದ್ದೆ
15
ದಾಮಿನಿ.

ನಲ್ಲದೆ ಬೇರೆಯಿಲ್ಲ. ನಾನು ಹಾಗೆ ಹೇಳಿದೆನೆ? ಏನೆಂದು ಹೇಳಿದೆನು? ಏನೂ
ಇಲ್ಲ. 'ಫೌಜುದಾರನ ಮಗನಿಗೆ ನನ್ನಿಂದ ಕೇಡು ಸಂಭವಿಸಿತೆಂದರೆ, ಸಂಭವನೀ
ಯವೆ? ಎಂದಿಗೂ ಅಲ್ಲ. ಆಗಳಿನಿಂದಲೂ ನಾನು ಹೇಳುತ್ತಿದ್ದುದು ಒಂದೇ.
ನನ್ನಷ್ಟು ಕೂಗಿದರೂ, ನಾನು ಮಾತನಾಡಿದೆನೆ? ರಮೇಶನು ದೊಡ್ಡವನೋ –
'ಫೌಜುದಾರನ ಮಗನು ದೊಡ್ಡವನೋ??? -ಹೇಳುಹೇಳುತ್ತೆ, ಅವನು ಅಲ್ಲಿಂದ
ಕಾಲ್ಗೆಗೆದನು.
'ಫೌಜುದಾರನ ಮಗನ ಮರಣಸಂವಾದವನ್ನು ತಂದ ಆ ಕೃಷಕನು ಅದಿತಿ
ವಿಶಾರದನನ್ನು ಕುರಿತು- “ಮಹಾಶಯ! ತಮ್ಮ ಸೊಸೆಯವರೂ ಹಿಂದಿರುಗಿ ಮನೆ
ಗೆ ಬರುತ್ತಿದ್ದಾರೆ” ಎಂದನು.
ಕೇಳಿದೊಡನೆಯೆ, ವಿಶಾರದನು ಎಲ್ಲರ ಮೊಗವನ್ನೂ ನೋಡಿದನು. ಆರೂ
ಏನನ್ನೂ ಹೇಳಲಿಲ್ಲ. ಕೊನೆಗೆ, ವಿಶಾರದನು ತಾನಾಗಿಯೇ ಎಲ್ಲರೊಡನೆ “ಆ
ಯ್ಯ! ಈಗ ಮಾಡತಕ್ಕುದೇನು? ನನ್ನ ಹೊಸ ಯವನಪ್ಪರ್ಶಿತೆಯಾಗಿರುವಳು;
ಅಂತಗಳನ್ನು ಪುನಃ ಗ್ರಹಣಮಾಡಬಹುದೇ-ಕೂಡದೇ?” ಎಂದು ಕೇಳಿದನು.
ಅದಕ್ಕೆ ಅವರೆಲ್ಲರೂ--“ಮಹಾಶಯ! ತಾವು ಅದ್ವೀತಿಯ ಪಂಡಿತರು. ಇದರ
ಇತ್ಯರ್ಥವನ್ನು ತಾವೇ ಮಾಡಬೇಕಾಗಿದೆ. - ಎಂದರು. ವಿಶಾರದನು ಕೊಂಚ
ಹೊತ್ತು ಏನನ್ನೋ ಯೋಚಿಸುತ್ತಿದ್ದು, ಕೊನೆಗೆ ಒಳಗೆ ಹೋಗಿ, ಗೃಹಿಣಿಯೊಡ
ನೆ ಈ ವಿಚಾರವನ್ನು ಕುರಿತು ಆಲೋಚಿಸತೊಡಗಿದನು.
ಗೃಹಿಣಿಯು ಹೇಳಿದಳು:- “ಅದೇ ಹುಡುಗಿಯನ್ನು ಪುನಃ ಮನೆಗೆ? ಅದೇ
ನಿಮ್ಮ ಇಷ್ಟವಾದರೆ, ಬೇರೆಯ ಮನೆಮಾಡಿಕೊಂಡು ಸಂಸಾರಮಾಡಬಹುಮ!”
ಅದಿತಿ:- “ಏನು ಹಾಗೆಂದರೆ? ಅವಳಲ್ಲಿ ಏನು ದೋಷ?
ಗೃಹಿಣಿ:-ದೋಷವೆಲ್ಲವೂ ನನ್ನದೇ, ಹಾಗಾದರೆ!?
ಅದಿತಿ;-.-“ಇಲ್ಲ; ನಿನ್ನನ್ನು ದೋಷಿಯೆಂದು ಹೇಳಲಿಲ್ಲ. ಸೊಸೆಯನ್ನು ಪು
ನಃ ಕರೆದುಕೊಳ್ಳುವುದರಿಂದಾದರೂ ಉಂಟಾಗುವ ದೋಷವೇನೆಂದು ಕೇಳಿದೆನು;
ಅಷ್ಟೆ" ಗೃಹಿಣಿ:-“ದೋಷವು ಏನೇ? ದೋಷವು ಎಷ್ಟೋ ಇದೆ. ಮೊದಲು,
ಜನರು ಮುಖಕ್ಕೆ ಕಪ್ಪು ಸುಣ್ಣವನ್ನು ಬರೆಯುವರು. ಆಮೇಲೆ, ಶಿಷ್ಯರು ಗುರುಗ
ಳನ್ನು ತ್ಯಾಗಮಾಡುವರು. ಆಗ ನಮ್ಮ ಮಕ್ಕಳುಮರಿಗಳಿಗೆ ಏನು ಗತಿ???
ಅದಿತಿ:-“ಜನರೇತಕ್ಕೆ ದೂರುವರು? ಶಿಷ್ಯರೇತಕ್ಕೆ ತ್ಯಜಿಸುವರು? ನಮ್ಮ

ಸೊಸೆಯೇನೂ ಕುಲತ್ಯಾಗಿನಿಯಲ್ಲ; ಇಚ್ಚಾಪೂರ್ವಕವಾಗಿ ಹೋದವಳಲ್ಲ; ಹೋದ
16
ಶ್ರೀಕೃಷ್ಣ ಸೂಕ್ತಿಮುಕ್ತಾವಳಿ.

ವಳೂ, ಆ ಯವನನ ಮನೆಗೆ ಏನೂಹೋಗಲಿಲ್ಲ; ಮಾರ್ಗಮಧ್ಯದಿಂದಲೇ ಹಿಂದಕ್ಕೆ ಬಂದಿದ್ದಾಳೆ.”
ಗೃಹಿಣಿ:- “ಏನು? ಕುಲತ್ಯಾಗಿನಿಯಲ್ಲವೊ? ಇಚ್ಚಾಪೂರ್ವಕವಾಗಿ ಹೋ
ದವಳಲ್ಲವೆಂದು ನಿಮಗೆ ಯಾರು ಹೇಳಿದರು? ಎಲ್ಲ ವಿಚಾರವೂ ನಿಮಗೆ ಬಹುಶಃ ತಿಳಿದಿರಬಹುದು. ಕೆಲವು ದಿವಸಗಳ ವರೆಗೆ ಒಬ್ಬ ಹೆಂಗಸು ಹುಚ್ಚಿಯ ವೇಷದಿಂದ ಆಗಾಗ ಇಲ್ಲಿಗೆ ಬಂದುಹೋಗುತ್ತಿದ್ದಳು. ಒಂದು ದಿನ, ಸಂಜೆಯ ವೇಳೆಯಲ್ಲಿ ನಿಮ್ಮ ಸೊಸೆಯನ್ನು ಕಟ್ಟಿಕೊಂಡು ಓಡಿಹೋಗುವುದರಲ್ಲಿದ್ದಳು; ನಾನು ಹೋಗಿ, ಬಿಡಿಸಿಕೊಂಡು ಬಂದೆನು. ಹಿಂದಿರುಗಿ ಬಂದವಳು ತಲೆದಿಂಬಿನಲ್ಲಿ ಮುದವನ್ನಿಟ್ಟುಕೊಂಡು, ಪುನಃ-ಏನು ಆ ಹುಡುಗಿಯ ಅಳು! ನಾನೇನು ಇದೆಲ್ಲವನ್ನೂ ನಿಮ್ಮೊಡನೆ ಹೇಳಿದೆನೆ? ನಿಮ್ಮ ಆ ಸೊಸೆಯಾವಾಗ ನಾನಿರುವ ಪರ್ಯಂತವೂ ವುನಃ ಓಡಿಹೋಗುವುದು ಅಸಂಭವವೆಂದು ತಿಳಿದಳೋ ಆಗ ಈ ಮಂತ್ರಾಲೋಚನೆಯನ್ನು ಮಾಡಿ, ಜನಗಳನ್ನು ಬರಮಾಡಿಕೊಂಡು ಹೊರಟುಹೋಗಿರುವಳು.”
ಗೃಹಿಣಿಯು ಹೇಳಿದುದನ್ನು ಕೇಳಿ, ಅದಿತಿಗೆ ವಿಸ್ಮಯವುಂಟಾಯಿತು. ಒಂದೆ
ರಡು ಬಾರಿ -ಶಾಸ್ತ್ರವೆಂದಿಗೆ ಸುಳಾದೀತು? ಸ್ತ್ರಿಚರಿತ್ರವು ಯಾರಿಗೆ ಗೊತ್ತು?” - ಎಂದುಕೊಂಡು, ಕೊನೆಗೆ ಗೃಹಿಣಿಯನ್ನು ಕುರಿತು--- ಅಹುದು; ನೀನು ಹೇಳಿ ದುದರಲ್ಲಿ ನನಗೂ ನಂಬುಗೆಯುಂಟಾಗುತ್ತಿದೆ. ಇನ್ನೆಂದಿಗೂ ಅವಳನ್ನು ಮನೆಗೆ ಸೇರಿಸುವುದಿಲ್ಲ.'ಎಂದನು.
ಅದಿತಿಯು ಚಾವಡಿಗೆ ಬಂದು ಸಮುವೇತರಾದ ಎಲ್ಲರೊಡನೆಯೂ ಹೀಗೆಂದು

ಹೇಳಿದನು:--ಅಯ್ಯಾ! ನನಗೆ ಏನೋ ಭ್ರಾಂತಿಯುಂಟಾಗಿತ್ತು. ಇದುವರೆಗೂ ನನ್ನ ಸೊಸೆ ಸಿರ್ದೋಷಿಯೆಂದು ತಿಳಿದಿದ್ದೆನು. ಈಗ ಗೊತ್ತಾಯಿತು; ನಿಬಸ್ಥಿತಿ ಹಾಗೆ ಅಲ್ಲ. ನೀವೆಲ್ಲರೂ ನನ್ನ ಆತ್ಮೀಯರು; ನಿಮ್ಮಲ್ಲಿ ಹೇಳಿಕೊಳ್ಳುವುದಕ್ಕೆ ನಾ ಚುಗೆಯಾದರೂ ಏನು? ನನ್ನ ಸೊಸೆ ಕುಲಟೆ. ಅನೇಕದಿನಗಳಿಂದಲೂ ಮನೆಯ ನ್ನು ಬಿಟ್ಟು ಓಡಿಹೋಗುವುದಕ್ಕೆ ಪ್ರಯತ್ನ ಮಾಡುತ್ತಿದ್ದಳು. ಆದರೆ, ಗೃಹಿಣಿಯ ಸೂಕ್ಷದರ್ಶಿತೆಯಿಂದ ಅವಳ ಪ್ರಯತ್ನವು ಸಫಲವಾಗಲು ಮಾರ್ಗವಿಲ್ಲದೆ ಹೊಡಿ ಯಿತು. ಈಗ ನನ್ನ ಈ ಮನೆಯ ಬಾಗಿಲನ್ನೊಡೆದು ಮಾಡಿದ ಸಾಹಸಕಾರ್ಯ ವೆಲ್ಲವೂ ಆ ನನ್ನ ಸೊಸೆಯ ಆಪ್ತಲೋಚನೆಯ ಕೌಶಲದಿಂದಲೆ ನಡೆದುದಾಗಿದೆ. ಆದು ಹೇಗಾದರೂ ಇರಲಿ; ಅವಳು ನಿರ್ದೋಷಿಯೆಂದು ನಾವು ಅವಳನ್ನು ಗ್ರಹ ಇಮಾಡಿದರೂ, ಈಗ ಆವಳು ಯವನನಿಂದ ಸೃಷ್ಟಳಾಗಿರುವಳೆಂಬ ವಿಷಯದಲ್ಲಿ ಆವ ಸಂದೇಹವೂ ಇಲ್ಲ. ಅತ ಏವ, ಶಾಸ್ತ್ರ ಸಮ್ಮತವೆಂದು ಅವಳನ್ನು ಹೇಗೆ ತಾನೇ ಮನೆಗೆ ಸೇರಿಸುವುದಾದೀತು? ಎಲ್ಲ ಪಾಪಗಳಿಗೂ ಶಾಸ್ತ್ರದಲ್ಲಿ ಪ್ರಾಯಶ್ಚಿತ್ಯವಿದೆ;
17
ದಾಮಿನಿ.

ಅಂತೆಯೆ, ಈ ಪಾಪಕ್ಕೂ ಅಗತ್ಯವಾಗಿ ಉಂಟು, ಆದರೂ ಅವಳನ್ನು ಮನೆಗೆ ಸೇರಿಸಿದರೆ, ಮತ್ತೊಂದು ವಿಪತ್ತು ಅತ್ಯಗತ್ಯವಾಗಿಯೂ ಉಂಟಾಗಬಹುದು. 'ಸೌಜುದಾರ'ನು ಯೋಚಿಸಿಯನು; - ತನ್ನ ಮಗನನ್ನು ನಾವೇ ಕೊಂದು, ಹುಡುಗಿಯನ್ನು ಮನೆಗೆ ಸೇರಿಸಿಕೊಂಡೆವೆಂದು, ನಾನೊಬ್ಬನೇನು? ಇವಳಿಗೆ ಚಿತ್ರ ದಗೆಟ್ಟ ಎಲ್ಲರ ಮೇಲೆಯೂ ಇದೇ ಸಂದೇಹವು ಅವನಿಗೆ ಉಂಟಾಗುವುದು. ಎಲ್ಲಕ್ಕಿಂತ ಆತ್ಮರಕ್ಷಣವೇ ಮನುಷ್ಟರ ಮುಖ್ಯಧರ್ಮ: ಈ ವಿಷಯಕ್ಕೆ ಇಸ್ತ್ರ ದಲ್ಲಿ ಎಷ್ಟೆಷೆ ಪ್ರರ್ಮಾಣಗಳಿವೆ. ಈಗ ನಾನು ಒಳ್ಳಯ ಧಾರವದೇನೆಂದರೆ, - ಹುಡುಗಿಯ ಮನೆಗೆ ಬರುವೆನೆಂದು ಹೇಳಿದರೂ, ಇನ್ನು ನಾನು ಇಲ್ಲಿ ಅವಳಿಗೆ ಎಡೆಗುಡುವುದಿಲ್ಲ. ನೀವೆಲ್ಲರೂ ಈ ವಿಚಾರವಾಗಿ ಏನು ಹೇಳುತ್ತೀರಿ?”
ಸಮಸ್ತರೂ ಏಕವಕ್ಕದಿಂದ ಹೀಗೆಂದು ಹೇಳಿದರು - “ ತಾವು ಮಾಡಿರುವ
ಈ ಒಹಳ ಚೆನ್ನಾಗಿರುವುದು, ನಾವೂ ಈ ಪರಾಮರ್ಶಾನುಸಾರವಾಗಿ ಯೆ ನಡೆದುಕೊಳ್ಳದೆ, ತಮ್ಮ ಸೊಸೆಗೆ ನಾವಾ ಸ್ಟಳಕೊಡುವುದಿಲ್ಲ. ಇನ್ಯಾರಾದರೂ ಸ್ಥಳವನ್ನು ಕೊಡುವುದಕ್ಕೆ ಇಷ್ಟಪಟ್ಟರೂ, ಅವರನ್ನು ತಡೆಯುತ್ತೆ ವೆ, ಒಬ್ಬ ಪಾಪಿಷ್ಟೆಯ ನಿಮಿತ್ತವಾಗಿ ಗ್ರಾಮಸ್ಥರೆಲ್ಲರೂ ಏಕೆ ವಿಪದ್ಧಸ್ತಕಗ ಬೇಕು? ಅವರಲ್ಲಿಯೂ ಕುಲಜೆಯಾದವಳಿಗೆ ಸ್ಥಳಕೊಡುವುದು ಉಚಿತವೆ. ಇ ಈ ಸ್ಥಳವು ದೊರೆಯದಿದ್ದರೆ, ಅಗತ್ಯವಾಗಿಯೂ ಅವಳು ತಾನಾಗಿಯೇ ಇನ್ನೊಂದು ಕಡೆಗೆ ಹೊರಟುಹೋಗುವನು"
ಎಲ್ಲರೂ ಈ ಬಗೆಯಾಗಿ ತಮ್ಮತಮ್ಮಲ್ಲಿ ಸಿಕ್ಕಯಮಾಡಿಕೊಂಡು, ಮನೆಯದ
ಇನ್ನು ಈ ವಿಷಯದಲ್ಲಿ ಎಚ್ಚರಗೊಳಿಸುವುದಕ್ಕಾ, ಹೊರಟುಹೋದರು.

ಪಂಚಮ ಪರಿಚ್ಛೇದ.

ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೊರಟುಹೋಗಿ, ಸ್ವಲ್ಬವೇ ಹೊತ್ತಾಯಿತು.

ಗೃಹಿಣಿಯು ಅದಿತಿಯನ್ನು ಕರೆದು ಅದೊ! ನೋಡಿ. ಆ ನಿಮ್ಮ ದೇಜ ಲೆಯ ಕುಲೋಲಕಾರಿಣಿಯೂ ಆದ ಸೊಸೆ ಬರುತ್ತಿದ್ದಾಳೆ, ಈಗ ಏನು ಹೇಳಬೇಕೋ ಬಂದು ಹೇಳಿ!”-ಎಂದಳು. ಕೇಳಿ, ಅದಿತಿವಿಶಾರದನೆದು ಬಾ ಗಿಲ ಹತ್ತಿರ ಬಂದು ನಿಂದನು. ನೋಡಿದನು. ದಾಮಿನಿಯು ಅಧೋವದನೆಯಾ ಗಿ, ಮುಖವನ್ನು ಮುಚ್ಚಿಕೊಂಡು, ಮೆಲ್ಲಮೆಲ್ಲನೆ ಬರುತ್ತಿದ್ದಳು. ಬಾಗಿಲಲ್ಲಿಯೇ
18
ಶ್ರೀಕೃಷ್ಣ ಸೂಕ್ತಿಮುಕ್ತಾವಳಿ.

ಮಾವನನ್ನು ಕಂಡ ಬಳಿಕ, ಕೇಳುವುದೇನು? ದಾಮಿನಿಗೆ ಇನ್ನು ಸುಮ್ಮನಿರುವುದ ಕೈ ಆಗದೆ ಹೋಯಿತು; ಅವಳು ಅತ್ತು ಬಿಟ್ಟಳು. ಪಾಪ! ಮಹಾಯಾತನೆಯನ್ನೇ ಅನುಭವಿಸಿದ್ದಳು. ಬೇರೆಯ ದಿನವಾಗಿದ್ದರೆ, ಅವಳ ಆ ಅಳುವನ್ನು ನೋಡಿ, ಅದಿತಿ ಯೂ ಅತ್ತು ಬಿಡುತ್ತಿದ್ದನು; ಆದರೆ ಇಂದು ಅವನು ಅಳಲಿಲ್ಲ. ಕಣ್ಣಿನಲ್ಲಿ ನೀರು ಬಂದಿದ್ದು ದೇನೋ ನಿಜ; ಆದರೆ, ತನ್ನ ಗ್ರಹಿಣಿಯನ್ನು ಅಜ್ಞಾತವಾಗಿ ನೋಡಿ, ಅದ ನ್ನು ಸಂವರಣಮಾಡಿದನು. ಆ ಮೇಲೆ, ನಸ್ಯದ ಡಬ್ಬಿಯನ್ನು ಹೊರಗೆ ತೆಗೆದು, ಒಂದೆರಡು ಬಾರಿ ಬೆರಳಿಂದ ಬಡಿದು, ದೊಡ್ಡದೊಂದು ಚಿಟಿಕೆಯ ತುಂಬ ನಸ್ಯವ ನ್ನು ತೆಗೆದುಕೊಂಡು ಬಲವಾಗಿ ಸೇದಿ, ಕಣ್ಣುಗಳನ್ನು ಮುಚ್ಚಿ, ಸೊಸೆಯನ್ನು ಶಿಸಿ- “ವತ್ತೆ! ಎಷ್ಟೋ ಬಗೆಯಾಗಿ ಯೋಚಿಸಿ ನೋಡಿದೆ. ನಿನ್ನನ್ನು ಇನ್ನು ಗ್ರಹಣ ಮಾಡುವುದಕ್ಕೆ ಆಗುವುದಿಲ್ಲ. ಯವನನು ನಿನ್ನನ್ನು ಸ್ಪರ್ಶಮಾಡಿದ್ದಾನೆ ಬಾಹ್ಮಣರ ಮನೆಯಲ್ಲಿ ಇನ್ನು ನಿನಗೆ ಸ್ಪಳವು ದೊರೆಯಲಾರದು, ಇನ್ನೆಲ್ಲಿಗಾದ ರೂ ಹೋಗು!ಎಂದು ಹೇಳಿ, ಬಾಲನ್ನು ಹಾಕಿಕೊಂಡು ಒಳಗೆ ಹೋದನು.
ದಾಮಿನಿಗೆ ಮೊದಲು ಏನೂ ಗೊತ್ತಾಗಲಿಲ್ಲ: ಆ ಮೇಲೆ ಮಾವನ ಮಾ
ತನಾಡಿದ ಪ್ರತಿಯೊಂದು ವಾಕ್ಯವನ್ನೂ ಸ್ಮರಣೆಗೆ ತಂದುಕೊಂಡು, ಅರ್ಥಮ ಕೊಂಡಳು. ಆದರೆ, ಅದನ ಅವಳು ನಂಬಲಾರದೆ ಹೋದಳು. ಭಾವಿಸಿದಳು; -ಇದೆಲ್ಲವೂ ಸ್ವಪ್ನವಾಗಿರಬಹುದೆ?- ಸ್ವಪ್ನವಹುದೋ, ಅಲ್ಲವೋ ಎಂಬುದನ್ನು ಸ್ಥಿರಪಡಿಸುವುದಕ್ಕಾಗಿ ನಾಲ್ಕು ಕಡೆಯ ದೃಷ್ಟಿಸಿ ನೋಡಿದಳು. ಹತ್ತಿರದಲ್ಲಿಯೇ ಒಂದು ಹುಣಿಸೆಳು ಮರ; ಅದರ ಒಣದ ಕೊಂಬಿನ ಮೇಲೆ ಒಂದು ಹದ್ದು ಕುಳಿ ತಿದೆ; ಹಿಂಚಾಗಿ ಸರೋವರದ ನೀಲಜಲದಲ್ಲಿ ಹಂಸಪಕ್ಷಿಗಳು ಈಸಾಡುತ್ತವೆ; ಮೆಟ್ಟಿ ಸಮೀಪದಲ್ಲಿಯೇ ಮುಸುರೆಯ ಪಾತ್ರಗಳು; ಆವ ದಾಸಿ ಅವುಗಳನ್ನು ನೀರಲ್ಲಿ ಸಿಹೋಗಿದ್ದಳೋ ಅವಳ ಚಲಸಿಕ್ತವಾದ ಕಾಲ ಹಟ್ಟೆಗಳೂ ಸೋಪಾನದಲ್ಲಿ ಸ್ಪಷ್ಟ ವಾಗಿ ತೋರುತ್ತವೆ; ಮಾವನು ಮುಚ್ಚಿಕೊಂಡು ಹೋದ ಬಾಗಿಲು ಈಗಲೂ ಮುಚ್ಚಿಯೇ ಇದೆ. ದಾಮಿನಿಯು ಒಂದು ಬಾರಿ ಅದನ್ನು ತಳ್ಳಿ ನೋಡಿದಳು. ಆ ಮೇಲೆ ತನ್ನ ಮೈಯ್ಯನ್ನೂ ಕಣ್ಣುಗಳನ್ನೂ ಸವರಿಕೊಂಡು ಪುನಃ ನೋಡಿದಳು. ಸ್ವಪ್ನವಲ್ಲ; ಎಲ್ಲವೂ ಸತ್ಯ ಘಟನೆ! ಮನೆಯನ್ನು ಪ್ರವೇಶಮಾಡುವದಕ್ಕೆ ನಿಷೇಧ ವಿರುವುದೂ ಸತ್ಯ ಘಟನೆ; ಬ್ರಾಹ್ಮಣರಿಗೆ ಅಗಾಹೈ'ಯೆಂಬ ಆವ ಮಾತನ್ನು ದಾಮಿ ನಿಯು ಕೇಳಿದ್ದಳೊ ಅದೂ ಸ್ವಷ್ಟವಲ್ಲ! ದಾಮಿನಿಯ ಕಣ್ಣುಗಳಲ್ಲಿ ಸೂರ್ಯನು ಅಸ್ತಮಿಸಿಹೋದನು; ಎಲ್ಲವೂ ಅಂಧಕಾರ;- ದಾಮಿನಿಯು ಬಿದ್ದುಬಿಟ್ಟಳು.
ಸ್ವಲ್ಪ ಹೊತ್ತಿನ ಮೇಲೆ ಗ್ರಾಮದಲ್ಲಿಯ ಎಷ್ಟೋ ವೃದ್ಧೆಯರು, ಮಧ್ಯವಯ

ಸೈಯರು, ಯುವತಿಯರು, ಬಾಲಿಕೆಯರು, ಎಲ್ಲರೂ ಬಂದು ದಾಮಿನಿಯ ಸುತ್ತ
19
ದಾಮಿನಿ.

ಲೂ 'ಗೇರಾಯಿಸಿ' ಎಂದರು. ದಾಮಿನಿಗೆ ಆಗಲೂ ಮನೋವಿಕಾರವು ಹೋಗಿರ ಲಿಲ್ಲ. ಎಲ್ಲಿ ಬಿದ್ದಿದ್ದಳೋ ಅಲ್ಲಿಯೆ ನತಮುಖಿಯಾಗಿ ಕುಳಿತುಕೊಂಡು, ಅನ್ಯಮ ಸಕ್ಕೆಯಾಗಿ ಒಂದು ಕರಿಕೆಯನ್ನು ಉಗುರಿಂದ ಸೀಳುತ್ತಿದ್ದಳು. ಅನ್ಯಮನಸ್ಕೆಯಾ ಗಿರಲಿ ಸಮನಸ್ಕೆಯೇ ಆಗಿರಲಿ;-- ಅಂತೂ ಅವಳ ಕಣ್ಣುಗಳಿಂದ ವಾರಿಧಾರೆಯು ಪ್ರವಹಿಸುತ್ತಿದ್ದಿತು.
ನೆರೆದವರಲ್ಲಿ ಒಬ್ಬ ವೃದ್ದ ದಾಮಿನಿಯನ್ನು ನೋಡುತ್ತೆ – “ ಅಯಯ್ಯೈ! ಇಂತ
ಹೆ ಅದೃಷ್ಟವನ್ನು ಪಡೆದು, ಭಾರತಭೂಮಿಯಲ್ಲಿ ಹುಟ್ಟಬಹುದೆ? ಆಹಾ! ಎಂತಹ ಅದೃಷ್ಟ! ಎಂತಹ ದೌರ್ಭಾಗ್ಯ!” ಎಂದಳು. ದಾಮಿನಿಯು ಮೆಲ್ಲ ಮೆಲ್ಲನೆ ತಲೆ ಯನ್ನೆತಿ, ಕಾತರಗೊಂಡ ಹರಿಣಯ ದೃಷ್ಟಿಯಿಂದ ಆ ವೃದ್ದೆಯ ಮುಖವನ್ನೇ ನೋಡುತ್ತಿದ್ದಳು. ನಯ ವುಸತಿ ಹೇಳತೊಡಗಿದಳು:--ಅಯ್ಯೋ! ಈ ಮುಖದ ಕಡೆಗೆ ಆ ಮನೆಹಾವವನು ಒಂದು ಬಾರಿಯಾದರೂ ತಿರು! ನೋಡಲಿಲ್ಲವಲ್ಲ? ಧರ್ಮವೂ ದೊಡ್ಡದಾಗಲ್ಲ; ಜಾತಿಯೇ ದೊಡ್ಡದಾಯಿತು! ಅಯೋ: ಹಳವಿಧಾತ ಸಿ: ಹಣೆಯಲ್ಲಿ ಕೆಟ್ಟುದನ್ನು ಒರೆವುದಕ್ಕೆ ನಿನಗೆ ಇನ್ನಾರೂ ದೊರೆಯಲಿಲ್ಲವೆ? ಈ ವ ಯಸ್ಸಿನಲ್ಲಿ ಇಂತಹ ಕಷ್ಟ! ಆಹಾ! ಎಂತಹ ಹುಡುಗಿ ಹುಡುಗಿಯಲ್ಲ; ಸ್ವರ್ಣಲತೆ!?
ಮತ್ತೋಬ್ಬಳು ಮಧ್ಯವಯಸ್ಯೆಯ ದಾಮಿನಿಯ ನಿರೀಕ್ಷಿಸಿ...ಆಹಾ
ನಮ್ಮ ದಾಮಿನಿ.ಚಿರಸಿಯೇ ಆಗಿಹೋದಳು: ವೃದ್ದೆಯಾದ ಆಜ್ಞೆ ದಾಮಿನಿಗೆ ಮದುವೆಯಾದಾಗ ಇಷ್ಟು ದಿನಗಳಿಗೆ ಮೇಲೆ ನಮ್ಮ ದಾಮಿಸನಿಗೆ ಒಂದು ಮಾರ್ಗ ವಾಯಿತು; ಇನ್ನು ನಾನು ನಿಂತೆಯಾಗಿ ಸಾಯಬಲ್ಲೆನು' ಎದ್ದಳು. ಆಯೋ! ಈಗ ಆ ಅಜ್ಜಿ ಒದುಕಿದರೆ? ದಾಮಿನಿಗೆ ಒಂದು ಸ್ಥಾನವಿರುತ್ತಿತ್ತು. ಈಗ ಇನ್ನು ಅವಳಿಗೆ ನಿಲ್ಲುವುದಕ್ಕೆ ಕೂಡ ಒಂದು ಸ್ಥಳವೂ ಉಳಿಯಲಿಲ್ಲ!” ಎಂದಳು. ದಾಮಿನಿಯ ಮೆಯ ನಡುಗಿತು. ಘನವಸನಿಶ್ವಾಸಗಳು ಹೊರಡಲಾರಂಭಿಸಿದುವು. ಕೊನೆಗೆ, ಅವಳು ಆ ಆಯ್ಕೆಯನ್ನು ನೆನೆದು ಅಳತೊಡಗಿದಳು, ತನ್ನ ಆ ಮಾತಾಮಹಿ ಯನ್ನು ಅಭಿಪ್ರಾಯಪೂರ್ವಕವಾಗಿ ಸಂಬೋಧನಮಾಡುತ್ಯ- “ ಅಮ್ಮಾ ಅಮ್ಮಾ? ನನ್ನನ್ನು ಯಾರೊಡನೆ ಬಿಟ್ಟು ಹೊರಟುಹೋದ?" -- ಎಂದು ಉಚ್ಚ ಕಂಠದಿಂದ ರೋದಿಸತೊಡಗಿದಳ.
ಈ ಆಕ್ರಂದನವನ್ನು ಕೇಳಿ, ಅವಳ ಅತ್ತೆಯು ಕೋಪಾವಿಷ್ಟೆಯಾಗಿ, ದೊಡ್ಡ

ಶಬ್ದದಿಂದ ಬಾಗಿಲನ್ನು ತೆರೆದುಕೊಂಡು ಹೊರಗೆ ಬಂದು, “ಚೆನ್ನಾಯಿತೆ? ಎಂತಹ ಹಾಳ ನಡತೆಯೆ ನಿನ್ನದು? ಈ ಅಲ್ಲದ ಹೊತ್ತಿನಲ್ಲಿ ಗೃಹಸ್ಥರ ಮನೆಯ ಬಾಗಿಲಲ್ಲಿ ಕುಳಿತು, ಹಾಳ ಗೋಳಿಗೆ ಆರಂಭವಾಗಡಿದೆ. ಇದರಿಂದ ಗೃಹಸ್ಥರಿಗೆ ಅಮಂಗಳವಾ ಗುವುದೆಂದು ಗೊತ್ತಿಲ್ಲವೆ? ಚಿಃ! ಚಿಃ! ಎಂತಹ ನಾಚುಗೆಗೇಡಿ!”- ಎಂದು ತಿರ
20.
ಶ್ರೀಕೃಷ್ಣ ಸೂಕ್ತಿಮುಕ್ತಾವಳಿ.

ಸ್ಕಾರಸೂಚಕವಾದ ಮಾತುಗಳನ್ನಾಡಿದಳು. ಆ ಮೇಲೆ, ಅಲ್ಲಿದ್ದ ನೆರೆಕರೆಯವರನ್ನು ಉದ್ದೇಶಿಸಿ-“ಆಹುದೆ? ಇನ್ನು ನಿಮ್ಮದಾದರೂ ಎಂತಹ ಆಚರಣೆ? ನಿಮ್ಮ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು. ಅನ್ಯರ ಮಕ್ಕಳನ್ನು ಆಡಿಸಬಂದಿರಿ! ನಿಮಗೆಲ್ಲರಿಗೂ ಇದೇ ಸಮಯವೆಂದು ತೋರುತ್ತಿದೆ. ಇರಲಿ! ಪರಮೇಶ್ವರನು ಒಂದಲ್ಲದಿದ್ದರೆ ಒಂದು ದಿನ ನನಗೂ ಕೊಟ್ಟಾನು; ನನಗೂ ಒಂದು ದಿನ ಇಂತಹ ಸಮ ಯವು ಸಿಕ್ಕಿತು!- ಎಂದಳು.
ಆರೂ ಆವ ಉತ್ತರವನ್ನೂ ಕೊಡಲಿಲ್ಲ. ಎಲ್ಲರೂ ಒಬ್ಬೊಬ್ಬರಾಗಿ ಹೊರ
ಟುಹೋದರು. ದಾಮಿನಿಯೂ ಕಣ್ಣೀರನ್ನೊರಸಿಕೊಂಡು, ಸಿಶ್ಯಬ್ದವಾಗಿ ಕುಳಿತಳು. ನೆರೆಕರೆಯ ಹೆಂಗಸರೆಲ್ಲರೂ ತಮ್ಮತಮ್ಮ ಮನೆಗೆಲಸಗಳನ್ನು ಮಾಡುವುದಕ್ಕಾಗಿ ಹೊರಟುಹೋದರು. ಅವರಲ್ಲಿ ದಾವಿಸಿಯ ಸಮವಸ್ಕಯಾದವಲೊಬ್ಬಳು ಮಾತ್ರ ಸ್ವಲ್ಪ ದೂರ ಹೋಗಿ ನಿಂತಿದ್ದಳು. ರಮೇಶನ ಮಲತಾಯಿಯ ಮೊದಲಿ ನಂತೆಯೆ ಬಾಗಿಲನ್ನು ಹಾಕಿಕೊಂಡು ಹೊರಟುಹೊದ ಮೇಲೆ, ಅವಳು ದಾಮಿನಿಯ ಹತ್ತಿರ ಒಂದು- “ಒಮ್ಮೆ ಎದ್ದು ಬಾರೆ! ಅಮ್ಮ - ಎಂದಳು. “ನಾನಿನ್ನಲ್ಲಿ ಗೂ ಬರುವದಿಲ್ಲ; ಎಲ್ಲಿಗೆ ಹೋಗುವೆನೆಂದರೂ, ಈಗ ನನಗೆ ಸ್ಥಳವಿಲ್ಲ; ಆರೂ ಇನ್ನು ನನಗೆ ಆಶ್ರಯಕೊಡವರಿಲ್ಲ” ಎಂದು ದಾಮಿನಿಯು ಕಂಬನಿಯುಂಜಿದಳು.
ಸಮವಯಸ್ಕಯು, ಕೇಳಿದಳು:- “ಹಾಗಾದರೆ ಏನು? ಇಲ್ಲಿಯೆ ಇದ್ದು
ಸಾಯುವೆಯಾ ?"
ದಾಮಿನಿಯು ಉತ್ತರಕೊಟ್ಟಳು." ಇಲ್ಲಿಯೆ ಸಾಯುತ್ತೇನೆ. ನನಗೆ ಇ
ನ್ನು ಸ್ಥಳವೆಲ್ಲಿದೆ? ಅವರು ನನ್ನನ್ನು ಇಲ್ಲಿಯೆ ಬಿಟ್ಟು ಹೋಗಿದ್ದಾರೆ; ನಾನಿಲ್ಲಿಯೇ ಇರುತ್ತೆನೆ. ಎಷ್ಟು ದಿನಗಳ ಪರ್ಯಂತವಾಗಿ ಅವರಿಲ್ಲಿಗೆ ಬರುವುದಿಲ್ಲವೋ ಅಷ್ಟು ದಿನಗಳು ಏನಾದರೂ ಮಾಡಿ ಕೂಡಿದರೆ, ಬದುಕಿರುತ್ತೇನೆ. ಅವರನ್ನು ನೋಡದೆಯೆ ಸಾಯುವುದಕ್ಕೆ ಮಾರ್ಗವಿಲ್ಲ?' -
ದಾಮಿನಿಯು ನಿಶ್ಯಬ್ದವಾಗಿ ಅಳತೊಡಗಿದಳು.
ಸಮವಯಸ್ಕೆಯು ಹೇಳಿದಳು:- “ಇನ್ನೆಲ್ಲಿಗೂ ಹೋಗಬೇಡವಮ್ಮ! ಈ
ಮರದಡಿಯಲ್ಲಿಯಾದರೂ ಬಂದು ಕುಳಿತುಕೊ ಬಿಸಿಲು ಸಹಿಸುವುದಕ್ಕಾಗುವುದಿಲ್ಲ. ನನಗೂ ಇನ್ನು ಇಲ್ಲಿರಲಾಗುವುದಿಲ್ಲ.”
ಮೆಲ್ಲ ಮೆಲ್ಲನೆ ದಾಮಿನಿಯು:- ಅಮ್ಮ ಮನೆಗೆ ಹೋಗು. ನಿನಗೆ ಮನೆ
---ಯಿದೆ. ಮನೆಯಲ್ಲಿ ನಿನ್ನನ್ನು ನೋಡದಿದ್ದರೆ, ನಿಮ್ಮ ತಾಯಿಕಳವಳಪಡುವಳು.


* ಹೆಂಗಸರು ಗಂಡಂದಿರ ಹೆಸರನ್ನು ಹೇಳುವುದಿಲ್ಲ.
21
ದಾಮಿನಿ.

ಅದರಲ್ಲಿಯೂ ವೃದ್ಧ; ಪಾಪ! ಬಿಸಿಲಲ್ಲಿ ನಿನ್ನನ್ನು ಹುಡುಕಿಕೊಂಡು ಬರುವುದಕ್ಕೆ
ಸಾಕು!"- ಎಂದಳು.
ಸಮವಯ‌‌‌‌ಸ್ಕೆಯು ಮನೆಗೆ ಹೋದಳು; ಆದರೆ, ಅವಳು ಬಹುಕಾಲ ಅಲ್ಲಿ
ರುವದಕ್ಕೆ ಆಗದೆ ಹೋಯಿತು. ಅಪರಾಹ್ನವಾಗುವುದರೊಳಗಾಗಿಯೆ, ಪುನಃ ಅದಿ ತಿಭಟ್ಟಾಚಾರ್ಯನ ಮನೆಯ ಹಿಂಗಡೆ ಬಂದು ನಿಂದಳು. ನೋಡಿದಳು; ದಾಮಿನಿಯು ಮೊದಲಂತೆಯೇ ಒಬ್ಬಳೆ ಮರದಡಿಯಲ್ಲಿ ಕುಳಿತು ಅನ್ಯಮನಸ್ಕ ಒಂದು ಹಕ್ಕಿಯನ್ನು ದೃಷ್ಟಿಸಿ ನೋಡುತ್ತಿದ್ದಳು. ಈಗಲವಳ ಕಣ್ಣುಗಳಲ್ಲಿ ನೀರಿರಲಿಲ್ಲ.
ಪ್ರತಿವಾಸಿನಿಯು ಮೆಲ್ಲಮೆಲ್ಲನೆ ದಾಮಿನಿಯ ಹತ್ತಿರ ಬಂದು, ಕುಳಿತುಕೊಂ
ಡಳು. ಕೊಂಚ ಕಾಲದ ವರೆಗೂ, ಇಬ್ಬರೂ ಮಾತನಾಡಲಿಲ್ಲ. ಅನಂತರ ದಾಮಿನಿಯು-" ಈ ರಾತ್ರಿಯೇ ಅವರು ಬಂದುಬಿಟ್ಟಗೆ?" -- ಎಂದಳು.
ಪ್ರತಿವಾಸಿನಿ:--“ಆರು? ನಿನ್ರ ಗಂಡನೆ? ಅವನು ಬಂದರೆ ಒಳ್ಳೆದೇ ಆಯಿತು.
ಒಳ್ಳಿದೋ, ಕೆಟ್ಟುದೋ, ಏನಾದರೊಂದು ಇತ್ಯರ್ಥವಾಗಿಹೋಗುವುದು.”
ದಾಮಿನಿ:- “ ಅವರು ಬಂದೂ, ಅರ್ಧಮಾರ್ಗದಲ್ಲಿಯೇ ಹೊರಟು ಹೋದರೆ?”
ಪ್ರತಿವಾಸಿನಿ:- ಅದೇನು? ಹೇಗಾದೀತು?
ದಾಮಿನಿ:- “ಆಗದೆ ಏನು? ದಾರಿಯಲ್ಲಿ ಅವರಿಗೆ ಆರೂ ಆವ ವೃತ್ತಾಂತವ ನ್ಯೂ ತಿಳಿಹದಿದ್ದರೆ? ಅಮ್ಮ! ಅವರೂ ನನ್ನನ್ನು ಬಿಟ್ಟು ಬಿಟ್ಟಾರೇ ಏನು?”
ಪ್ರತಿವಾಸಿನಿ: “ಆರಿಗೆ ಗೊತ್ತಮ್ಮ! ಗಂಡುಸರ ಮನಸ್ಸು ಆವಾಗ ಹೇಗೆ ಇರು
ವುದೆಂದು ಆರು ಹೇಳಬಲ್ಲರು?
ದಾಮಿನಿ:- “ ಅವರು ನನ್ನನ್ನು ಎಷ್ಟೊಂದು ಪ್ರೀತಿಸುವರು! ನನಳುವುದನ್ನು
ನೋಡಿದರೆ, ತಾವೂ ಅಳುವರು; ನನ್ನನ್ನು ನೋಡುನೋಡುತ್ತ, ಅಳುವರು.ನನ್ನ ನ್ನು ನೋಡುವುದೆಂದರೆ, ಅವರಿಗೆ ಎಷ್ಟು ಆಸೆ! ನೋಡುವ ನಿಮಿತ್ತವಾಗಿದೆ ಎಷ್ಟೊಂದು ಹಠಮಾಡಿ, ನನ್ನ ಹತ್ತಿರ ಬಂದು ಕುಳಿತುಕೊಳ್ಳುವರು! ಎಷ್ಟು ಬಾರಿ, ಎಷ್ಟು ಕಡೆಗಳಲ್ಲಿ ಕುಳಿತು ನೋಡುವರು! ಪುನಃ ನನ್ನ ಹಣೆಯಲ್ಲಿ ಕಯ್ಯನ್ನಿಟ್ಟು ನೋಡುವರು;ಗಲ್ಲಗಳನ್ನು ಹಿಡಿದು ನೋಡುವರು; ತುಟಿಗಳನ್ನು ಮುಟ್ಟಿ ನೋಡುವರು. ಎಷ್ಟು ನೋಡಿದರೂ ಅವರಿಗೆ ತೃಪ್ತಿಯಿಲ್ಲ. ರಾತ್ರಿಯ ವೇಳೆ ಎಚ್ಚರವಾದಾಗಲೆಲ್ಲ ಎದ್ದು ನನ್ನ ಮುಖದ ಕಡೆಗೆ ದೃಷ್ಟಿಸಿ ನೋಡುತ್ತಲೇ ಇರುವರು. ಆದರೆ ನಾನು ಈ ಹಾಳ ಕಣ್ಣುಗಳನ್ನು ಮುಚ್ಚಿಕೊಂಡೇ ನಿದ್ದೆ ಮಾಡುತ್ತಿರುವೆನು?” ಹೇಳುಹೇಳುತ್ತ, ದಾಮಿನಿಯ ಕಣ್ಣಗಳಲ್ಲ ನೀರು ತುಂಬಿತು. ದಾಮಿನಿ
ಯು ಅಳತೊಡಗಿದಳು. ಪ್ರತಿವಾಸಿನಿಯು-“ಅಮ್ಮ!ಸಂಜೆಯಾಯಿತು. ಈ
ರಾತ್ರಿಯನ್ನು ಹೇಗಮ್ಮ' -- ಕಳೆಯುವೆ? ಎಲ್ಲಿ ಮಲಗುವೆ?”...ಎಂದಳು. ದಾಮಿ
ನಿಯು ಪ್ರಥಮತ:- “ಆರಿಗೆ ಗೊತ್ತಮ್ಮ?” ಎಂದು ಹೇಳಿ, ಉತ್ತರಕೃಣದಲ್ಲಿಯೆ
- “ ಇಲ್ಲಿಯೇ ಇರುವೆನು. ನನಗಿನ್ನಲ್ಲಿ ಸ್ಥಳವಿದೆ?” ಎಂದಳು.
ಪ್ರತಿವಾಸಿನಿಯು ನಡುಗಿದಳು, ಹೇಳಿದಳು:- ಅಮ್ಮ! ಅದೇನು -ಹೆಂಗು
ಸರಿಗೆ ಸಾಧ್ಯವೆ? ಈ ಕತ್ತಲೆಯಲ್ಲಿ ವನಮಧ್ಯದಲ್ಲಿ ಒಂಟಿಗನಾಗಿ ಆವ ಗಂಡು
ಸಾದರೂ ಇರಲಾರದು. ಹಾಗೆಂದ ಮೇಲೆ, ನೀನೊಬ್ಬಳೇ ಇಲ್ಲಿ ಹೇಗೆ ಇರಬಲ್ಲೆ?
ರಾತ್ರಿಯ ವೇಳೆಯಲ್ಲಿ - ಮನೆಯೊಳಗೆ ಬೇಡವಮ್ಮ! ಮನೆಯ ಹೊರಗಿನ ಆವು
ದಾದರು ಒಂದು ಚಾವಡಿಯಲ್ಲಿಯಾದರೂ ನಿಮ್ಮ ಅತ್ತೆಮಾವಂದಿರು ಸ್ಥಳವನ್ನು
ಕೊಡಲಾರರೆ? ಅಗತ್ಯವಾಗಿಯೂ ಕೊಟ್ಟಾರು!”ಎಂದಳು,
ದಾಮಿನಿಯೂ ಅದೇ ಆಸೆಯನ್ನು ಮಾಡಿಕೊಂಡಿದ್ದಳು, ನಿಜವಾಗಿಯೂ
ಅವಳು ನಿಶ್ಬಯಮಡಿಕೋಂಡಿದಳೆನೆಂದರೆ, ರಾತ್ರಿಯಲ್ಲಿ ಯಾರಾದರೂ ತನ್ನ
ನ್ನು ಕರೆದುಕೊಂಡು ಹೋಗಬಹುದು' -ಎಂದು. ಆದರೆ, ರಾತ್ರಿಯಯಿತು;
ಪ್ರತಿವಾಸಿಯು ಹೊರಟುಹೋದಳು; ಇಷ್ಟಾದರೂ, ಆರೂ ತನ್ನನ್ನು ವಿಚಾರಿ
ಸಲಿಲ್ಲ. ಇದುವರೆಗೂ, ಮನೆಯ ಹಿಂಬಾಲಾದರೂ ತೆರೆಯಲ್ಪಟ್ಟಿತು;
ಈಗ ಅದೂ ಮುಟ್ಟಲ್ಪಟ್ಟಿತು.
ದಾಮಿನಿಯೊಬ್ಬಳೇ ಅಂಧಕಾರದಲ್ಲಿ ಕುಳಿತುಕೊಂಡಿದ್ದಳು. ರಾತ್ರಿಯೂ
ಕ್ರಮಕ್ರಮವಾಗಿಯೂ ಗಭಿರವಾಗುತ್ತ ಬಂದಿತು. ದರವಲ್ಲಿ ಅದಾವುದೋ
ಒಂದೆರಡು ದೀಪಗಳ ಬೆಳಕು ಕಾಣಬರುತ್ತಿದ್ದಿತು; ಆ ಬೀಜಗಳೂ ಒಂದೊಂದಾಗಿ
ನಂದಿಹೋದುವು. ಗ್ರಾಮವಾಸಿಗಳೆಲ್ಲರೂ ನಿಶ್ಚಿಂತರಾಗಿ ನಿದ್ದೆಹೋಗುತ್ತಿದ್ದರು;
ಆರಿಗೂ ದಾಸಿಯ ಯೋಚನೆಯೇ ಇಲ್ಲ. ಸಾನಿಯು ತನ್ನ ವಿಚಾರವನ್ನೇ
ಯೋಚಿಸತೊಡಗಿಳು, ಒಂದೊಂದು ಬಾರಿ ಭಯವೂ ಉಂಟಾಯಿತು; ಒಬ್ಬ
ಳೇ ಇರುವುದು ಅವಳಿಗೆ ಕಷ್ಟವಾಗಿ ತೋರತೊಡಗಿತ್ತು. ಒಂದು ಕಡೆ ದಿನವೆಲ್ಲ
ವೂ ಆಹಾರವಿಲ್ಲ; ಆಮೇಲೆ ಆದ್ಯಂತದಿನವೂ ಅಳುತ್ತಿದ್ದಳು. ಹೀಗೆ ಶ್ರಮದಿಂದ
ಅವಳ ದೇಹವು ದುರ್ಬಲವಾಗತೊಡಗಿತು. ದಾಮಿನಿಯು ಧೂಳಿಯಲ್ಲಿಯೇ
ಶಯನಮಾಡಿದಳು. ನಿದ್ದೆಯೂ ಬೇಗನೆ ಬಂದಿತು.
ಸ್ವಪ್ನದಲ್ಲಿಯೆ ಆಲಿಸಿದಳು;-ಆರೋ ತನ್ನನ್ನು “ ಅಮ್ಮಾ?” ಎಂದು ಕೂಗಿ
ಕರೆದರು. • ಅದಕ್ಕೆ ಸ್ವಪ್ನದಲ್ಲಿಯೇ ಅಮ್ಮಾ!' ಎಂದು ಉತ್ತರವಿತ್ತಳು. ಸ್ವಪ್ನ
ದಲ್ಲಿಯೇ ಬೋಧೆಯುಂಟಾಯಿತು; ಅವಳ ಅಮ್ಮನು ಹೇಳುತ್ತಿದ್ದಾಳೆ: -ಎಳ
ಮ್ಮ! ಈ ಮನೆಯಲ್ಲಿ ಇನ್ನು ಏನಿದೆ? - ಎಂದು.
ಮರುದಿನ ಬೆಳಗ್ಗೆ ಎದ್ದವರಾರೂ ಪುನಃ ದಾಮಿನಿಯನ್ನು ನೋಡಲಿಲ್ಲ.

ಷಷ್ಠಪರಿಚ್ಛೇದ

ಹತ್ತು ಹನ್ನೆರಡು ದಿನಗಳ ಮೇಲೆ, ರಮೇಶನು ಮನೆಗೆ ಬಂದು, ಎಲ್ಲ ವೃತ್ತಾಂತಗಳನ್ನೂ ಕೇಳಿದನು. ತಂದೆಯನ್ನೆನೂ ಎನ್ನಲಿಲ್ಲ; ಮಲತಾಯಿಯ ಮೇಲೆ ದೋಷವನ್ನೂ ಆರೋಪಿಸಲಿಲ್ಲ: ಆರಿಗೂ ಏನನ್ನೂ ಹೇಳದೆ, ಮನೆಯಿಂದ ಹೊರಗೆ ಹೊರಟನು. ಊರೂರುಗಳಲ್ಲಿಯೂ ಕೇರಿಕೇರಿಗಳಲ್ಲಿಯೂ ಆರೇಳು ದಿನಗಳು ಸುಮ್ಮನೆ ಸುತ್ತಿದನು; ಎಲ್ಲಿಯೂ ದಾಮಿನಿಯ ಸಮಾಚಾರವು ಗೊತ್ತಾಗಲಿಲ್ಲ. ಕೊನೆಗೆ, ಒಂದು ದಿನ ಉಷಃಕಾಲದಲ್ಲಿ ವಿಷಣ್ಣ ಭಾವದಿಂದ ಹಿಂದಿರುಗಿ ಮನೆಯ ಕಡೆಗೆ ಬರುತ್ತಿದ್ದನು. ನದೀತೀರದಲ್ಲಿ ಮುರುಕುಮಳಿಗೆಯೊಂದನ್ನು ನೋಡಿ, ಅಲ್ಲಿ ನಿಂದನು. ಆ ಮುರುಕುಮಾಳಿಗೆಯೊಡನೆ ತನ್ನ ಅವಸ್ಥೆಯನ್ನು ಹೋಲಿಸಿನೋಡಿದನು. ನಾಳಿಗೆಯ ಮಾತೆಲ್ಲವೂ ಮುಂದೆ ಬಿದ್ದಿದೆ. ಅಲ್ಲಿಯಲ್ಲಿ ಅಕ್ಷತ, ನಟ, ಮೊದಲಾದ ವೃಕ್ಷಗಳು ತಮ್ಮತಮ್ಮ ಬೇರುಗಳನ್ನು ಗೋಡೆಯ ತುಂಬ ಬಿಟ್ಟುಕೊಂಡು, ಅಹಂಕಾರದೊಡನೆ ಆಂದೋಲನವಾಡುತ್ತಿವೆ. ದುರ್ಬಲವಾದ ಮಳಿಗೆಯು ಏಕಾಕಿಯಾಗಿ ನದೀತೀರದಲ್ಲಿದ್ದುಕೊಂಡು, ಅದೆಲ್ಲವನ್ನೂ ಸಹನಮಾಡುತ್ತಿದೆ.

ರಮೇಶನು ಮುಂಬರಿದು ಭಗ್ನಮಂದಿರದ ಬಾಗಿಲಲ್ಲಿ ಬಂದು ನಿಂದನು. ಬಾಗಿಲು ತೆರೆದಿದ್ದಿತು; ಮನೆಯೊಳಕ್ಕೆ ಪ್ರವೇಶಮಾಡಿದನು. ಅವನು ಸಮೀಪಕ್ಕೆ ಬಂದ ಶಬ್ದವನ್ನು ಕೇಳಿ, ಲೆಕ್ಕವಿಲ್ಲದ ಬಾವುಲಿ ಹಕ್ಕಿಗಳು ಆ ಅಂಧಕಾರದಲ್ಲಿ ಹಾರಾಡತೊಡಗಿದುವು. ನಂತರ ಕ್ರಮಕ್ರಮವಾಗಿ ಅವುಗಳ ಸದ್ದೂ ಅಡಗಿತು, ಗೃಹವು ಭಯಾನಕವಾಗಿಯೂ ಗಂಭೀರವಾಗಿಯೂ ತೋರಬಂದಿತು. ರಮೇಶನು ನಿಂದಲ್ಲಿಯೆ ನಿಂದುಬಿಟ್ಟನು. ಉತ್ತರಕ್ಷಣದಲ್ಲಿಯೇ ಕೋಣೆಯೊಳಗಿಂದ ಮನುಷ್ಯ ಕಂಠದಿಂದ ಹೊರಟ ಮೃದುಶಬ್ದವೊಂದು ಕೇಳಬಂದಿತು. ರಮೇಶನ ಮೈಯೆಲ್ಲವೂ ರೋಮಾಂಚಿತವಾಯ್ತು. ಮೆಲ್ಲ ಮೆಲ್ಲನೆ ಅವಧಾನದಿಂದ, ನಿಶ್ಯಬ್ದವಾಗಿ ಆ ಸ್ವರವು ಕೇಳಬಂದ ಕಡೆಗೆ ಹೋದನು. ಅಸ್ಪಷ್ಟವಾದ ಬೆಳ್ದಿಂಗಳ ಬೆಳಕಿನಲ್ಲಿ ನೋಡಿದನು--ಆವುದೊ ಒಂದು ರೋಗಗ್ರಸ್ತವಾದ ಮನುಷಶರೀರವು ಮೃತ್ಯುಶಯ್ಯೆಯ ಮೇಲೆ ಮಲಗಿಬಿಟ್ಟದೆ.

ರಮೇಶನು ಏನನ್ನೊ ಭಾವಿಸಿಕೊಂಡು ಅಳತೊಡಗಿದನು. ನರದೇಹವು ಜ್ಞಾನಹೀನವಾಗಿರಲಿಲ್ಲ. ಅದರ ಕಂಠಸ್ವರವು ಮಾತ್ರ ಸ್ವಲ್ಪ ಸ್ವಲ್ಪವಾಗಿ ಕಡಮೆ ಯಾಗುತ್ತ ಬರುತ್ತಿದ್ದಿತು. ಕ್ಷೀಣವಾದ ಆ ಕಂಠಸ್ವರದಿಂದ ಈ ಪರಿಯಾಗಿ ಹೇಳುತ್ತಿದ್ದಿತು:- ಅಲ್ವಾ: ಬಂದೆಯ? ಕುಳಿತುಕೊ: ಇನ್ನು ವಿಳಂಬಮಾಡುವುದಿಲ್ಲ. ಕೇವಲ ಒಂದು ಬಾರಿ ಮಾತ್ರ ಆ ನನ್ನ ರಮೇಶನನ್ನು ನೋಡಿ ಬರುತ್ತೇನೆ.” ರಮೇಶನು ಚೇತಾರಮಾಡುತ್ಯ- “ದಾಮಿನಿ! ದಾಮಿನಿ! ನಾನು ಬಂದಿ ದ್ದೇನೆ; ಇನ್ನೆಂದಿಗೂ ನಿನ್ನನ್ನು ಬಿಟ್ಟಿರುವುದಿಲ್ಲ!” ಎಂದು ಹೇಳಿ,ಅಳತೊಡಗಿದನು.

ದಾಮಿನಿಯಾವ ಉತ್ತರವನ್ನೂ ಕೊಡಲಿಲ್ಲ. ರಮೇಶನು ನೆಲದ ಮೇಲೆ. ಬಿದ್ದು ಹೊರಳಾಡುತ್ತೆ, ಚೀತ್ಕಾರಮಾಡತ್ತೊಡಗಿದನು “ಈ ಬಾರಿ ಮಾತನಾಡು. ನಿನ್ನ ಆ ಮಾತುಕತೆಗಳನ್ನು ಎಷ್ಟೋ ದಿನಗಳಿಂದ ಕೇಳಲಿಲ್ಲ; ದಾಮಿನಿ! ಈ ಬಾರಿಯಾದರೂ ಮಾತನಾಡು!” ಎಂದು ಗೋಳಿಡತೊಡಗಿದನು. ಆಗಲೂ ಉತ್ತರ ವಿಲ್ಲ;-~ ಎಲ್ಲವೂ ನಿಶ್ಯಬ್ದ 1 ರಮೇಶನಿಗೆ ಸ್ವಲ್ಪ ಮಾತ್ರ ಏನೋ ಗೊತ್ತಾಯಿತು. ರುದ್ಧಶ್ವಾಸದಿಂದ ಹಳ್ಳಿಗೆ ಓಡಿ, ದೀಪವನ್ನುರಿಸಲು ಬೇಕಾದ ಸಾಮಗ್ರಿಗಳನ್ನು ತೆಗೆದುಕೊಂಡು ಬಂದು, ದೀವಿಗೆಯನ್ನು ಹಚ್ಚಿದನು. ಬೆಳಕಿನಲ್ಲಿ ನೋಡಿದನು; ಅಲ್ಲಿಯೆ ಇನ್ಯಾರೋ ವೃದ್ಧೆಯೊಬ್ಬಳು ಕುಳಿತುಕೊಂಡು, ದಾಮಿನಿಯ ಮುಖವನ್ನು ನಟ್ಟ ದೃಷ್ಟಿಯಿಂದ ನೋಡುತ್ತಿದ್ದಳು. ದಾಮಿನಿಯು ಈ ಜನ್ಮದಲ್ಲಿ ಕಣ್ಣು ಮುಚ್ಛಿದ್ದಳು.

ರಮೇಶನನ್ನು ನೋಡಿ, ವೃದ್ದೆಯು ನಕ್ಕಳು. ಭಯಂಕರವಾದ ಆ ನಗೆಯನ್ನು ನೋಡಿ, ರಮೇಶನ ಮೆಯ್ಯು ರೋಮಂಚಿತವಾಯ್ತು! ವೃದ್ದೆಯು ಎದ್ದಳು. ಎದ್ದು ನಿಂದು, ರಮೆಶನ ಮುಖವನ್ನು ಏಕದೃಷ್ಟಿಯಿಂದ ನೋಡತೊಡಗಿದಳು, ರಮೇಶನು ಗುರುತಿಸಿದನು;– ಅವಳೇ ಆ ಪೂರ್ವಪರಿಚಿತೆಯಾದ ಉನ್ಮಾದಿನಿ!

ಉನ್ಮಾದಿನಿಯು ಒಂದು ಬಾರಿ ತುಟಿಯ ಮೇಲೆ ಬೆರಳನ್ನಿಟ್ಟು,- “ಸುಮ್ಮನಿರು! ಶಬ್ದ ಮಾಡಬೇಡ. ನನ್ನ ದಾಮಿನಿಯು ನಿದ್ದೆ ಮಾಡುತ್ತಿದ್ದಾಳೆ;-ನಿದ್ದೆ ಮಾಡುತಿದ್ದಾಳೆ!” – ಎಂದಳು, ಒಡನೆಯೆ, ಮತ್ತೊಂದು ಬಾರಿ ವಿಕಟವಾದ ನಗುವನ್ನು ನಕ್ಕು, ರಮೇಶನ ಮೇಲೆ ಬಿದ್ದು, ಅವನ ಕೊರಲನ್ನು ವಜ್ರಾಯುಧದಂತೆ ಗಟ್ಟಿಯಾಗಿ ಒತ್ತಿ ಹಿಡಿದು – “ಗೊತ್ತಾಯಿತು. ನೀನೇ ರಮೇಶನು. ನಿನ್ನ ದೆಸೆಯಿಂದ ಲೇ ನನ್ನ ದಾಮಿನಿಯು ಮರಣಪಟ್ಟುದು!” - ಎಂದಳು. ರಮೇಶನಿಗೆ ಶ್ವಾಸರೋಧವಾಯ್ತು; ಕಣ್ಣ ನರಗಳೆಲ್ಲವೂ ಮೇಲಕ್ಕೆ ಉಬ್ಬಿದುವು. ಅವನಿಗೆ ಮಾತಿಲ್ಲ; ಶಕ್ತಿಯಿಲ್ಲ. ಕೊನೆಗೆ ಅವಸನ್ನನಾಗಿ ದಾಮಿನಿಯ ಬಳಿಯಲ್ಲಿಯೆ ಬಿದ್ದುಬಿಟ್ಟನು, ಹುಚ್ಚಿಯು ಮತ್ತೊಮ್ಮೆ ರಮೇಶನ ಕತ್ತನ್ನು ಒತ್ತಿ ಹಿಡಿದಳು. ಈ ಬಾರಿಗೆ ಎಲ್ಲವೂ ಮುಗಿಯಿತು!


"https://kn.wikisource.org/w/index.php?title=ದಾಮಿನಿ&oldid=233948" ಇಂದ ಪಡೆಯಲ್ಪಟ್ಟಿದೆ