ದಾಸಪ್ರಸಾದವ ದಾಸಿಮಯ್ಯಗಳು ಕೊಂಡರು,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ದಾಸಪ್ರಸಾದವ ದಾಸಿಮಯ್ಯಗಳು ಕೊಂಡರು
ಪ್ರಾಣಪ್ರಸಾದವ ಸಿರಿಯಾಳ ಕೊಂಡ
ಸಮತೆಪ್ರಸಾದವ ಬಲ್ಲಾಳ ಕೊಂಡ
ಜಂಗಮಪ್ರಸಾದವ ಬಸವಣ್ಣ ಕೊಂಡ
ಸಮಯಪ್ರಸಾದವ ಬಿಬ್ಬ ಬಾಚಯ್ಯಗಳು ಕೊಂಡರು
ಜ್ಞಾನಪ್ರಸಾದವ ಅಕ್ಕಗಳು ಕೊಂಡರು
ಶೂನ್ಯಪ್ರಸಾದವ ಪ್ರಭುದೇವರು ಕೊಂಡರು. ಎನಗಿನ್ನೆಂತಯ್ಯಾ ? ಮುಳ್ಳಗುತ್ತೆ ತೆರಹಿಲ್ಲ. ಇದು ಕಾರಣ
ಕೂಡಲಚೆನ್ನಸಂಗನ ಶರಣರ ಒಕ್ಕು ಮಿಕ್ಕ ಪ್ರಸಾದವೆನಗಾಯಿತ್ತು.