ದಾಸ ಸಾಹಿತ್ಯ/ಪ್ರಸನ್ನ ಶ್ರೀನಿವಾಸದಾಸರು

ವಿಕಿಸೋರ್ಸ್ ಇಂದ
Jump to navigation Jump to search

ಪ್ರಸನ್ನ ಶ್ರೀನಿವಾಸದಾಸರು ಪ್ರಸನ್ನ ಶ್ರೀನಿವಾಸದಾಸರು

ಅಂಕಿತ ಪದ (ಶ್ರೀ ಪ್ರಸನ್ನ ಭೂವರಾಹ)142ಶ್ರೀಶ ಪ್ರಸನ್ನ ಭೂವರಾಹ ಚಿನ್ಮಯದೇವ -ಬಿಸಜಜ ಸಮೀರಾದಿ ಸುರವೃಂದ ವಂದ್ಯ -ಬಿಸಜಜಾಂಡದ ದೊರೆ ಸಹಸ್ರನಾಮನೆ ದಯ -ದಿಂಸಲಹೋ ಜ್ಞಾನಾದಿ ಧನವಿತ್ತು ಇವನ ಪಶ್ರೀಧರನೆ ಸುಖಮಯನೆ ಭೂಧರನೆ ಭೀತಿಹರವೇಧಮನುವಿಗೆ ಒಲಿದ ಶ್ವೇತವರಾಹ |
ದಿತಿಜಹರ ವಸೂಮತೀಯ ಉದ್ಧರಿಸಿ ಕಾಯ್ದಿಯೋನೀದಯದಿ ಸುಮತಿಯನು ಇತ್ತು ಪಾಲಿಪುದು 1ಕಾಲಗುಣಕರ್ಮನಿಮಿತ್ತ ಬಂದಿಹ ಇವನಬಲವಂತ ಕಷ್ಟಗಳ ಉಪಶಮಿಸಿ ಇವನಿಂ |
ಒಳ್ಳೇಸಾಧನ ಮಾಡಿಸುವದು ನೀಕೃಪೆಯಿಂದ |
ಬಾಲೇಂದುಧರವಿನುತಭಕ್ತವತ್ಸಲ2ಭೂಮ ಉರುಗುಣ ಪೂರ್ಣನಿರ್ದೋಷಶ್ರೀರಮಣಶ್ಯಾಮ ವರ್ಣನೆ ಚಕ್ರ ಶಂಖ ಭೂಧರನೆ |
ಕಾಮಪಿತ ವೇಧಪಿತ ಭೂವರಾಹ ನಮೋ |
ನಮೋ ಶ್ರೀ ಪ್ರಸನ್ನ ಶ್ರೀನಿವಾಸ ಸಲಹೆಮ್ಮ

ಅಂಗನಾಕುಲ ಶಿರೋಮಣಿ ಶ್ರೀಮಾ |
ಶೃಂಗಾರವನಧಿಗರುಡಧ್ವಜೆಮಂಗಳಾದೇವಿ ಹಸೆಗೇಳು ಪಕ್ಷೀರಸಾಗರಕನ್ಯಾವಿಧಿ|
ಮಾರಾಂತಕ ಶಕ್ರಕರಾರ್ಚಿತೆ |
ವಾರಿಜಸದನೆ ಸಿರಿದೇವಿ |
ಸಿರಿದೇವಿ ತ್ರೈಲೋಕಕೆ ಜನನೀ ರಕ್ಕಸಾರಿ ಹಸೆಗೇಳು 1ಭಾರತಿಪಾರ್ವತಿ ಶಾಮಲ ಮುಖ |
ನೂರು ಸುರರರಸಿಯರೆಲ್ಲರು |
ಮೀರಿಧರುಷದಲಿ ಪದಪಾಡಿ |
ಹಸೆಯಬರೆದಿಹರೆಲೆ ನಾರಾಯಣನ ರಾಣೀ |
ಹಸೆಗೇಳು 2ಋಷಿಗಳು ವೇದ ಪುರಾಣಗಳುಪ |
ನಿಷದ್ವಾಕ್ಯಗಳಿಂದ ತುತಿಸುವರು |
ವಸುಧೆಗಾನಂದ ಪಡಿಸಲು |
ಶುಭಕುಂದರದನೆಆಸಿತಕುಂತಲೆಯೇ ಹಸೆಗೇಳು 3ಕಡೆಗಣ್ಣಿನ ನೋಟದಿ ಲೋಕವ |
ತಡೆಯದೆ ಪುಟ್ಟಿಸಿ ಪಾಲಿಸಿ ಪುನಃ |
ಕೆಡಿಸುವೆ ಸ್ವೇಚ್ಛೆಯಲಿ ವೈದರ್ಭೆ ಸತ್ರಾಜಿತೆಕೃತಿ|
ಯೊಡತಿ ಜಯಮಾಯಾ ಹಸೆಗೇಳು 4ಪ್ರಾಣೇಶ ವಿಠಲನೊಳು ದ್ವೇಷಿಪ |
ಹೀನರ ಸಂಹರಕೋಸುಗ ಶರ |
ಪಾಣಿಯಾಗಿಹಳೆಶ್ರುತಿವೇದ್ಯೆ |
ಶ್ರುತಿವೇದ್ಯೆ ದೇವದೇವಿಕಅಹಿವೇಣಿಶುಕವಾಣಿ |
ಹಸೆಗೇಳು 5