ದೇವರದೇವ ಬಣ್ಣಿಸುತಿರ್ಪೆನಯ್ಯ, ಮಹಾಪ್ರಸಾದ

ವಿಕಿಸೋರ್ಸ್ ಇಂದ
Jump to navigation Jump to search



Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ದೇವರದೇವ ಮಹಾಪ್ರಸಾದ ತ್ರಿಕರಣಶುದ್ಧವಾಗಿ ಎನ್ನ ಭಾವದ ನಂಬಿಗೆಯ ಬಣ್ಣಿಸುತಿರ್ಪೆನಯ್ಯ
ಅವಧರಿಸಯ್ಯ ಸ್ವಾಮಿ. ಗುರುಲಿಂಗಜಂಗಮದ ಪರಮಪ್ರಸಾದವನು ಪರಬ್ರಹ್ಮವೆಂದು ನಂಬಿ ಪರಮಾನಂದದಿಂ ಕೈಕೊಂಡು ಪರಿಣಾಮ ತುಂಬಿ ಆರೋಗಣೆಯ ಮಾಡುವಾಗ
ಆ ಪ್ರಸಾದದಲ್ಲಿ ಉಪ್ಪು ಸಪ್ಪೆ ಹುಳಿ ಕಹಿ ಒಳಿತು ಹೊಲ್ಲ ಉಚ್ಚ ನೀಚವನರಸಿದೆನಾದಡೆ ನಿಮ್ಮಾಣೆಯಯ್ಯಾ. ಮುಂದಿರ್ದ ಶಿವಪ್ರಸಾದದ ಘನವ ಮರೆದು ಎನ್ನೊಡಲ ಕಕ್ಕುಲತೆಗೆ ಮನವೆಳಸಿದೆನಾದಡೆ ಅಖಂಡೇಶ್ವರಾ
ನಿಮ್ಮಾಣೆಯಯ್ಯಾ
ನಿಮ್ಮ ಪ್ರಮಥರಾಣೆಯಯ್ಯ.