ದೇವಲೋಕ ಮರ್ತ್ಯಲೋಕವೆಂಬುದು ಬೇರೆ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತುಂಟೆ ‍ಈ ಲೋಕದೊಳಗೆ ಮತ್ತೆ ಅನಂತಲೋಕ ‍‍ಶಿವಲೋಕ
ಶಿವಾಚಾರವಯ್ಯಾ. ‍‍‍ಶಿವಭಕ್ತನಿದ್ದಠಾವೆ ದೇವಲೋಕ
‍‍ಭಕ್ತನಂಗಳವೆ ವಾರಣಾಸಿ
ಕಾಯಕವೆ ಕೈಲಾಸ
ಇದು ಸತ್ಯ
ಕೂಡಲಸಂಗಮದೇವಾ.