ವಿಷಯಕ್ಕೆ ಹೋಗು

ದೇವ, ದೇವಾ ಬಿನ್ನಹ

ವಿಕಿಸೋರ್ಸ್ದಿಂದ
ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ದೇವ
ದೇವಾ ಬಿನ್ನಹ ಅವಧಾರು; ವಿಪ್ರ ಮೊದಲು
ಅಂತ್ಯಜ ಕಡೆಯಾಗಿ ಶಿವಭಕ್ತರಾದವರನೆಲ್ಲನೊಂದೆ ಎಂಬೆ. ಹಾರುವ ಮೊದಲು
ಶ್ವಪಚ ಕಡೆಯಾಗಿ ಭವಿಯಾದವರನೆಲ್ಲರನೊಂಬೆ ಎಂಬೆ. ಹೀಂಗೆಂದು ನಂಬೂದೆನ್ನ ಮನ. ಈ ನುಡಿದ ನುಡಿಯೊಳಗೆ ಎಳ್ಳ ಮೊನೆಯಷ್ಟು ಸಂದೇಹವುಳ್ಳಡೆ ಹಲುದೋರೆ ಮೂಗ ಕೊಯಿ
ಕೂಡಲಸಂಗಮದೇವಾ.