ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ದೇಹಭಾವವಳಿದಲ್ಲದೆ
ಜೀವಭಾವವಳಿಯದು.
ಜೀವಭಾವವಳಿದಲ್ಲದೆ
ಭಕ್ತಿಭಾವವಳವಡದು.
ಭಕ್ತಿಭಾವವಳವಟ್ಟಲ್ಲದೆ
ಅರಿವು
ತಲೆದೋರದು.
ಅರಿವು
ತಲೆದೋರಿದಲ್ಲದೆ
ಕುರುಹು
ನಷ್ಟವಾಗದು.
ಕುರುಹು
ನಷ್ಟವಾದಲ್ಲದೆ
ಮಾಯೆ
ಹಿಂಗದು.
ಇದು
ಕಾರಣ;_
ಕಾಯದ
ಜೀವದ
ಹೊಲಿಗೆಯ
ಅಳಿವ
ಭೇದವ
ತಿಳಿಯಬಲ್ಲಡೆ
ಗುಹೇಶ್ವರಲಿಂಗದ
ಅರಿವು
ಸಾಧ್ಯವಪ್ಪುದು
ಕಾಣಾ
ಸಿದ್ಧರಾಮಯ್ಯಾ.