ದ್ವಾದಶದಳ ಮಂಟಪದಲ್ಲಿ ರವಿ ಶಶಿ ಶಿಖಿಯ ಪೀಠದಲ್ಲಿ ಶಶಿವದನೆ ವಿಶ್ವತೋ ಮುಖವಾಗಿದ್ದಾಳೆ ನೋಡ. ಶಶಿಮುಖಿಯ ಸಂಗದಿಂದ ಪಶುಪತಿಯ ನೆರೆದು ವಿಶ್ವತೋಮುಖ ಪ್ರಸಾದಿಯಾಗಿರ್ದೆನು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.