ಧರೆಯಾಕಾಶ ಕೂಡಿ ಜಗವಾದಂತೆ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಧರೆಯಾಕಾಶ ಕೂಡಿ ಜಗವಾದಂತೆ
ಕಾಯ
ಜೀವ ಕೂಡಿ ಸಾವಯವಾದಂತೆ
ನಾದ ಬಿಂದು ಕೂಡಿ ಲಿಂಗವಾಯಿತ್ತು. ಅದೆಂತೆಂದಡೆ: ನಾದ ಬಿಂದು ಶಕ್ತಿ ರೂಪಾಗಿ
ಈ ಉಭಯ ಸಂಪುಟದಿಂದ ಲಿಂಗವಾಗಿ
ಅದು ಕಾಯ ಜೀವದಂತೆ ಕೂಡಿ ಏಕವಾದಲ್ಲಿ ಆ ಕಾಯದಿಂದ ಜೀವ ವಿಯೋಗವಾಗಿಹುದೇ ಗುಹೇಶ್ವರಾ ?