ಧರೆಯ ಮೇಗಣ ಹುಲ್ಲೆ,

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಧರೆಯ ಮೇಗಣ ಹುಲ್ಲೆ
ಚಂದ್ರಮನೊಳಗಣ ಎರಳೆ
ಕೂರ್ತಡೆ ಫಲವೇನೋ ಕೂಟವಿಲ್ಲದನ್ನಕ್ಕ ಇಂಬನರಿಯದ ಠಾವಿನಲ್ಲಿ ಕಣ್ಣೋಟವ ಮಾಡಿದಡೆ
ತುಂಬಿದ ತೊರೆಯ ನಡುವೆ ಮಾಮರ ಕಾತಂತೆ. ಚೆನ್ನಮಲ್ಲಿಕಾರ್ಜುನದೇವಾ
ದೂರದ ಸ್ನೇಹವಮಾಡಲು ಬಾರದ ಭವಕ್ಕೆ ಬಂದೆ.