ನಂದೀಶ್ವರ, ಭೃಂಗೀಶ್ವರ, ವೀರಭದ್ರ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನಂದೀಶ್ವರ
ಭೃಂಗೀಶ್ವರ
ವೀರಭದ್ರ
ದಾರುಕ
ರೇಣುಕ
ಶಂಖುಕರ್ಣ
ಗೋಕರ್ಣ
ಏಕಾಕ್ಷರ
ತ್ರಯಕ್ಷರ
ಪಂಚಾಕ್ಷರ
ಷಡಕ್ಷರ
ಸದಾಶಿವ
ಈಶ್ವರ
ಮಹೇಶ್ವರ
ರುದ್ರ
ಘಂಟಾಕರ್ಣ
ಗಜಕರ್ಣ
ಏಕಮುಖ
ದ್ವಿಮುಖ
ತ್ರಿಮುಖ
ಚತುರ್ಮುಖ
ಪಂಚಮುಖ
ಷಣ್ಮುಖ
ಶತಮುಖ
ಸಹಸ್ರಮುಖ ಮೊದಲಾದ ಗಣಾಧೀಶ್ವರರು ಇವರು
ನಿತ್ಯಪರಿಪೂರ್ಣವಹಂಥ ಪರಶಿವತತ್ವದಲ್ಲಿ ಜ್ಯೋತಿಯಿಂದ ಜ್ಯೋತಿ ಉದಿಸಿದಂತೆ ಉದಯಿಸಿದ ಶುದ್ಧ ಚಿದ್ರೂಪರಪ್ಪ ಪ್ರಮಥರು. ಅನಾದಿಮುಕ್ತರಲ್ಲ
ಅವಾಂತರಮುಕ್ತರೆಂಬ ನಾಯ ನಾಲಗೆಯ ಹದಿನೆಂಟು ಜಾತಿಯ ಕೆರಹಿನಟ್ಟಿಗೆ ಸರಿಯೆಂಬೆ. ಆ ಶ್ವಾನಜ್ಞಾನಿಗಳಪ್ಪವರ ಶೈವಪಶುಮತವಂತಿರಲಿ
ಅವರಾಗಮವಂತಿರಲಿ. ನಿಮ್ಮ ಶರಣರಿಗೆ
ನಿಮಗೆ
ಬೇರೆ ಮಾಡಿ ಸಂಕಲ್ಪಿಸಿ ನುಡಿವ ಅಜ್ಞಾನಿ ಹೊಲೆಯರ ಎನಗೊಮ್ಮೆ ತೋರದಿರಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.