ನಂಬುಗೆಗೆ
ಇಂಬಾಗದೆ
ನೈಷೆ*
ನೆಲೆಗೊಳ್ಳದು;
ನೈಷೆ*
ನೆಲೆಗೊಳ್ಳದೆ
ಎಚ್ಚರವಚ್ಚೊತ್ತದು;
ಎಚ್ಚರವಿಲ್ಲದೆ
ಅನುಭವವು
ಮನಂಗೊಳ್ಳದು;
ಅನುಭವವಿಲ್ಲದೆ
ಆನಂದವು
ತಲೆದೋರದು;
ಆನಂದವಿಲ್ಲದೆ
ಶಿವಲಿಂಗದಲ್ಲಿ
ಸಮರಸವಾಗದು.
ಇಂತೀ
ಆರು
ತೆರನಾದ
ಭಕ್ತಿಯ
ಗೊತ್ತನರಿದಡೆ.
ಭಕ್ತನೆಂಬೆನು
ಮಹೇಶ್ವರನೆಂಬೆನು_
ಇಲ್ಲದಿರ್ದಡೆ
ಶುದ್ಧಭವಿಯೆಂಬೆನು
ಕಾಣಾ
ಕೂಡಲಚೆನ್ನಸಂಗಮದೇವಾ.